ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನ.7ರಂದು ಬಿಸಿಯೂಟ ಸ್ಥಗಿತ..!ಕಾರಣವೇನು?

ನ್ಯೂಸ್ ನಾಟೌಟ್ : ದ.ಕ ಜಿಲ್ಲೆಯ ಬಿಸಿಯೂಟ ನೌಕರರು ಸಿಐಟಿಯು ನೇತೃತ್ವದಲ್ಲಿ ನ.7ರಂದು ಬಿಸಿಯೂಟ ಅಡುಗೆ ಕೆಲಸ ಸ್ಥಗಿತಗೊಳಿಸಲಿದ್ದಾರೆ..! ಹೌದು, ಅಕ್ಷರ ದಾಸೋಹ ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಲ್ಳಲಾಗಿದೆ.ಇದಕ್ಕಾಗಿ ಅ.30ರಿಂದ ಬೆಂಗಳೂರಿನಲ್ಲಿ ಬೇಡಿಕೆ ಈಡೇರುವವರೆಗೆ ಹೋರಾಟ ನಡೆಯಲಿದೆ.ದ.ಕ ಜಿಲ್ಲೆಯ ಬಿಸಿಯೂಟ ನೌಕರರು ಬೆಂಗಳೂರಿನ ಹೋರಾಟದಲ್ಲಿ ಭಾಗವಹಿಸುವರು ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ.ಭಟ್ ಹೇಳಿದ್ದಾರೆ.

ಪುತ್ತೂರಿನಲ್ಲಿ ಶುಕ್ರವಾರ(ಅ.27) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ನ.10ರೊಳಗೆ ನ್ಯಾಯ ಸಿಗದಿದ್ದರೆ ಈ ಹೋರಾಟ ಮುಂದುವರಿಯಲಿದೆ.ಇದಕ್ಕಾಗಿ ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದರು.

ಈಗಿನ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಬಿಸಿಯೂಟ ನೌಕರರಿಗೆ ನೀಡಿದ ₹ 6 ಸಾವಿರ ವೇತನ ಗ್ಯಾರಂಟಿಯನ್ನಾಗಲೀ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಜೆಟ್‌ನಲ್ಲಿ ಮಂಡಿಸಿದ ₹1 ಸಾವಿರ ಏರಿಕೆಯ ಸಂಬಳವನ್ನ ಇದುವರೆಗೆ ನೀಡಿಲ್ಲ. ಅಕ್ಷರದಾಸೋಹ ಯೋಜನೆಯ ಬಿಸಿಯೂಟ ನೌಕರರಿಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಯಾ ಪೈಸೆಯನ್ನೂ ಏರಿಕೆ ಮಾಡಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ರು.

https://newsnotout.com/2023/10/karavali-puttur-belthangady-overload-the-driver-does-not-agree-to-drive-the-bus/

ಅಕ್ಷರದಾಸೋಹ ಯೋಜನೆಯನ್ನು ಸಂಪೂರ್ಣವಾಗಿ ಶಿಕ್ಷಣ ಇಲಾಖೆಯಡಿ ನಡೆಸಬೇಕು. ನೌಕರರಿಗೆ ಕನಿಷ್ಠ ವೇತನ ನಿಗದಿಪಡಿಸಬೇಕು.ಅವರಿಗೆ ಕೆಲಸದ ಭದ್ರತೆಯಿಲ್ಲ.ಹೀಗಾಗಿ ಅತೀ ಶೀಘ್ರದಲ್ಲಿಯೇ ಕೆಲಸದ ಭದ್ರತೆ ಒದಗಿಸಬೇಕು. 2022ರಲ್ಲಿ 60 ವರ್ಷ ಆಗಿದೆ ಎಂದು ಕೆಲಸದಿಂದ ತೆಗೆದ ಎಲ್ಲ ನೌಕರರಿಗೂ ತಲಾ ₹1ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ನಿವೃತ್ತಿ ವೇತನ, ನಿವೃತ್ತಿ ಫಂಡ್ ಜಾರಿಗೊಳಿಸಬೇಕು. ಕಳೆದ ಏಪ್ರಿಲ್ ಬಜೆಟ್‌ನಲ್ಲಿ ಏರಿಕೆ ಮಾಡಲಾದ ₹ 1 ಸಾವಿರ ಸಂಬಳವನ್ನು 2023ರ ಜನವರಿಗೆ ಅನ್ವಯವಾಗುವಂತೆ ಜಾರಿಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲ್ಲೂಕು ಸಮಿತಿ ಅಧ್ಯಕ್ಷೆ ಸುಧಾ ಎಕ್ಕಡ, ಕಾರ್ಯದರ್ಶಿ ರಂಜಿತಾ ಕೋಡಿಂಬಾಡಿ, ಉಪಾಧ್ಯಕ್ಷರಾದ ಲಕ್ಷ್ಮೀ ಮುಕ್ವೆ, ತೆರೆಸಾ ನಿಡ್ಪಳ್ಳಿ, ಖಜಾಂಜಿ ಶ್ವೇತಾ ಪರ್ಲಡ್ಕ, ಸಿಪಿಎಂ ಪುತ್ತೂರು ತಾಲ್ಲೂಕು ಸಮಿತಿ ಕಾರ್ಯದರ್ಶಿ ಪಿ.ಕೆ.ಸತೀಶನ್ ಸುದ್ದಿಗೋಷ್ಠಿಯಲ್ಲಿ ಇದ್ದರು.

Related posts

ಫೆ.11ರಂದು ಸುಳ್ಯ ನ್ಯಾಯಾಲಯದಲ್ಲಿ ಲೋಕ ಅದಾಲತ್ ಕಾರ್ಯಕ್ರಮ

ಇಬ್ಬರು ವಿದ್ಯಾರ್ಥಿನಿಯರು ನೀರುಪಾಲು,ನಾಪತ್ತೆಯಾದವರಿಗಾಗಿ ಭಾರಿ ಹುಡುಕಾಟ

ಮಂಗಳೂರಿನಲ್ಲಿ ಕೋಸ್ಟ್ ಗಾರ್ಡ್ ಕಾರ್ಯಾಚರಣೆ, ಇಲ್ಲಿವೆ ಸಮುದ್ರದಲ್ಲಿ ನಡೆದ ಸಾಹಸಗಳ ಪೋಟೊಗಳು