ಕರಾವಳಿ

ಅಕ್ರಮ ಗೋಸಾಗಾಟ, ಬಜರಂಗದಳ ಕಾರ್ಯಕರ್ತರ ದಾಳಿ

ಬೆಳ್ತಂಗಡಿ : ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ವಿಫಲಗೊಳಿಸಿ, ಆರೋಪಿಯನ್ನು ವಾಹನ ಸಹಿತ ಪೋಲಿಸರಿಗೊಪ್ಪಿಸಿದ ಘಟನೆ ನಿನ್ನೆ ಮಧ್ಯರಾತ್ರಿ ನಡೆದಿದೆ.

ಕಡಿರುದ್ಯಾವರ ಗ್ರಾಮದ ಕುರುಡ್ಯದಿಂದ ಕಸಾಯಿಖಾನೆಗಳಿಗೆ ನಿನ್ನೆ ಮಧ್ಯರಾತ್ರಿ ಪಿಕ್ ಅಪ್ ಒಂದರಲ್ಲಿ ಅಕ್ರಮ ಗೋಸಾಗಾಟ ಮಾಡುತ್ತಿದ್ದ ವೇಳೆ ಬಜರಂಗದಳ ಕಾರ್ಯಕರ್ತರು ದಾಳಿ ನಡೆಸಿದ್ದು, ಅಕ್ರಮ ಗೋ ಸಾಗಾಟ ವಾಹನವನ್ನು ತಡೆದಿದ್ದಾರೆ.

ಪೋಲೀಸರ ಸಹಕಾರದಿಂದ ಒಬ್ಬಾತನನ್ನು ಬಂಧಿಸಿದ್ದು, ಸಾಗಾಟ ಮಾಡುತ್ತಿದ್ದ ಪಿಕ್ ಅಪ್ ಮತ್ತು ಮಾರುತಿ 800 ವಾಹನವನ್ನು ಗೋವು ಸಹಿತವಾಗಿ ಪೋಲಿಸರ ವಶಕ್ಕೆ ನೀಡಲಾಗಿದೆ. ಅಲ್ಲದೇ ಭಜರಂಗದಳದ ದಾಳಿ ವೇಳೆ ಇಬ್ಬರು ಆರೋಪಿಗಳು ಕತ್ತಲಲ್ಲೇ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ.

Related posts

ಕದ್ರಿ ದೇವಸ್ಥಾನಕ್ಕೆ ನುಗ್ಗಿದ ಅನ್ಯಕೋಮಿನ ಯುವಕರ ತಂಡ, ಉಗ್ರರ ಶಂಕೆ, ತೀವ್ರ  ತನಿಖೆ

ಮಡಿಕೇರಿ:ನಡು ಪೇಟೆಯಲ್ಲಿಯೇ ಗಜರಾಜನ ಓಡಾಟಕ್ಕೆ ಜನರು ಶಾಕ್‌;ಆನೆಯ ಮಾರ್ನಿಂಗ್‌ ವಾಕಿಂಗ್‌ಗೆ ಬೆಚ್ಚಿಬಿದ್ದ ಪಟ್ಟಣದ ನಿವಾಸಿಗಳು

ಕಾರ್ಕಳ:ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಬಸ್‌:ವಾಹನ ಜಖಂ, 13 ಮಂದಿಗೆ ಗಾಯ