ಉಪ್ಪಿನಂಗಡಿಕರಾವಳಿಕ್ರೈಂದಕ್ಷಿಣ ಕನ್ನಡನೆಲ್ಯಾಡಿರಾಜ್ಯ

ದಕ್ಷಿಣ ಕನ್ನಡ: ರಾತ್ರಿ ಐರಾವತ ಹಾಗೂ ರಾಜಹಂಸ ಬಸ್‍ಗಳ ನಡುವೆ ಡಿಕ್ಕಿ..! ಹಳ್ಳಕ್ಕೆ ಬಿದ್ದ ಈಚರ್ ಲಾರಿ..!

ನ್ಯೂಸ್ ನಾಟೌಟ್ : ಈಚರ್ ಲಾರಿ ಹಾಗೂ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಐರಾವತ ಹಾಗೂ ರಾಜಹಂಸ ಬಸ್‍ಗಳ ನಡುವೆ ಸರಣಿ ಅಪಘಾತ ಸಂಭವಿಸಿ ಬಸ್ ಚಾಲಕ ಸಣ್ಣಪುಟ್ಟ ಗಾಯಗೊಂಡ ಘಟನೆ ಉಪ್ಪಿನಂಗಡಿಯ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಗುಂಡ್ಯ ಸಮೀಪ ಜೂ.29ರಂದು ರಾತ್ರಿ ನಡೆದಿದೆ.

ಕುಂದಾಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಐರಾವತ ಬಸ್ ಅನ್ನು ಮಂಗಳೂರಿನಿಂದ ಬೆಂಗಳೂರಿಗೆ ಪಾರ್ಸೆಲ್ ಸಾಗಾಟ ಮಾಡುತ್ತಿದ್ದ ಈಚರ್ ಲಾರಿಯು ಓವರ್ ಟೇಕ್ ಮಾಡುವ ಬರದಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ರಾಜಹಂಸ ಬಸ್ಸಿಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ರಾಜಹಂಸ ಬಸ್ ಹಾಗೂ ಐರಾವತ ಬಸ್ ನಡುವೆ ಕೂಡಾ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಐರಾವತ ಬಸ್ ಚಾಲಕ ಕಿರಣ್ ಮೇಸ್ತ ಎಂಬವರು ಗಾಯಗೊಂಡಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೊಲೀಸರು ಭೇಟಿ ನೀಡಿ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಿದರು.

Click 👇

https://newsnotout.com/2024/06/dengue-6-year-old-baby-nomre-health-care-kannada-news-chikkamagaluru
https://newsnotout.com/2024/06/shawarma-food-quality-and-bactiria-kannada-news-banning-shawarma
https://newsnotout.com/2024/06/school-sindhi-tamanna-bhatia-text-in-school-text-book-perents-opp
https://newsnotout.com/2024/06/actress-rakshita-met-darshan-in-jail-and-reaction-with-prem-kannada-news
https://newsnotout.com/2024/06/t20-cricket-lover-cm-siddaramayya-kannada-news-world-cup-won-by-india

Related posts

ಸುಳ್ಯ ಮುಖ್ಯ ಪೇಟೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪಿಕಪ್

ಪುತ್ತೂರು: ಬೀಡಿ ಬ್ರ್ಯಾಂಚ್ ಗೆ ತೆರಳುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

ಸೈನಿಕರು ಕರ್ತವ್ಯದ ವೇಳೆ ಆತ್ಮಹತ್ಯೆ ಮಾಡಿಕೊಂಡ್ರೆ ಅಂತ್ಯಕ್ರಿಯೆಯಲ್ಲಿ ಮಿಲಿಟರಿ ಗೌರವವಿಲ್ಲ..! ಏನಿದು ಭಾರತೀಯ ಸೇನೆಯ ಹೊಸ ನಿಯಮ?