ಕರಾವಳಿರಾಜಕೀಯ

ದಕ್ಷಿಣ ಕನ್ನಡ ಜಿಲ್ಲೆಗೆ ಇನ್ನೂ ಎರಡು ರೈಲ್ವೆ ನಿಲ್ದಾಣ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ

ನ್ಯೂಸ್ ನಾಟೌಟ್: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೊಂದು ಭಾರಿ ಬಿಜೆಪಿಯಿಂದ ಟಿಕೇಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗುತ್ತಿದೆ. ನಳಿನ್ ಅವರು ಇದೀಗ ಅನುದಾನಗಳನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚಿಸುವತ್ತ ಚಿತ್ತ ನೆಟ್ಟಿದ್ದಾರೆ.

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ್ದ ನಳಿನ್ ಶೀಘ್ರದಲ್ಲೇ ಇನ್ನೂ ಮೂರು ರೈಲ್ವೆ ನಿಲ್ದಾಣದ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದಿದ್ದರು. ಇದೀಗ ಕೆಲವೇ ದಿನಗಳಲ್ಲಿ ಆ ಎರಡು ರೈಲ್ವೆ ನಿಲ್ದಾಣದ ನೀಲನಕಾಶೆ ತಯಾರಾಗಲಿದೆ ಎಂದು ತಿಳಿಸಿದ್ದಾರೆ.

ಅಮೃತ್ ಭಾರತ್ ಯೋಜನೆಯಡಿಯಲ್ಲಿ ಬಂಟ್ವಾಳ ರೈಲ್ವೆ ನಿಲ್ದಾಣಕ್ಕೆ 26.19 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ರೈಲ್ವೆ ನಿಲ್ದಾಣ ಕಟ್ಟಡ ತಲೆ ಎತ್ತಲಿದೆ. ಅಲ್ಲದೆ ಸುಬ್ರಹ್ಮಣ್ಯ ರೈಲ್ವೆ ನಿಲ್ದಾಣಕ್ಕೆ 24.73 ಕೋಟಿ ರೂಪಾಯಿ ಯೋಜನೆ ಮೂಲಕ ಸುಂದರ ರೈಲ್ವೆ ನಿಲ್ದಾಣ ಕಟ್ಟಡ ತಲೆ ಎತ್ತಲಿದೆ.
ಅದ್ಬುತ ವಿನ್ಯಾಸ ಹೊಂದಿರುವ ಈ ಎರಡೂ ರೈಲ್ವೇ ನಿಲ್ದಾಣದ ಶಿಲಾನ್ಯಾಸ ಕಾರ್ಯಕ್ರಮವು ಅತೀ ಶೀಘ್ರದಲ್ಲೇ ನಡೆಯಲಿದೆ. ಆದಷ್ಟು ಬೇಗ ಲೋಕಾರ್ಪಣೆಗೊಳಿಸುತ್ತೇವೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

Related posts

ಕಲ್ಲಡ್ಕದಲ್ಲಿ ನಿರ್ಮಾಣ ಹಂತದ ಫ್ಲೈಓವರ್ ನ ಪಿಲ್ಲರ್ ಗೆ ಹಾಕಿದ ಕಬ್ಬಿಣದ ಸಲಾಕೆ ಕುಸಿತ

ಕಾರ್ಕಳ: ಕಾಂಗ್ರೆಸ್‌ನಿಂದ ಮೇ1ರಂದು ಅದ್ದೂರಿ ರೋಡ್ ಶೋ, ಬೃಹತ್ ಸಮಾವೇಶ;ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ

ʼಜೈ ಶ್ರೀರಾಮ್ʼ ಗೀತೆ ಹಾಕಿ ನೃತ್ಯ ಮಾಡಿದ್ದಕ್ಕೆ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 24 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು