ಕರಾವಳಿ

ಮಂಗಳೂರು ಪಾಲಿಕೆ ಆಯುಕ್ತರ ಕಚೇರಿಗೆ ಬೀದಿ ವ್ಯಾಪಾರಿಗಳಿಂದ ಮುತ್ತಿಗೆ,ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖ್ಯಸ್ಥ ಹೇಳಿದ್ದೇನು?

 ನ್ಯೂಸ್ ನಾಟೌಟ್ :ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರ ವಿತರಣೆ ಮಾಡದ ಹಿನ್ನೆಲೆ ಮಂಗಳೂರು  ಪಾಲಿಕೆ ಆಯುಕ್ತರ ಕಚೇರಿಗೆ ಇಂದು ಬೀದಿ ಬದಿ ವ್ಯಾಪಾರಿಗಳು ಮುತ್ತಿಗೆ ಹಾಕಿದ ಘಟನೆ ನಡೆದಿದೆ. ವರ್ಷ ಕಳೆದರೂ ಗುರುತಿನ ಚೀಟಿ ನೀಡದ ಪಾಲಿಕೆ ವಿರುದ್ಧ ವ್ಯಾಪಾರಸ್ಥರು ಅಸಮಾಧಾನವನ್ನು ಹೊರಹಾಕಿದರು.

ಗುರುತಿನ ಚೀಟಿ ಮುದ್ರಣಗೊಂಡಿದ್ದು, ಪಟ್ಟಣ ವ್ಯಾಪಾರ ಸಮಿತಿ ಅನುಮೋದನೆ ನೀಡಿದೆ. ಆದರೂ ಚೀಟಿಗಳನ್ನು ಪಾಲಿಕೆ ವಿತರಣೆ ಮಾಡಿಲ್ಲವೆಂದು ಆಕ್ರೊಶಭರಿತರಾದ ಬೀದಿ ಬದಿ ವ್ಯಾಪಾರಿಗಳು ಈ ಹಿಂದೆ ಹಲವು ಬಾರಿ ಪಾಲಿಕೆ ಮುಂದೆ ಪ್ರತಿಭಟಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು.ಹೀಗಾಗಿ ಡಿವೈಎಫ್ಐ ನೇತೃತ್ವದಲ್ಲಿ ಬೀದಿಬದಿ ವ್ಯಾಪಾರಸ್ಥರು ದಿಢೀರ್​ ಮುತ್ತಿಗೆ ಹಾಕಿ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡುವಂತೆ ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖ್ಯಸ್ಥ ಇಮ್ತಿಯಾಜ್ “ಪಾಲಿಕೆ ವ್ಯಾಪ್ತಿಯಲ್ಲಿ 667 ಅಧಿಕೃತ ವ್ಯಾಪಾರಸ್ಥರಿದ್ದೇವೆ, ನ್ಯಾಯಯುತವಾಗಿ ಪಟ್ಟಣ ವ್ಯಾಪಾರ ಸಮಿತಿ ಪ್ರಮಾಣ ಪತ್ರ ನೀಡಬೇಕಿತ್ತು.ಆದರೆ ಇದುವರೆಗೂ ಪಟ್ಟಣ ಪಂಚಾಯತ್ ನಮಗೆ ಪ್ರಮಾಣ ಪತ್ರ ನೀಡಿಲ್ಲ.ರಾಜಕೀಯ ಒತ್ತಡವಿದ್ದ ಕಾರಣ ಪ್ರಮಾಣ ಪತ್ರವನ್ನ ತಡೆ ಹಿಡಿದ್ದಾರೆ.ಪ್ರತಿ ಬಾರಿ ಪ್ರತಿಭಟಿಸಿದಾಗ ಭರವಸೆ ಕೊಡ್ತಾರೆ ಬಿಟ್ರೆ ಕಾರ್ಯ ರೂಪಕ್ಕೆ ಬಂದಿಲ್ಲ.ಪ್ರಮಾಣ ಪತ್ರವಿಲ್ಲದ ಕಾರಣ ನಮ್ಮ ಮೇಲೆ ಟ್ರಾಫಿಕ್ ಪೊಲೀಸ್ ಇಲಾಖೆಯವರಿಂದ ದಬ್ಬಾಳಿಕೆ ನಡೆಯುತ್ತೆ.ಇಂದಿನ ನಮ್ಮ ಪ್ರತಿಭಟನೆಗೆ ಸ್ಪಂದಿಸಿರುವ ಪಾಲಿಕೆ ಕಮಿಷನರ್ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿದ್ದಾರೆ ಎಂದರು.

ಇದೆ 25 ನೇ ತಾರೀಕಿನ ಒಳಗೆ ಗುರುತಿನ ಚೀಟಿ ನೀಡುವ ಭರವಸೆ ನೀಡಿದ್ದಾರೆ.ಇಲ್ಲವಾದಲ್ಲಿ ಉಸ್ತುವಾರಿ ಸಚಿವರು ಪಾಲಿಕೆಗೆ ಭೇಟಿ ನೀಡಿದಾಗ ಪುನಃ ಮುತ್ತಿಗೆ ಹಾಕುತ್ತೇವೆ.ನವೆಂಬರ್ 1 ರಾಜ್ಯೋತ್ಸವದಂದು ಮುತ್ತಿಗೆ ಹಾಕಿ ಕಪ್ಪು ಬಾವುಟ ಹಿಡಿಯುತ್ತೇವೆ.

ಇವತ್ತು ನಾವು ಹೋರಾಟವನ್ನ ಹಿಂಪಡೆದಿಲ್ಲ.ನಮ್ಮ ಬೇಡಿಕೆ ಈಡೇರದಿದ್ದರೆ ಇದು ಮುಂದಿನ ಹೋರಾಟದ ಸಿದ್ಧತೆಯಾಗಿರುತ್ತೆ.ಮುಂದಿನ ಹೋರಾಟಕ್ಕೆ ಅವಕಾಶ ಮಾಡಿಕೊಡಬೇಡಿ.ಸದ್ಯ ಇದು ಮಂಗಳೂರಿಗೆ ಸೀಮಿತವಾಗಿದೆ ರಾಜ್ಯಕ್ಕೆ ವಿಸ್ತರಿಸಲು ಅವಕಾಶ ಮಾಡಿಕೊಡಬೇಡಿ ಎಂದು ಬೀದಿ ಬದಿ ವ್ಯಾಪಾರಸ್ಥರ ಸಂಘದ ಮುಖ್ಯಸ್ಥ ಇಮ್ತಿಯಾಜ್ ಹೇಳಿದರು.

ಸ್ಥಳಕ್ಕೆ ಆಗಮಿಸಿದ ಪಾಲಿಕೆ ಆಯುಕ್ತ ಆನಂದ್, ಈ ತಿಂಗಳ ಒಳಗೆ ಗುರುತಿನ ಚೀಟಿ, ಪ್ರಮಾಣ ಪತ್ರ ನೀಡುವ ಭರವಸೆಯನ್ನು ನೀಡಿದ್ದಾರೆ. 667 ಜನರಿಗೆ ಗುರುತಿನ ಚೀಟಿ, ಪ್ರಮಾಣಪತ್ರ ನೀಡಬೇಕಾಗಿದೆ. ಮೇಯರ್, ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ನೀಡುತ್ತೇವೆ. ಅ.೨೫ ರ ಒಳಗಡೆ ಕಾರ್ಯಕ್ರಮ ಆಯೋಜಿಸಿ ಐಡೆಂಟಿಟಿ ಕಾರ್ಡ್, ಪ್ರಮಾಣಪತ್ರ ವಿತರಣೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

Related posts

ಸುಳ್ಯ: ಬಿಜೆಪಿ ಮುಖಂಡ ಸೇರಿದಂತೆ 17 ಮಂದಿ ಆಪ್‌ ಪಕ್ಷಕ್ಕೆ ಸೇರ್ಪಡೆ

ಸುಳ್ಯದ ಪೊಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಗೆ ಮತ್ತೆ ವರ್ಗಾವಣೆ, ಸುಳ್ಯಕ್ಕೆ ಬಂದಿರುವ ಹೊಸ ಸರ್ಕಲ್ ಯಾರು..?

“ಗಂಜಿ – ಚಟ್ನಿ ತಿನ್ನಿ, ಪಾನ್ ಪರಾಗ್ – ಗುಟ್ಕಾ ತಿನ್ನಬೇಡಿ” ಆದಿದ್ರಾವಿಡ ಸಮ್ಮೇಳನದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಕರೆ