ಕರಾವಳಿ

Belthangady: ಸಾವಿರಾರು ಕನಸು ಕಂಡಿದ್ದ ಪ್ರತಿಭಾವಂತ ಕಬಡ್ಡಿ ಆಟಗಾರನ ಬದುಕು ದುರಂತ ಅಂತ್ಯ ಕಂಡಿದ್ದು ಹೇಗೆ..? ಕಣ್ಣೀರಾದ ಸ್ನೇಹಿತ ವರ್ಗ

ನ್ಯೂಸ್ ನಾಟೌಟ್ : ಕ್ರೀಡೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಪ್ರತಿಭಾವಂತ ಕಬಡ್ಡಿ ಆಟಗಾರನ ಬದುಕು ದುರಂತ ಅಂತ್ಯವಾಗಿದೆ. ಧರ್ಮಸ್ಥಳ ಗ್ರಾಮ ಸಮೀಪದ ಪುದುವೆಟ್ಟು ಕುಬಲ ನಿವಾಸಿ ಸ್ವರಾಜ್ (24) ಕಣ್ಣು ಮುಚ್ಚಿದ ಯುವಕ.

ಆ.31 ರಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಇವರು ಪ್ರಸ್ತುತ ಧರ್ಮಸ್ಥಳ ಗ್ರಾಮದಲ್ಲಿ ವಾಸವಾಗಿದ್ದು ಇವರ ಹಳೆಮನೆಯಾದ ಪುದುವೆಟ್ಟುವಿನಲ್ಲಿ ಸ್ನಾನ ಮಾಡುವ ಕೊಠಡಿಯಲ್ಲಿ ಹಗ್ಗ ಬಳಸಿಕೊಂಡು ಕೃತ್ಯ ಎಸಗಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಈತ ಬಾಲ್ಯದಲ್ಲಿಯೇ ಕ್ರೀಡೆಯಲ್ಲಿ ಆಸಕ್ತಿಯನ್ನು ಬೆಳಸಿಕೊಂಡಿದ್ದು, ಕಬಡ್ಡಿ ಆಟದಲ್ಲಿ ಅತ್ಯುತ್ತಮ ಆಟಗಾರನಾಗಿ ಹೊರಹೊಮ್ಮಿದ್ದ. ಉಜಿರೆಯ ಸಾನಿಧ್ಯ ಖಾಸಗಿ ಕಂಪನಿ ಒಂದರಲ್ಲಿ ಕೆಲಸವನ್ನು ಮಾಡಿಕೊಂಡಿದ್ದ ಈತ ಸದಾ ಕ್ರೀಯಾಶೀಲತೆಯಿಂದ ಕೂಡಿದ್ದ. ಸ್ವರಾಜ್ ಅವರು ತಂದೆ ಸತೀಶ್ ಮತ್ತು ತಾಯಿ ಸ್ವಾತಿ ಹಾಗೂ ಸಹೋದರಿ ಕುಟುಂಬ ವರ್ಗವನ್ನು ಅಗಲಿದ್ದಾರೆ.

Related posts

ಸುಳ್ಯ ಕಾಂಗ್ರೆಸ್ ಭಿನ್ನಮತ ಶಮನ,ಪಕ್ಷದ ಹಿತಕ್ಕಾಗಿ ಜತೆಯಾಗಿ ಕೆಲಸ ಮಾಡಲು ರಮಾನಾಥ ರೈ ಸೂಚನೆ

ಮೂಲ್ಕಿ: ತಾಯಿಯ ಮೇಲೆ ಅತ್ಯಾಚಾರವೆಸಗಲು ಯತ್ನಿಸಿದ ಪಾಪಿ ಪುತ್ರ, ಆಕೆ ವಿರೋಧಿಸಿದಾಗ ಕತ್ತು ಹಿಸುಕಿ ಕೊಂದೇ ಬಿಟ್ಟ..!

ಕಷ್ಟ ಪಟ್ಟು ಪಡ್ಕೊಂಡ ಸರಕಾರಿ ಕೆಲಸವೇ ಆಕೆಗೆ ಮುಳುವಾಗಿ ಹೋಯ್ತು..!,ಫ್ಯಾಮಿಲಿಗೆ ಟೈಂ ಕೊಡುತ್ತಿಲ್ಲವೆಂದು ಸಿಟ್ಟಾದ ಗಂಡ ಪತ್ನಿಯನ್ನೇ ಮುಗಿಸಿದ,ಮಗು ಅನಾಥ