ಕರಾವಳಿ

ದಕ ಜಿಲ್ಲಾ ಜೆಡಿಎಸ್ ಕಾರ್ಯರ್ಶಿ ಸುಶೀಲ್ ನೊರೊನ್ಹಾ ನಿಧನ

ನ್ಯೂಸ್ ನಾಟೌಟ್ : ಖ್ಯಾತ ಉದ್ಯಮಿ ಮತ್ತು ಜನತಾದಳ (ಜಾತ್ಯತೀತ) ಮುಖಂಡ ಸುಶೀಲ್ ನೊರೊನ್ಹಾ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಸುಶೀಲ್ ನೊರೊನ್ಹಾ ಅವರು ಹಲವಾರು ಸಂಘಟನೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದು, ಕ್ರಿಸ್ಟೋಫರ್ ಎಸೊಶೀಯೇಶನ್, ದಕ ಜಿಲ್ಲಾ ಜನತಾದಳ, ವಿದ್ಯುತ್ ಗುತ್ತಿಗೆದಾರರ ಸಂಘಟನೆ, ಮಂಗಳೂರು ಧರ್ಮಪ್ರಾಂತ್ಯ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.ಜಿಲ್ಲಾ ಜೆಡಿ(ಎಸ್) ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾಗಿದ್ದರು. 2012ರಲ್ಲಿ ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.ಮೃತರು ಪತ್ನಿ ಎಡ್ನಾ ನೊರೊನ್ಹಾ, ಪುತ್ರ ಅಗ್ನೆಲೊ ನೊರೋನ್ಹಾ, ಸಹೋದರ ವಕೀಲ ಎಮ್ ಪಿ ನೊರೊನ್ಹಾ ಸೇರಿದಂತೆ ಹಲವರು ಬಂಧು ಮಿತ್ರರನ್ನು ಅಗಲಿದ್ದಾರೆ.

Related posts

ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ವಿಜ್ಞಾನ ದಿನಾಚರಣೆ: ವಿಜ್ಞಾನ ಮಾದರಿಗಳ ಪ್ರದರ್ಶನ

ಮೂವರು ಮಕ್ಕಳನ್ನು ತುಂಗಭದ್ರಾ ನದಿಗೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ತಂದೆ..! ಒಂದು ಮಗು ಮತ್ತು ತಂದೆಯ ಮೃತದೇಹ ಪತ್ತೆ..!

ಅಕ್ರಮ ಮರಳು ಸಾಗಾಟ, ಲಾರಿ ಸಹಿತ ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು