ವಿಡಿಯೋವೈರಲ್ ನ್ಯೂಸ್

ಕಚ್ಚುವುದಕ್ಕಾಗಿ ಹೆಡೆ ಎತ್ತಿದ್ದ ನಾಗರ ಹಾವಿಗೆ ಪ್ರೀತಿ ತೋರಿದ ಗೋವು..! ಇಲ್ಲಿದೆ ಅಚ್ಚರಿ ಮೂಡಿಸಿದ ವಿಚಿತ್ರ ವಿಡಿಯೋ

192

ನ್ಯೂಸ್ ನಾಟೌಟ್ : ಸೋಶಿಯಲ್ ಮೀಡಿಯಾದಲ್ಲಿ ಕೆಲವು ದೃಶ್ಯಗಳನ್ನು ಕಂಡಾಗ ಆಚ್ಚರಿಯ ದೃಶ್ಯವೊಂದು ಕಂಡಿದೆ. ಈ ದನ ಮತ್ತು ನಾಗರಹಾವಿನ ದೃಶ್ಯ ಸಿನಿಮಾ ದೃಶ್ಯದಂತೆ ಕಂಡಿದೆ. ಈ ದೃಶ್ಯವನ್ನು ಕಂಡ ಸಾಕಷ್ಟು ಮಂದಿ ಇದು ನಿರ್ಮಲ ಪ್ರೀತಿ ಎಂದು ಬಣ್ಣಿಸಿದ್ದಾರೆ.

ಸದಾ ಆಸಕ್ತಿಕರ ದೃಶ್ಯಗಳನ್ನು ಹಂಚಿಕೊಳ್ಳುವ ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ. 17 ಸೆಕೆಂಡುಗಳ ಈ ಕ್ಲಿಪ್‌ನಲ್ಲಿ ನಾಗರಹಾವೊಂದು ಹೆಡೆ ಎತ್ತಿರುವುದು ಕಾಣಿಸುತ್ತದೆ. ಪಕ್ಕದಲ್ಲಿ ಈ ಹಾವನ್ನು ಕುತೂಹಲದಿಂದ ನೋಡುತ್ತಾ ದನವೊಂದು ನಿಂತಿದೆ.

ಹೀಗೆ ಹಾವನ್ನು ಕುತೂಹಲದಿಂದ ನೋಡುವ ದನ ಬಳಿಕ ಪ್ರೀತಿ ತೋರುತ್ತದೆ. ಅಕ್ಕರೆಯಿಂದ ಹಾವಿನ ಹೆಡೆಯನ್ನು ನೆಕ್ಕುತ್ತದೆ. `ವಿವರಿಸಲು ಕಷ್ಟ. ಶುದ್ಧ ಪ್ರೀತಿಯಿಂದ ಗಳಿಸಿದ ವಿಶ್ವಾಸ’ ಎಂಬ ಶೀರ್ಷಿಕೆಯೊಂದಿಗೆ ಸುಸಂದ ನಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

See also  15 ದಿನಗಳಲ್ಲಿ ಮನೆ ಬಾಗಿಲಿಗೆ ಬರಲಿದೆ ರಾಜ್ಯದ 400 ದೇಗುಲಗಳ ಪ್ರಸಾದ..! ಮುಜರಾಯಿಯಿಂದ ಇ-ಪ್ರಸಾದ ಸೇವೆಯಲ್ಲಿ ಹೊಸ ಪ್ರಯೋಗ..!
  Ad Widget   Ad Widget   Ad Widget       Ad Widget     Ad Widget   Ad Widget   Ad Widget   Ad Widget   Ad Widget   Ad Widget