ಕ್ರೈಂರಾಜಕೀಯವೈರಲ್ ನ್ಯೂಸ್

ಸಿ.ಟಿ.ರವಿ ಬಿಡುಗಡೆಯ ಬಳಿಕ ಸ್ವಾಗತ ಕೋರಿದ್ದ 7 ಆ್ಯಂಬುಲೆನ್ಸ್​ ವಿರುದ್ಧ FIR ದಾಖಲು..! ಏನಿದು ಘಟನೆ..?

ನ್ಯೂಸ್ ನಾಟೌಟ್:ಪೊಲೀಸ್‌ ಬಂಧನ, ಜಾಮೀನು ರದ್ಧಾಂತದ ಬಳಿಕ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ಚಿಕ್ಕಮಗಳೂರಿಗೆ ಆಗಮಿಸಿದ್ದರು. ಈ ವೇಳೆ ಬೆಂಗಳೂರಿನಿಂದ ಚಿಕ್ಕಮಗಳೂರಿನವರೆಗೂ ದಾರಿಯುದ್ಧಕ್ಕೂ ಕಾರ್ಯಕರ್ತರು ಮೆರವಣಿಗೆ, ಪುಷ್ಪಾರ್ಚನೆ ಮಾಡಿ ಅದ್ಧೂರಿ ಸ್ವಾಗತ ಕೋರಿದ್ದಾರೆ. ಅದರಲ್ಲೂ ಚಿಕ್ಕಮಗಳೂರಿನಲ್ಲಿ ಭರ್ಜರಿ ರೋಡ್ ಶೋ ಮಾಡಿದ್ದು, ಈ ವೇಳೆ ಆ್ಯಂಬುಲೆನ್ಸ್ ​ಗಳನ್ನು ಬಳಕೆ ಮಾಡಲಾಗಿದೆ.

ಸಿ.ಟಿ.ರವಿ ಸ್ವಾಗತಕ್ಕೆ ಆ್ಬಂಬುಲೆನ್ಸ್ ​ಗಳು ಸೈರನ್ ಹಾಕಿಕೊಂಡು ಬಂದಿವೆ. ಈ ಸಂಬಂಧ ಇದೀಗ ಎಫ್ ​ಐಆರ್ ದಾಖಲಾಗಿದೆ. ಕೈಮರದಿಂದ ಸೈರನ್ ಹಾಕಿಕೊಂಡು ಬಂದಿದ್ದ 7 ಆ್ಯಂಬುಲೆನ್ಸ್ ಮೇಲೆ ಈಗ ಪ್ರಕರಣ ದಾಖಲಾಗಿದೆ.

ರೋಗಿಗಳಲ್ಲಿದೆ ಸೈರನ್ ಹಾಕಿಕೊಂಡು ಹಾಗೂ ಟಾಪ್ ​ನಲ್ಲಿ ಲೈಟ್ ಹಾಕಿಕೊಂಡು ಬಂದಿದ್ದ 7 ಆ್ಯಂಬ್ಯುಲೆನ್ಸ್ ಚಾಲಕ, ಮಾಲೀಕರ ವಿರುದ್ಧ ಈಗ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾರ್ವಜನಿಕರ ಶಾಂತಿ ಭಂಗ ಆರೋಪದಡಿ ಆ್ಯಂಬುಲೆನ್ಸ್ ಮಾಲೀಕ, ಚಾಲಕರ ವಿರುದ್ಧ ಸುಮೋಟೋ ಕೇಸ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.

ಬಂಧನದಿಂದ ಮುಕ್ತವಾದ ಬಳಿಕ ಸಿಟಿ ರವಿ ನಿನ್ನೆ(ಡಿಸೆಂಬರ್ 21) ಮಧ್ಯರಾತ್ರಿ ಚಿಕ್ಕಮಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು, ಅವರ ಅಭಿಮಾನಿಗಳು ಸಿ.ಟಿ ರವಿ ಅವರನ್ನು ಭರ್ಜರಿ ಸ್ವಾಗತ ಕೋರಿದ್ದರು. ರಸ್ತೆಯುದ್ದಕ್ಕೂ ಜೈಕಾರ ಹಾಕಿ ಹೂಮಳೆಗೈದಿದ್ದರು.ಇನ್ನು ಈ ಸ್ವಾಗತದ ಮೆರವಣಿಗೆಯಲ್ಲಿ 7 ಆ್ಯಂಬುಲೆನ್ಸ್​ಗಳು ಭಾಗಿಯಾಗಿದ್ದವು. ಚಿಕ್ಕಮಗಳೂರು ನಗರದ ಹಿರೇಮಗಳೂರಿನಿಂದ ಸಿ.ಟಿ ರವಿ ನಿವಾಸದ ವರೆಗೂ ಜೋರಾಗಿ ಸೈರನ್ ಹಾಕಿಹೊಂಡು ಬಂದಿದ್ದವು.

Click

https://newsnotout.com/2024/12/allu-arjun-kannada-news-video-d-news-not-out/
https://newsnotout.com/2024/12/theft-kannada-news-80-people-passenger-govt-bus/
https://newsnotout.com/2024/12/takeoff-airplane-airhostelss-viral-news/
https://newsnotout.com/2024/12/kasaragodu-kannada-news-5-shops-are-under-fire-hd/
https://newsnotout.com/2024/12/udupi-kannada-news-tourist-boat-sink-boat-rider-suspence/
https://newsnotout.com/2024/12/viratkohli-restorant-in-bengaluru-cricketer-bbmp-notice/
https://newsnotout.com/2024/12/ticjet-dog-kannada-news-betting-issue-police-arrested-d/
https://newsnotout.com/2024/12/baby-naming-issue-court-case-couple-happy-ending/
https://newsnotout.com/2024/12/kannada-news-police-wood-cutter-kananda-news/
https://newsnotout.com/2024/12/iphone-kannada-news-temple-tamil-nadu-viral-issue-h/

Related posts

ಕಿವಿಯಲ್ಲಿ ಬ್ಲೂ ಟೂತ್ ಸಾಧನ ಇಟ್ಟು ಪೊಲೀಸ್ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿ ಅರೆಸ್ಟ್..! ಆತನಿಗೆ ಸಹಾಯ ಮಾಡುತ್ತಿದ್ದ ವ್ಯಕ್ತಿಗಾಗಿ ಹುಡುಕಾಟ..!

ಪ್ರಧಾನಿ ಮೋದಿಗೆ ರಷ್ಯಾದಲ್ಲಿ ಅದ್ದೂರಿ ಸ್ವಾಗತ, ಉಕ್ರೇನ್ ಯುದ್ಧದ ಬಳಿಕ ಮೋದಿಯ ಮೊದಲ ರಷ್ಯಾ ಭೇಟಿ

ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ, ಸಂಕ್ರಾಂತಿ ಹಬ್ಬದಂದು ಮುಂಜಾನೆ ಸಂಭವಿಸಿದ್ದೇನು..?