ಕರಾವಳಿ

“ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ, ಕುಡಿದು ಹಾಳಾಗಿ ಹೋಗಿ ಕಾಂಗ್ರೆಸ್‌ನ 6ನೇ ಗ್ಯಾರಂಟಿ”, ಮಾಜಿ ಸಚಿವ ಸಿ.ಟಿ.ರವಿ ಹೀಗೆ ಹೇಳಿದ್ಯಾಕೆ..?

ನ್ಯೂಸ್ ನಾಟೌಟ್ : ಕಾಂಗ್ರೆಸ್‌ ನಿಂದ ೫ ಗ್ಯಾರಂಟಿ ಆಯ್ತು… ಕುಡಿದು ಹಾಳಾಗಿ ಹೋಗಿ ಅನ್ನೋದು ಕಾಂಗ್ರೆಸ್‌ನ (Congress) 6ನೇ ಗ್ಯಾರಂಟಿ ಎಂದು ಮಾಜಿ ಸಚಿವ ಸಿ.ಟಿ.ರವಿ (C.T.Ravi) ಟೀಕಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಂಡತಿಗೆ ಕೊಟ್ಟ ಎರಡು ಸಾವಿರ ವಾಪಸ್ ಪಡೆಯಲು ಊರೂರಿಗೆ ಮದ್ಯದಂಗಡಿ ಕೊಡಲು ಮುಂದಾಗಿದ್ದಾರೆ ಎಂದು ಗುಡುಗಿದರು.

ಹಳ್ಳಿ ಹಳ್ಳಿಗೂ ಮದ್ಯದ ಲೈಸೆನ್ಸ್ ವಿಚಾರವಾಗಿ ಉಗ್ರವಾಗಿ ಮಾತನಾಡಿದ ಅವರು ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡ್ತೀನಿ ಅನ್ನೋ ನಿಲುವು ಕಾಂಗ್ರೆಸ್‌ನವರದ್ದು, ಮಾಲ್, ಸೂಪರ್ ಮಾರ್ಕೆಟ್‌ಗಳಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ.ಹಳ್ಳಿಗಳಿಗೆ ಈಗಾಗಲೇ ಅನಧಿಕೃತವಾಗಿ ಮದ್ಯ ಪೂರೈಕೆ ಆಗ್ತಿದೆ.ಇದು ಆರನೇ ಗ್ಯಾರಂಟಿ ಇರಬೇಕು ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ ಸರ್ಕಾರಕ್ಕೆ ಹೊರಗಿನ ಶಕ್ತಿಗಳಿಂದ ಪರಿಣಾಮ ಆಗಲ್ಲ. ಹೊರಗಿನ ಶಕ್ತಿಗಳಿಂದ ಅವರ ಸರ್ಕಾರ ಬೀಳಿಸುವುದು ಕಷ್ಟ. ಆದರೆ ಒಳಗಡೆ ಏನು ಬೇಕಾದರೂ ಆಗಬಹುದು. ಒಳಗಡೆ ಬಂಡಾಯ ಎದ್ದರೆ ಅದು ನಮ್ ಕೈಯಲ್ಲಿ ಇಲ್ಲ. ಕಾಂಗ್ರೆಸ್‌ಗೆ ಬಿಜೆಪಿ, ಜೆಡಿಎಸ್‌ನಿಂದ ಅಪಾಯ ಇಲ್ಲ. ಅಪಾಯ ಇದ್ದರೆ ಅದು ಒಳಗಡೆಯಿಂದ ಮಾತ್ರ. ಹೊರಗಡೆಯಿಂದ ಅಪಾಯ ಇಲ್ಲ. ಸರ್ಕಾರದ ಪತನ ಒಳಗಿಂದಲೇ ಎಂದು ಭವಿಷ್ಯ ನುಡಿದರು.

Related posts

ಶರತ್ ಶೆಟ್ಟಿ ಕೊಲೆ ಪ್ರಕರಣಕ್ಕೆ ತಿರುವು: ಪ್ರಮುಖ ಆರೋಪಿಯ ಬಂಧನಕ್ಕಾಗಿ ಪಂಜುರ್ಲಿ ದೈವದ ಮೊರೆ ಹೋದ ಕುಟುಂಬಸ್ಥರು !

ಉಡುಪಿ: ನಿಲ್ಲಿಸಿದ್ದ ಬೋಟ್‌ ಗಳಿಂದ ಬೆಲೆ ಬಾಳುವ ಮೀನು ಕಳ್ಳತನ, ಮಧ್ಯರಾತ್ರಿ ಮೀನುಗಾರರ ಕೈಗೆ ಸಿಕ್ಕಿಬಿದ್ದಿದ್ದೇಗೆ ಕಳ್ಳರು..?

ಬೆಳ್ತಂಗಡಿ: ಚರ್ಮರೋಗಕ್ಕೆ ರಾಮಬಾಣವೆಂಬಂತಿದ್ದ ಇಲ್ಲಿ ನೀರೇ ಇಲ್ಲ! ಇದೇ ಮೊದಲ ಬಾರಿ ಬತ್ತಿ ಹೋಗಿರುವ ಬಿಸಿ ನೀರ ಚಿಲುಮೆ