ಕ್ರೈಂಬೆಂಗಳೂರುವೈರಲ್ ನ್ಯೂಸ್

ಪತ್ನಿಯನ್ನು ಬೆಟ್ಟಕ್ಕೆ ಕರೆದೊಯ್ದು ಕೊಂದು ಅರಣ್ಯದಲ್ಲಿ ಶವ ಎಸೆದು ಪರಾರಿಯಾದ ಪತಿ..! ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ..!

ನ್ಯೂಸ್ ನಾಟೌಟ್: ಕೌಟುಂಬಿಕ ಕಲಹ ಹಿನ್ನೆಲೆ ಪತಿಯಿಂದಲೇ ಪತ್ನಿ ಹತ್ಯೆಯಾದ ಘಟನೆ ರಾಮನಗರದ ಮಾಗಡಿ ತಾಲೂಕಿನ ಹೂಜಗಲ್ಲು ಬೆಟ್ಟದಲ್ಲಿ ನಡೆದಿದೆ.
ದಿವ್ಯಾ (32) ಗಂಡನಿಂದಲೇ ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಉಮೇಶ್ ಎಂಬಾತ ಪತ್ನಿಯನ್ನು ಹತ್ಯೆಗೈದು ಪರಾರಿಯಾಗಿದ್ದಾನೆ.

ಕೌಟುಂಬಿಕ ಕಲಹ ಹಿನ್ನೆಲೆ ವಿಚ್ಛೇದನ ಪಡೆಯಲು ದಂಪತಿ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ(ಆ.13) ಮಾಗಡಿ ಕೋರ್ಟ್‌ಗೆ ದಂಪತಿ ಹಾಜರಾಗಿದ್ದರು.
ಬಳಿಕ ನಾಟಕವಾಡಿ ಒಪ್ಪಿಸಿ ಪತ್ನಿಯನ್ನು ದೇವಸ್ಥಾನಕ್ಕೆಂದು ಹೂಜಗಲ್ಲು ಬೆಟ್ಟಕ್ಕೆ ಕರೆದೊಯ್ದ ಉಮೇಶ್, ಪೂಜೆ ಮಾಡುವ ವೇಳೆ ಪತ್ನಿ ದಿವ್ಯಾಳ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಶವವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಆರೋಪಿ ಎಸ್ಕೇಪ್ ಆಗಿದ್ದಾನೆ. ಈ ಪ್ರಕರಣ ಸಂಬಂಧ ಐವರ ಮೇಲೆ ಮಾಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Click

https://newsnotout.com/2024/08/renuka-swamy-and-darshan-case-pavitra-gowda-issue-another-evidence/
https://newsnotout.com/2024/08/ayodya-main-street-lights-are-theft-by-unkown-and-fir-kananda-news/

Related posts

ಜೀವಂತ ಕೋಳಿ ಮರಿ ನುಂಗಿ ವ್ಯಕ್ತಿ ಸಾವು..! ಬದುಕಿಬಂದ ಮರಿ, ವಾಮಾಚಾರದ ಶಂಕೆ..!

ಇಲ್ಲಿದೆ ಮೋದಿ ವಿರುದ್ಧ ಕಣಕ್ಕಿಳಿದವರ ಪಟ್ಟಿ, ಯಾರು ಆ 4 ಮಂದಿ..?

ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಮಗನನ್ನು ಕಳೆದುಕೊಂಡ ತಂದೆ ಮಾಡಿದ ತನಿಖೆಗೆ ಪೊಲೀಸರೇ ಶಾಕ್! 8 ವರ್ಷದ ಬಳಿಕ ಕೇಸ್ ರೀಓಪನ್ ಆಗಿದ್ದೇಗೆ? ಇಲ್ಲಿದೆ ಸಿನಿಮೀಯ ಘಟನೆ