ವೈರಲ್ ನ್ಯೂಸ್

ಆ ಎರಡು ಸೈಬೀರಿಯನ್​ ಹುಲಿಗಳನ್ನು ಭಾರತಕ್ಕೆ ತಂದದ್ದೇಕೆ..? ಕಳೆದ ವರ್ಷ ತಂದಿದ್ದ ದಕ್ಷಿಣ ಆಫ್ರಿಕಾದ ಚೀತಾಗಳು ಕೊನೆಯುಸಿರೆಳೆದದ್ದೇಕೆ?

ನ್ಯೂಸ್ ನಾಟೌಟ್: ಎರಡು ಸೈಬೀರಿಯನ್​ ಹುಲಿಗಳನ್ನು ಭಾರತಕ್ಕೆ ಕರೆ ತರಲಾಗಿದ್ದ, ಆಗ್ನೇಯ ಯೂರೋಪ್​ನ ಸೈಪ್ರಸ್​ನ ಪಫೋಸ್​ ಮೃಗಾಲಯದಿಂದ ಈ ಎರಡು ಹುಲಿಗಳನ್ನು ಕರೆತರಲಾಗಿದೆ. ಈ ಹುಲಿಗಳು ಭಾನುವಾರ ಪಶ್ಚಿಮಬಂಗಾಳದ ಪದ್ಮಜಾ ನಾಯ್ಡು ಝೂಲಾಜಿಕಲ್​ ಪಾರ್ಕ್​ಗೆ ಬಂದಿವೆ. ಲಾರಾ ಮತ್ತು ಅಕಮಾಸ್​ ಎಂಬ ಸೈಬಿರಿಯನ್ ಹುಲಿಗಳು ಪದ್ಮಜಾ ನಾಯ್ಡು ಝೂಲಾಜಿಕಲ್​ ಪಾರ್ಕ್​ನ ​ಪ್ರಮುಖ ಆಕರ್ಷಣೆಯಾಗಲಿವೆ.

ಈ ಹುಲಿಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಈ ಸಂಬಂಧ ಸೈಬೀರಿಯನ್​ ಹುಲಿಗಳಿಗೆ ವಿಶೇಷ ವೈದ್ಯಕೀಯ ತಂಡ ಮತ್ತು ವಿಶೇಷ ಆಹಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಎರಡು ಕೆಂಪು ಪಾಂಡಾಗಳನ್ನು ಯೂರೋಪ್​ನ ಮೃಗಾಲಯಕ್ಕೆ ಭಾರತದಿಂದ ಕಳುಹಿಸಿಕೊಡಲಾಗಿದೆ.

ಕಳೆದ ಒಂದು ವರ್ಷದ ಹಿಂದೆಯೇ ಸೈಪ್ರಸ್​ನಿಂದ ಎರಡು ಸೈಬಿರಿಯನ್​ ಹುಲಿಗಳನ್ನು ಕರೆತರುವ ಬಗ್ಗೆ ಮಾತುಕತೆ ನಡೆದಿತ್ತು. 2011ರಲ್ಲಿ ದೇಶದಲ್ಲಿದ್ದ ಕೊನೆಯ ಸೈಬೀರಿಯನ್​ ಹುಲಿ ಸಾವನ್ನಪ್ಪಿತ್ತು. ಈ ಹುಲಿಯನ್ನು ಮೂರು ವರ್ಷ ಇರುವಾಗ ಭಾರತಕ್ಕೆ ಕರೆತರಲಾಗಿತ್ತು. ಬಳಿಕ ವಯೋಸಹಜ ಕಾಯಿಲೆಯಿಂದಾಗಿ 18ನೇ ವಯಸ್ಸಿಗೆ ಸಾವನ್ನಪ್ಪಿತ್ತು. ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾದ ಪ್ರಕಾರ, ಭಾರತದಲ್ಲಿ ಎಲ್ಲಿಯೂ ಸೈಬೀರಿಯನ್​ ಹುಲಿಗಳು ಇಲ್ಲ. ಈ ಸಂಬಂಧ ಎರಡು ಹುಲಿಗಳನ್ನು ಕರೆತರಲಾಗಿದೆ. ಹೊಸ ವರ್ಷಕ್ಕೂ ಮೊದಲು ಎರಡು ಅತಿಥಿಗಳು ಡಾರ್ಜಿಲಿಂಗ್​ನ ಮೃಗಾಲಯಕ್ಕೆ ಬಂದಿವೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳನ್ನು ಬಿಡುಗಡೆ ಮಾಡಿದ್ದರು. ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಒಟ್ಟು 20 ಚೀತಾಗಳನ್ನು ದೇಶಕ್ಕೆ ತರಲಾಗಿತ್ತು. ಇದರಲ್ಲಿ ಕೆಲವು ಚೀತಾಗಳು ಕೊನೆಯುಸಿರೆಳೆದಿದ್ದವು, ಉಳಿದ 14 ಚೀತಾಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.

ರೆಡಿಯೋ ಕಾಲರ್ ಗಳು ಇವುಗಳ ಅಂತ್ಯಕ್ಕೆ ಕಾರಣ ಎಂದು ಶಂಕಿಸಲಾಗಿತ್ತು. ಈ ವರ್ಷ ಮಾರ್ಚ್‌ನಿಂದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ 9 ಚೀತಾಗಳು ಕೊನೆಸಿರೆಳೆದಿವೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿತ್ತು.

https://newsnotout.com/2023/12/shabarimale-and-case-issue-high-court/

Related posts

ಹೆಲಿಕಾಪ್ಟರ್‌ ಮೂಲಕ ಹೆಲಿಕಾಪ್ಟರನ್ನೇ ಏರ್‌ ಲಿಫ್ಟ್‌ ಮಾಡಿದ ಸೇನೆ..! ಕೇದಾರನಾಥದಲ್ಲಿ ದಿಢೀರ್ ಪತನ ..! ಇಲ್ಲಿದೆ ವಿಡಿಯೋ

ಎರಡನೇ ಮಹಡಿಯಿಂದ ಹುಡುಗನ ತಲೆ ಮೇಲೆ ಬಿದ್ದ ಎಸಿ..! 18 ವರ್ಷದ ಯುವಕ ಸಾವು, ಇನ್ನೋರ್ವ ಗಂಭೀರ..! ಇಲ್ಲಿದೆ ವೈರಲ್ ವಿಡಿಯೋ

ನಂದಿಬೆಟ್ಟದಲ್ಲಿ ಕಿಕ್ಕಿರಿದು ಸೇರಿದ ಪ್ರವಾಸಿಗರು..! ವಾಪಸ್ ಬರಲೂ ಆಗದೆ, ಹೋಗಲು ಆಗದೆ ಮುಂಜಾನೆಯಿಂದ ಪರದಾಡಿದ ಜನರು..!