ಕರಾವಳಿಕ್ರೈಂ

ಪುತ್ತೂರು : 8 ತಿಂಗಳಿನಿಂದ ತರೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಸೆರೆ ! ಇವನ ಮೇಲಿತ್ತು ಹಲವು ಪ್ರಕರಣ !

ನ್ಯೂಸ್ ನಾಟೌಟ್ : ಪುತ್ತೂರಿನ ದರ್ಬೆಯಲ್ಲಿ ಹಲ್ಲೆ ಮತ್ತು ಕೊಲೆ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿ  ನ್ಯಾಯಾಲಯದಿಂದ ವಾರೆಂಟ್ ಜಾರಿಯಾದ ಮೇಲೆ ತಲೆಮರಸಿಕೊಂಡಿದ್ದ ಆರೋಪಿಯನ್ನು ಫೆ. 19 ಭಾನುವಾರ ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಪುತ್ತೂರು ತಾಲೂಕಿನ ಮುಡ್ನೂರು ಕೊಂಬಾಲಿ ನಿವಾಸಿ ಸುಲೈಮಾನ್ ಎಂಬ ಈತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣಾ ಅಕ್ರ ನಂ, 54/2020 u/s 448, 323, 504, 506 ,r/w , 34 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿತ್ತು.

ಆದರೆ ಆರೋಪಿಯು ಸುಮಾರು 8 ತಿಂಗಳಿನಿಂದ ನ್ಯಾಯಾಲಯದಿಂದ ವಾರೆಂಟ್ ಜಾರಿಯಾಗಿದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಸವಣೂರು ಅಪ್ರಾಝ ಫೇರಾ ಡೈಸ್ ಫ್ಲಾಟ್ ನಿಂದ ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಎಎಸ್‌ಐ ಚಂದ್ರ, ಹೆಚ್. ಸಿ ಪರಮೇಶ್ ,ಹೆಚ್.ಸಿ ಸುರೇಶ್ ಮತ್ತು ಪಿ.ಸಿ ಗಿರಿ, ಪ್ರಶಾಂತ್ ಕುಮಾರ್ , ಪದ್ಮಾವತಿ ಇವರ ತಂಡ ಆರೋಪಿಯನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ವರದಿ ತಿಳಿಸಿದೆ.

Related posts

ಭಾರತದಲ್ಲಿ ನಾಪತ್ತೆಯಾಗಿದ್ದ ಬಾಂಗ್ಲ ಸಂಸದನ ಕೇಸ್ ಗೆ ಬಿಗ್ ಟ್ವಿಸ್ಟ್..! ಕತ್ತು ಹಿಸುಕಿ, ಚರ್ಮ ಸುಲಿದ ಸ್ಥಿತಿಯಲ್ಲಿ ಶವ ಪತ್ತೆ..!

ಸುಳ್ಯದಲ್ಲಿ ನಡೆದ ಬೃಹತ್ ತಾಳೆ ಬೆಳೆ ನಾಟಿ ಆಂದೋಲನ, ಅಗತ್ಯ ಅನುದಾನದ ಭರವಸೆ ನೀಡಿದ ಶಾಸಕಿ ಕುಮಾರಿ ಭಾಗಿರಥಿ ಮುರುಳ್ಯ

ಮಂಗಳೂರಿನಲ್ಲಿ ಧಗ..ಧಗ ಹೊತ್ತಿ ಉರಿದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು, ಅಡ್ಯಾರ್ ಸಹ್ಯಾದ್ರಿ ಕಾಲೇಜಿನ ಸಮೀಪ ಕಾರಿನಲ್ಲಿ ಹಠಾತ್ ಬೆಂಕಿ