ಕರಾವಳಿ

ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ:ಗಾಯಗೊಂಡಿದ್ದ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ನ್ಯೂಸ್ ನಾಟೌಟ್ : ಕಳೆದ 2 ತಿಂಗಳ ಹಿಂದೆ ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿ ಗಾಯಗೊಂಡಿದ್ದ ಅಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.ಮಂಗಳೂರಿನ ನಾಗುರಿಯಲ್ಲಿ ನ. 19ರಂದು ಆಟೋರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸಂಭವಿಸಿತ್ತು.

ಇನ್ನೂ ಒಂದು ತಿಂಗಳು ರೆಸ್ಟ್:

ಪುರುಷೋತ್ತಮ ಅವರು ಸೋಂಕಿನಿಂದ ರಕ್ಷಿಸಿಕೊಳ್ಳಲು ಇನ್ನೂ ಕನಿಷ್ಠ ಒಂದು ತಿಂಗಳ ಕಾಲ ಮನೆಯಲ್ಲೇ ಉಳಿದುಕೊಳ್ಳ ಬೇಕಾಗುತ್ತದೆ ಎಂದು ವೈದ್ಯರು ಸೂಚಿಸಿದ್ದಾರೆ. ಪುರುಷೋತ್ತಮ ಅವರ ಮನೆ ದುಃಸ್ಥಿತಿಯಲ್ಲಿದ್ದ ಹಿನ್ನೆಲೆಯಲ್ಲಿ ಅವರ ಗುರು ಬೆಳದಿಂಗಳು ಫೌಂಡೇಶನ್ ಮೂಲಕ ಕೈಗೊಳ್ಳಲಾಗಿದೆ. ಹೀಗಾಗಿ ಕುಟುಂಬ ಸದ್ಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

ಪುರುಷೋತ್ತಮರಿಗೆ ನೆರವು:

ವೈಯಕ್ತಿಕ ನೆಲೆಯಲ್ಲಿ ಗೃಹ ಸಚಿವರು 50,000 ರೂ. ಮತ್ತು ಸುನಿಲ್ ಕುಮಾರ್ 25,000 ರೂ. ನೆರವು ನೀಡಿದ್ದರು. ಪುರುಷೋತ್ತಮ ಅವರ ಚಿಕಿತ್ಸೆಯ ವೆಚ್ಚವನ್ನು ಇಎಸ್‌ಐ ಮತ್ತು ಸರಕಾರದ ವತಿಯಿಂದ ಭರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.ಆದರೆ ಪುರುಷೋತ್ತಮ ಅವರಿಗೆ ಸರಕಾರದ ಕಡೆಯಿಂದ ಪರಿಹಾರ ನೀಡುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದರು. ಆದರೆ ಪರಿಹಾರ ಇನ್ನಷ್ಟೇ ದೊರೆಯಬೇಕಿದೆ.

Related posts

ಪುಣ್ಯ ಕಾರ್ಯ ಮಾಡುವುದರಿಂದ ಜೀವನದಲ್ಲಿ ನೆಮ್ಮದಿ ಪ್ರಾಪ್ತಿ: ಮಾಜಿ ಸಚಿವ ಎಸ್‌. ಅಂಗಾರ

ಸುಳ್ಯ : ಪೈಚಾರು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನದಲ್ಲಿ ನೇಮೋತ್ಸವ ಸಂಭ್ರಮ

ಸುಳ್ಯ: ಬೇಂಗಮಲೆ ಬಳಿ ಸರಣಿ ಅಪಘಾತ, ಇನ್ನೋವಾ, ನೆಕ್ಸಾನ್ , ಟಿಪ್ಪರ್ ನಡುವೆ ಪರಸ್ಪರ ಅವಘಡ ಸಂಭವಿಸಿದ್ದು ಹೇಗೆ..?