Uncategorized

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ರೈಲಿನಡಿಗೆ ಬಿದ್ದರು..!ಇಬ್ಬರು ಮಕ್ಕಳು ದುರಂತ ಅಂತ್ಯ,ಏನಿದು ಹೃದಯವಿದ್ರಾವಕ ಘಟನೆ?

ನ್ಯೂಸ್ ನಾಟೌಟ್‌: ನಾಯಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ದಾರುಣವಾಗಿ ಅಂತ್ಯವಾಗಿರುವ ಹೃದಯ ವಿದ್ರಾವಕ ಘಟನೆಯೊಂದು ವರದಿಯಾಗಿದೆ.ರಾಜಸ್ಥಾನದ ಜೋಧ್‌ಪುರದಲ್ಲಿ ಈ ಘಟನೆ ನಡೆದಿದ್ದು,ನಗರದ ಮಾತಾ ಕಾ ಥಾನ್‌ನಲ್ಲಿ ಈ ದುರ್ಘಟನೆ ನಡೆದಿದೆ.

ಉಸಿರು ಚೆಲ್ಲಿರುವ ಇಬ್ಬರು ಮಕ್ಕಳು ಕೂಡ ಸೋದರ ಸಂಬಂಧಿಗಳು ಎಂದು ತಿಳಿದು ಬಂದಿದೆ. ಅನನ್ಯಾ (12) ಮತ್ತು ಯುವರಾಜ್ ಸಿಂಗ್ (14) ಬಾರದ ಲೋಕಕ್ಕೆ ತೆರಳಿದ ಇಬ್ಬರು ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ.ಇಬ್ಬರು ಗಣೇಶ್ ಪುರ ಮತ್ತು ಬನಾರ್ ನಿವಾಸಿಗಳಾಗಿದ್ದು, ಆರ್ಮಿ ಚಿಲ್ಡ್ರನ್ ಅಕಾಡೆಮಿಯಲ್ಲಿ 5 ಮತ್ತು 7 ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ವರದಿಯಾಗಿದೆ.

ಮೂವರು ಸ್ನೇಹಿತರೊಂದಿಗೆ ಶಾಲೆಯಿಂದ ವಾಪಸಾಗುತ್ತಿದ್ದ ವೇಳೆ ನಾಯಿಗಳು ಹಿಂಬಾಲಿಸಲು ಆರಂಭಿಸಿವೆ. ಗಾಬರಿಗೊಂಡ ಮಕ್ಕಳು ಭಯಭೀತರಾಗಿ ಓಡಲು ಆರಂಭಿಸಿದ್ದಾರೆ. ಓಡುತ್ತಿರುವಾಗ ರೈಲ್ವೆ ಟ್ರ್ಯಾಕ್ ತಲುಪಿದರು ಮತ್ತು ಸ್ವಲ್ಪ ಸಮಯದ ನಂತರ ಅನನ್ಯ ಮತ್ತು ಯುವರಾಜ್‌ ಗೂಡ್ಸ್ ರೈಲ್ ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಅಪಘಾತದ ಬಗ್ಗೆ ಮಾಹಿತಿ ಪಡೆದ ಎಸಿಪಿ ಮಂಡೋರೆ ಪಿಯೂಷ್ ಕಾವಿಯಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಹಾಗೂ, ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಘಟನೆ ಬಗ್ಗೆ ಎಚ್ಚೆತ್ತುಕೊಂಡ ಜೋಧ್‌ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡ ನಾಯಿಗಳನ್ನು ಹಿಡಿದಿದೆ ಎಂದೂ ವರದಿಯಾಗಿದೆ.ಕುಟುಂಬಸ್ಥರ ರೋಧನ ಮುಗಿಲು ಮುಟ್ಟುವಂತಿತ್ತು ಎಂದು ತಿಳಿದು ಬಂದಿದೆ.

Related posts

ಮಹಿಳೆಗೆ ಕಿರುಕುಳ: ಮೈಸೂರಿನಲ್ಲಿ ಪೊಲೀಸಪ್ಪನ ಕಾಮ ಪುರಾಣ..!

ಕೈಹಿಡಿದ ಪತಿಯನ್ನು ಕೊಂದ ಪತ್ನಿ ಆಕೆಯ ಪ್ರಿಯಕರ ಅರೆಸ್ಟ್, ನಾಲ್ಕು ವರ್ಷದ ಮಗು ಅನಾಥ..!

ಮೇಕಪ್ ಎಫೆಕ್ಟ್ :ಮುಖ ವಿಕಾರ,ಆಸ್ಪತ್ರೆ ಸೇರಿದ ವಧು!,ಮದುವೆ ಕ್ಯಾನ್ಸಲ್ ಮಾಡಿದ ವರ