ಕರಾವಳಿ

ಉಡುಪಿ: ಬಸ್‌ನ ಚಕ್ರದಡಿಗೆ ಸಿಲುಕಿದ್ದ ಯುವಕ ಪವಾಡ ಸದೃಶ ಪಾರಾಗಿದ್ದು ಹೇಗೆ? ಭಯಾನಕ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ..!ವಿಡಿಯೋ ವೀಕ್ಷಿಸಿ..

ನ್ಯೂಸ್ ನಾಟೌಟ್ : ದೇವರು ಆಯುಷ್ಯ ಚೆನ್ನಾಗಿ ಬರೆದಿದ್ರೆ ಯಾವ ಸಂದರ್ಭದಲ್ಲೂ ಯಾವುದೇ ಅವಘಡದಿಂದ ಪಾರಾಗಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ..ವೈರಲ್ ಆಗಿರೋ ವಿಡಿಯೋದಲ್ಲಿ ಯುವಕನೋರ್ವ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದು,ಬಸ್‌ನ ಚಕ್ರದಡಿಗೆ ಸಿಲುಕಿದ್ದ. ಆದ್ರೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಉಡುಪಿಯ ಕುಂದಾಪುರದ ಶಾಸ್ತ್ರಿ ಸರ್ಕಲ್ ನಿಂದ ವರದಿಯಾಗಿದೆ.

ದೃಶ್ಯವನ್ನು ಗಮನಿಸಿದ್ರೆ ಬಸ್ ಏಕಾಏಕಿ ಎಡಮಗ್ಗಲಿಗೆ ತಿರುಗಿದ್ದರಿಂದ ರಸ್ತೆಯ ಅಂಚಿನಲ್ಲಿ ಸೈಕಲ್ ಚಲಾಯಿಸುತ್ತಿದ್ದ ವ್ಯಕ್ತಿಗೆ ಡಿಕ್ಕಿಯಾಗಿದೆ. ಈ ವೇಳೆ ಬಸ್ಸಿನ ಮುಂಭಾಗದ ಚಕ್ರದಡಿಗೆ ಸೈಕಲ್ ಸಿಲುಕಿದೆ. ಸೈಕಲ್ ಚಾಲಕನ ಮೇಲೆ ಟೈಯರ್ ಹರಿದು ಹೋಗುವ ಸಾಧ್ಯತೆ ಇತ್ತು. ಆದರೆ ಆತನ ಅದೃಷ್ಟ ಚೆನ್ನಾಗಿತ್ತು.ಚಾಲಕ ತಕ್ಷಣವೇ ಬ್ರೇಕ್ ಹಾಕಿದ ಪರಿಣಾಮ ಜೀವಕ್ಕೆ ಅಪಾಯವಾಗಿಲ್ಲ. ಆದರೆ ಆತನ ಸೈಕಲ್ ಮುರಿದು ಪುಡಿ ಪುಡಿಯಾಗಿದೆ. ತಕ್ಷಣವೇ ಸ್ಥಳದಲ್ಲಿದ್ದ ಸ್ಥಳೀಯರು ಬಂದು ಸೈಕಲ್ ಚಾಲಕನನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದ್ದಾರೆ.

ಸದ್ಯ ಈ ಭೀಕರ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.ಈ ವಿಡಿಯೋವು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್​​ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಹೆಲ್ಮಟ್​ಗೆ ಅಳವಡಿಸಿದ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವಿಡಿಯೋ ಲಿಂಕ್ ಇಲ್ಲಿದೆ ನೋಡಿ..

https://www.facebook.com/100063684174703/videos/275783595124997/?ref=embed_video&t=31

https://www.facebook.com/100063684174703/videos/275783595124997/?ref=embed_video&t=31

Related posts

ಕಲ್ಲುಗುಂಡಿಯಲ್ಲಿ ಮಹಮ್ಮದ್ ನಲಪಾಡ್ ಗೆ ಸ್ವಾಗತ

ಇಯರ್ ಬಡ್ಸ್ ಬಳಸುತ್ತಿದ್ದೀರಾ? ಹಾಗಾದ್ರೆ ಸ್ವಲ್ಪ ಎಚ್ಚರಿಕೆ ವಹಿಸಿ..

ಸುಳ್ಯ ಸರ್ಕಾರಿ ಆಸ್ಪತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ,ವಿವಿಧ ಕಾಮಗಾರಿಗಳ ಪ್ರಗತಿ ವೀಕ್ಷಣೆ