ದೇಶ-ಪ್ರಪಂಚ

ಪ್ರೀತಿ ಹುಡುಕುತ್ತಾ ಪಾಕ್ ನಿಂದ ಭಾರತಕ್ಕೆ ಮಹಿಳೆ ಎಂಟ್ರಿ ಬೆನ್ನಲ್ಲೇ ಭಾರತದಿಂದ ಪಾಕ್‌ಗೆ ತೆರಳಿದ ಮತ್ತೊಬ್ಬ ಮಹಿಳೆ..!ಇದು ವಿವಾಹಿತೆ ಮಹಿಳೆಯ ಫೇಸ್‌ಬುಕ್ ಲವ್ ಕಹಾನಿ..!

ನ್ಯೂಸ್ ನಾಟೌಟ್: ಪಬ್ಜಿ ಗೇಮ್ ನಿಂದಾಗಿ ಭಾರತದ ಯುವಕನೋರ್ವ ಪಾಕಿಸ್ತಾನದ ನಾಲ್ಕು ಮಕ್ಕಳ ತಾಯಿಗೆ ಪರಿಚಯವಾಗಿ ಪ್ರೀತಿಗೆ ತಿರುಗಿ ಆಕೆ ಭಾರತಕ್ಕೆ ಬಂದಿರುವ ಘಟನೆ ವರದಿಯಾಗಿತ್ತು.ಇದೀಗ ಭಾರತದ ಮಹಿಳೆಯೊಬ್ಬರು ಗೆಳೆಯನನ್ನು ಭೇಟಿಯಾಗಲು ರಾಜಸ್ಥಾನದಿಂದ ಪಾಕಿಸ್ತಾನಕ್ಕೆ ತೆರಳಿದ್ದಾರೆ ಎನ್ನುವ ಸುದ್ದಿ ಭಾರಿ ವೈರಲಾಗುತ್ತಿದೆ.

ಈ ಯುವತಿ ರಾಜಸ್ಥಾನದ ಭಿವಾಡಿ ಜಿಲ್ಲೆಯವಳು.ಈಕೆಯ ಹೆಸರು ಅಂಜು .ಫೇಸ್‌ಬುಕ್‌ನಲ್ಲಿ ಪರಿಚಯವಾದ ಗೆಳೆಯನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದು, ಇಬ್ಬರಿಗೂ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ ಎಂದು ಹೇಳಲಾಗಿದೆ.ಹೀಗಾಗಿ ಆತನನ್ನು ಭೇಟಿಯಾಗಲು ಮಹಿಳೆಯು ಗಡಿ ದಾಟಿ ನೆರೆ ರಾಷ್ಟ್ರಕ್ಕೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಪಾಕಿಸ್ತಾನದಲ್ಲಿ ಮಹಿಳೆಯನ್ನು ಬಂಧಿಸಿ, ದಾಖಲೆ ಪರಿಶೀಲನೆ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಂಜು ಅವರಿಗೆ ಈಗಾಗಲೇ ಮದುವೆಯಾಗಿದೆ.ಪತಿ ಅರವಿಂದ್‌ ಜತೆ ಕೆಲ ದಿನಗಳ ಹಿಂದೆ ಜೈಪುರಕ್ಕೆ ತೆರಳಿದ್ದರು ಎಂದು ತಿಳಿದು ಬಂದಿದ್ದು, ಇದೇ ಸಮಯದಲ್ಲಿ ಆಕೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.ಜೈಪುರಕ್ಕೆ ಹೋಗುವ ನೆಪದಲ್ಲಿ ಗುರುವಾರ ಮನೆಯಿಂದ ಹೊರಟು ಹೋಗಿದ್ದಳು. ಆದರೆ ಆಕೆ ಪಾಕಿಸ್ತಾನದಲ್ಲಿದ್ದಾಳೆ ಎಂದು ಮನೆಯವರಿಗೆ ನಂತರ ತಿಳಿಯಿತು ಎಂದು ಆಕೆಯ ಪತಿ ಅರವಿಂದ್ ಪೊಲೀಸರಿಗೆ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಆಕೆ ಪತಿ ಅರವಿಂದ್ “ವಾಟ್ಸ್‌ಆ್ಯಪ್‌ನಲ್ಲಿ ನನ್ನ ಪತ್ನಿ ಸಂಪರ್ಕದಲ್ಲಿದ್ದಾಳೆ. ಆಕೆ ಕಳೆದ ಮಂಗಳವಾರ (ಜುಲೈ 18) ಪಾಕಿಸ್ತಾನಕ್ಕೆ ತೆರಳಿದ್ದಾಳೆ. ಭಾನುವಾರ (July 23) ಸಂಜೆ 4 ಗಂಟೆಗೆ ಕರೆ ಮಾಡಿದ್ದು,ವಾಪಾಸ್ಸಾಗುತ್ತೇನೆ ಎಂದಿದ್ದಾಳೆ.ಸದ್ಯ ಈಗ ಲಾಹೋರ್‌ನಲ್ಲಿದ್ದೇನೆ.ಎರಡು-ಮೂರು ದಿನದಲ್ಲಿ ವಾಪಸ್‌ ಬರುತ್ತೇನೆ ಎಂದು ಹೇಳಿದ್ದಾಳೆ” ಎಂದು ಪತಿ ಹೇಳಿದ್ದಾರೆ.

ಮತ್ತೊಂದೆಡೆ ಅರವಿಂದ ಅವರ ಪತ್ನಿ ಅಂಜು ಹಾಗೂ ನಸ್ರುಲ್ಲಾ ಫೇಸ್‌ಬುಕ್‌ ಮೂಲಕ ಪರಿಚಯವಾಗಿದ್ದಾರೆ. ಈ ವೇಳೆ ಪರಿಚಯ ಪ್ರೀತಿಗೆ ತಿರುಗಿದೆ ಎನ್ನಲಾಗಿದ್ದು,ನಸ್ರುಲ್ಲಾ ಮೆಡಿಕಲ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನ ಯುವಕನ ಪ್ರೀತಿಗೆ ಮರುಳಾಗಿ ಈಗ ಅಂಜು ಗಡಿ ದಾಟಿ ಹೋಗಿದ್ದಾರೆಯೇ ಎ್ನುವ ಅನುಮಾನ ವ್ಯಕ್ತವಾಗಿದೆ. 2020ರಲ್ಲೇ ಅಂಜು ಪಾಸ್‌ಪಾರ್ಟ್‌ ಮಾಡಿಸಿದ್ದು,ಹಾಗಾದರೆ 2 ವರ್ಷದ ಹಿಂದೆಯೇ ನಸ್ರುಲ್ಲಾ ಪರಿಚಯವಾಗಿದ್ದನೇ ಎನ್ನುವ ಬಗ್ಗೆಯೂ ಸಂದೇಹವಿದೆ.ಪಾಸ್ ಪೋರ್ಟ್ ಕುರಿತಂತೆ ಗಂಡ ಅಂಜುಗೆ ಪ್ರಶ್ನೆ ಮಾಡಿದ್ದು, ಇದಕ್ಕೆ ಅಂಜು ತಾನು ವಿದೇಶದಲ್ಲಿ ಕೆಲಸ ಹುಡುಕುತ್ತೇನೆ ಎಂದು ಹೇಳಿದ್ದರು ಎನ್ನಲಾಗಿದೆ.ಇದರ ಮಧ್ಯೆ ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಮಹಿಳೆ ತೆರಳಿದ್ದು, ಇವರ ನಡೆ ಅಚ್ಚರಿ ಮೂಡಿಸಿದೆ.  ಮಾಧ್ಯಮ ವರದಿಗಳ ನಂತರ ರಾಜಸ್ಥಾನ ಪೊಲೀಸರ ತಂಡವು ಅಂಜು ಅವರ ಬಗ್ಗೆ ವಿಚಾರಿಸಲು ಭಿವಾಡಿಯ ಮನೆಗೆ ತಲುಪಿದೆ ಎಂದು ತಿಳಿದು ಬಂದಿದೆ.

Related posts

ಬಾಹುಬಲಿ ಖ್ಯಾತಿಯ ಕಟ್ಟಪ್ಪನಿಗೆ ಕರೋನಾ ಸೋಂಕು

ಚರ್ಚ್‌ನಲ್ಲಿ ಧರ್ಮೋಪದೇಶ ವೇಳೆ ಬಿಷಪ್‌ ಗೆ ಚೂರಿ ಇರಿತ..! ಲೈವ್‌ ನಲ್ಲಿ ಸೆರೆಯಾಯ್ತು ಕೃತ್ಯ..! ಇಲ್ಲಿದೆ ವೈರಲ್ ವಿಡಿಯೋ

ವಿವಾಹಿತ ಮಹಿಳೆಯೊಂದಿಗೆ ಆತ ಪರಾರಿ! ಆತನ ಮೂಗನ್ನೇ ಕತ್ತರಿಸಿದ ಆಕೆಯ ತಂದೆ! ಇಲ್ಲಿದೆ ದುರಂತ ಪ್ರೇಮ ಕಥೆ!