ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಗೋ ಹತ್ಯೆ ಮಾಡಿದ್ರೆ ಸರ್ಕಲ್‌ ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದ ಕಾಂಗ್ರೆಸ್ ಸಚಿವ..! ಮಂಕಾಳ ವೈದ್ಯ ಖಡಕ್ ಎಚ್ಚರಿಕೆ..!

ನ್ಯೂಸ್ ನಾಟೌಟ್ : ಹಾಲು ಕೊಡುವ ಗೋ ಹತ್ಯೆ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಘಟನೆಗಳು ಮುಂದುವರಿದಲ್ಲಿ ತಪ್ಪತಸ್ಥರಿಗೆ ಸರ್ಕಲ್‌ನಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕಾಗುತ್ತದೆ ಎಂದು ಸಚಿವ ಮಂಕಾಳ್ ವೈದ್ಯ ಎಚ್ಚರಿಕೆ ನೀಡಿದ್ದಾರೆ.

ಕಾರವಾರದಲ್ಲಿ ಮಾತನಾಡಿದ, ಉತ್ತರ ಕನ್ನಡ ಜಿಲ್ಲೆಯಲ್ಲಿ ಹಸು ಕಳ್ಳತನ ಹಲವು ವರ್ಷಗಳಿಂದ ನಡೆದುಬಂದಿದೆ. ಇಂತಹ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಈಗಾಗಲೇ ಹಲವು ಪ್ರಕರಣದಲ್ಲಿ ಆರೋಪಿಗಳನ್ನು ಕೂಡ ಬಂಧಿಸಲಾಗಿದೆ. ಇನ್ನೂ ಮೇಲೆಯೂ ಇಂತಹ ಘಟನೆಗಳು ಮರುಕಳಿಸಿದರೇ ನಾವು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನು ಶಾಸಕ ದಿನಕರ್ ಶೆಟ್ಟಿ ವಿರುದ್ಧ ಅಸಮಾಧಾನ ಹೊರಹಾಕಿದ ಸಚಿವರು, ಕುಮಟಾದಲ್ಲೂ ಗೋಹತ್ಯೆ ನಡೆದಿದೆ. ಹಾಗಂತಾ ದಿನಕರ ಶೆಟ್ಟಿ ದಿನಕರ ಖಾನ್ ಆಗಿಬಿಡ್ತಾರಾ? ಮಾತನಾಡುವಾಗ ನೋಡಿಕೊಂಡು ಮಾತನಾಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಗೋಹತ್ಯೆಗಳು ನಡೆದಿವೆ. ಬಿಜೆಪಿ ಕೆಟ್ಟ ರಾಜಕಾರಣ ಮಾಡುವುದನ್ನು ಬಿಡಬೇಕು. ನಮ್ಮ ಸರ್ಕಾರದಲ್ಲಿ ಗೋಹತ್ಯೆ ಮಾಡಿದ ಆರೋಪಿಗಳ ಬಂಧನವಾಗಿದೆ. ನಾವು ಸುಮ್ಮನೆ ಕುಳಿತಿಲ್ಲ, ಕೆಲಸ ಮಾಡುತ್ತಿದ್ದೇವೆ. ಮುಖ್ಯಮಂತ್ರಿ, ಗೃಹ ಸಚಿವರು ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

Click

ಮಂಗಳೂರು: ರಾತ್ರಿ ಕರ್ತವ್ಯದಲ್ಲಿದ್ದ ಪೊಲೀಸರ ವಾಕಿಟಾಕಿ ಕಳವು..! ಪ್ರಕರಣ ದಾಖಲು

ನಾಪತ್ತೆಯಾದ 11 ಬಾಲಕಿಯರ ಜಾಡು ಹಿಡಿದ ಪೊಲೀಸರಿಗೆ ಕಾದಿತ್ತು ಶಾಕ್..! ಅಂಕಿತ್ ಎಂದು ಹೆಸರು ಬದಲಿಸಿಕೊಂಡಿದ್ದ ಅಫ್ತಾಬ್ ಖಾನ್ ನ ರಹಸ್ಯ ಬಯಲು..!

Related posts

ದಾಖಲೆ ಬರೆದ ಆರ್ ಆರ್ ಆರ್, ಆಸ್ಕರ್ ಗೆದ್ದ ಆ ಹಾಡು ಯಾವುದು?

ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ದೋಣಿ ಮಗುಚಿ ಪುಟ್ಟ ಮಕ್ಕಳ ದುರಂತ ಅಂತ್ಯ! 10 ಮಕ್ಕಳು ನಾಪತ್ತೆ..!

ಅಪ್ಪನ ಮೇಲೆ ಸಿಟ್ಟಾಗಿ ಹೈಟೆನ್ಷನ್‌ ವಿದ್ಯುತ್‌ ಕಂಬವೇರಿದ ಮಗ..! ಇಲ್ಲಿದೆ ಕುಡುಕ ಮಗನ ಫಜೀತಿ!