ಕ್ರೈಂ

ನಿಂತಿದ್ದ ಆಟೋದಿಂದ ಹಣ ಲಪಟಾಯಿಸುವುದೇ ವೃತ್ತಿ..!

387
Spread the love

ಪುತ್ತೂರು: ನಿಲ್ಲಿಸಿದ ಆಟೋ ರಿಕ್ಷಾದಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಕಳೆದ ತಿಂಗಳು ಪುತ್ತೂರಿನ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಟ್ಟಡ ಮತ್ತು ಏಳ್ಳುಡಿಯಲ್ಲಿ ನಿಲ್ಲಿಸಲಾಗಿದ್ದ ಆಟೋದಿಂದ ನಗದು ಎಗರಿಸಿದ್ದ ಎಂದು ದೂರು ಬಂದಿತ್ತು. ಪುತ್ತೂರಿನ ಕೆಮ್ಮಿಂಜೆ ನಿವಾಸಿ ಮಹಮ್ಮದ್ ಸಾಲೆಕ್ ಆರೋಪಿಯಾಗಿದ್ದಾನೆ. ಈತ ಡಿ.9ರಂದು ಏಳ್ಳುಡಿಯಲ್ಲಿ ರಾಮ್ ರಾಜ್ ಸಂಸ್ಥೆಯ ಮುಂದೆ ನಿಲ್ಲಿಸಿದ್ದ ಆಟೋದಿಂದ 9,400 ಹಾಗೂ ಹಾಗೂ ಡಿ.31 ರಂದು ಎಪಿಎಂಸಿ ರಸ್ತೆ ಕ್ರಿಸ್ಟೋಫರ್ ಕಾಂಪ್ಲೆಕ್ಸ್‌ ನ ಆಟೋ ರಿಕ್ಷಾ ಗ್ಯಾರೇಜ್ ಬಳಿ ನಿಲ್ಲಿಸಿದ್ದ ಆಟೋದಿಂದ ರು. 14,600 ಕಳವಾಗಿತ್ತು. ಈ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿ ಈಗ ಆರೋಪಿಯನ್ನು ಬಂಧಿಸಿದ್ದಾರೆ.

See also  ಹೆದ್ದಾರಿ ಬದಿಯ ಮರಕ್ಕೆ ಗುದ್ದಿ ನಿಂತ ಬಸ್ , ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ
  Ad Widget   Ad Widget   Ad Widget   Ad Widget   Ad Widget   Ad Widget