Latestಕ್ರೈಂವೈರಲ್ ನ್ಯೂಸ್ಸಿನಿಮಾ

ಕೋರ್ಟ್​ ಹಾಲ್ ​ನಲ್ಲಿ ದರ್ಶನ್ ಕೈ ಹಿಡಿದ ಪವಿತ್ರಾ..! ದರ್ಶನ್ ಪ್ರಕರಣದ ವಿಚಾರಣೆ ಮತ್ತೆ ಮುಂದೂಡಿಕೆ..!

837

ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಕೇಸ್ ​ನಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ದಾರೆ. ದರ್ಶನ್ ಎ2 ಆರೋಪಿ ಎನಿಸಿಕೊಂಡಿದ್ದಾರೆ. ಇಂದು(ಮೇ.20) ಪ್ರಕರಣದ ವಿಚಾರಣೆ ಬೆಂಗಳೂರಿನ 57ನೇ ಸಿಸಿಹೆಚ್​ ಕೋರ್ಟ್​ನಲ್ಲಿ ನಡೆದಿದೆ.

ಕೋರ್ಟ್​ ಹಾಲ್ ​ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಕೋರ್ಟ್​ನಲ್ಲಿ ಅಕ್ಕ-ಪಕ್ಕದಲ್ಲಿ ನಿಂತಿದ್ದರು. ಅಷ್ಟೇ ಅಲ್ಲ, ಕೋರ್ಟ್​ನಿಂದ ಹೊರ ಬರುವಾಗ ದರ್ಶನ್​ ಕೈ ಯನ್ನು ಪವಿತ್ರಾ ಹಿಡಿದುಕೊಂಡಿದ್ದರು.

ರೇಣುಕಾಸ್ವಾಮಿ ಕೊಲೆ ಕೇಸ್ ​ನಲ್ಲಿ 17 ಜನರನ್ನು ಪೊಲೀಸರು ಬಂಧಿಸಿದ್ದರು. ಈಗಾಗಲೇ ಎಲ್ಲಾ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಜಾಮೀನು ನೀಡುವಾಗ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಅವುಗಳ ಪೈಕಿ ಕೋರ್ಟ್ ​ಗೆ ಹಾಜರಿ ಹಾಕಬೇಕು ಎಂಬುದು ಕೂಡ ಪ್ರಮುಖ ಷರತ್ತಾಗಿತ್ತು. ಅದರಂತೆ ಪವನ್ ಹೊರತುಪಡಿಸಿ ಮತ್ತೆಲ್ಲಾ ಆರೋಪಿಗಳು ಕೋರ್ಟ್​ಗೆ ಹಾಜರಿ ಹಾಕಿದ್ದಾರೆ.

ಕೋರ್ಟ್​ನಲ್ಲಿ ದರ್ಶನ್ ಹಾಗೂ ಪವಿತ್ರಾ ಅಕ್ಕ-ಪಕ್ಕ ಇದ್ದರು. ಕೋರ್ಟ್​ನಿಂದ ಹೊರಹೋಗುವಾಗ ಜನ ಜಂಗುಳಿ ಇತ್ತು. ಈ ಕಾರಣಕ್ಕೆ ದರ್ಶನ್ ಹಾಗೂ ಪವಿತ್ರಾ ಕೈ ಕೈ ಹಿಡಿದು ಬಂದ ಬಗ್ಗೆ ವರದಿ ಆಗಿದೆ. ಇನ್ನು, ಜುಲೈ 10ಕ್ಕೆ ವಿಚಾರಣೆ ಮುಂದೂಡಲಾಗಿದೆ. ಅಂದು ಎಲ್ಲ ಆರೋಪಿಗಳು ಹಾಜರಿ ಹಾಕಲು ಕೋರ್ಟ್​ ಸೂಚಿಸಿದೆ.

ಆಸ್ಪತ್ರೆ ಹೊರಗಿನ ಫುಟ್‍ ಪಾತ್‍ ನಲ್ಲಿ ತಂದೆಯೊಂದಿಗೆ ಮಲಗಿದ್ದ ಮಗುವಿನ ಅಪಹರಣ..! ಬಲೂನ್‍ ಗಳನ್ನು ಮಾರಾಟ ಮಾಡಿ ಜೀವಿಸುತ್ತಿದ್ದ ಕುಟುಂಬ..!

See also  ನಿಂತಿದ್ದ ಆಟೋದಿಂದ ಹಣ ಲಪಟಾಯಿಸುವುದೇ ವೃತ್ತಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget