ನ್ಯೂಸ್ ನಾಟೌಟ್: ನಾವು ದಿನಾ ಜಾಲತಾ0ಣಗಳಲ್ಲಿ ಹತ್ತಾರು ವಿಡಿಯೋಗಳನ್ನು ನೋಡಿದ್ದೇವೆ. ಆದರೆ ನರೇಂದ್ರ ಸಿಂಗ್ ಎನ್ನುವ ಟ್ವಟರ್ ಬಳಕೆ ದಾರರೊಬ್ಬರು ನದಿಯ ದಂಡೆಯ ಬದಿಯಲ್ಲಿದ್ದ ಮೊಸಳೆಯನ್ನು ಕೆಣಕಲು ಹೋಗಿರುವ ವೈರಲ್ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮೊಸಳೆಯೊಂದು ನದಿಯ ದಡದಲ್ಲಿ ಕೂತಿದ್ದು, ಯುವಕನೊಬ್ಬನು ಮೊಸಳೆಯ ವೇಷಭೂಷಣ ತೊಟ್ಟು ಮೊಸಳೆಯ ಹತ್ತಿರ ಹೋಗಿ ಅದರ ಕಾಲುಗಳನ್ನು ಎಳೆದು ಕಿತಾಪಿತಿ ಮಾಡಿ ಮೊಸಳೆಯನ್ನೇ ಮಂಗ ಮಾಡಿದ್ದಾನೆ. ಒಂದು ವೇಳೆ ಮೊಸಳೆ ಯವಕನ ಕಡೆ ತಿರುಗಿದರೆ ಯಾರೂ ಕೂಡಾ ನಿನ್ನನ್ನು ಉಳಿಸಲು ಆಗಲ್ಲ ಮತ್ತು ಸುಮ್ಮನೆ ಇರುವ ಮೊಸಳೆಗೆ ಯಾಕೆ ತೊಂದರೆ ಕೊಡುತ್ತೀಯ ಎಂದು ಜನರು ಟ್ವಿಟ್ಟರ್ ನಲ್ಲಿ ಟೀಕೆ ಮಾಡಿದ್ದಾರೆ.