ಕೊಡಗು

ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಕ್ಕೆ ಕೊಡಗಿನ ಯೋಧ ಬಲಿ

ನ್ಯೂಸ್ ನಾಟೌಟ್ : ಕರ್ತವ್ಯದಲ್ಲಿದ್ದ ಕೊಡಗಿನ ವೀರ  ಯೋಧ ಉತ್ತರಾಖಂಡ್‌ನಲ್ಲಿ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಮಹೇಶ್ (46) ಮೃತ ಯೋಧ.

ಇವರು ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದವರು. ಮೃತರು ಪತ್ನಿ, ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ. ಜೂನಿಯರ್ ಕಮೀಷನ್ ಆಫೀಸರ್ (JCO) ಆಗಿ ಉತ್ತರಾಖಂಡ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಬಂದು ಹೋಗಿದ್ದರು.

Related posts

ನಾಳೆ ಕೊಡಗು ಜಿಲ್ಲೆಯ ಶಾಲಾ – ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರ ಪ್ರತಿಭಟನೆ

ಮಡಿಕೇರಿ:ಪ್ರವಾಸಿ ತಾಣದಲ್ಲಿ ಪ್ರವಾಸಿಗರ ಜತೆ ಅನುಚಿತವಾಗಿ ವರ್ತಿಸಿದರೆ ಹುಷಾರ್ , ಕೊಡಗು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹೇಳಿದ್ದೇನು?