ಕರಾವಳಿ

RSS ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ನಿರೀಕ್ಷಣಾ ಜಾಮೀನು, ₹ 2 ಲಕ್ಷ ಮುಚ್ಚಳಿಕೆ ಬಾಂಡ್ ಬರೆಸಿಕೊಂಡ ನ್ಯಾಯಾಲಯ

ನ್ಯೂಸ್ ನಾಟೌಟ್ : ಹನುಮಾನ್ ಮಾಲಧಾರಿಗಳ ಸಂಕೀರ್ತನಾ ಯಾತ್ರೆ ವೇಳೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರಿಗೆ ಶ್ರೀರಂಗಪಟ್ಟಣದ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

₹ಪ್ರಭಾಕರ್‌ ಭಟ್‌ ಅವರು ಮುಸ್ಲಿಂ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತೆ ಪಿರಿಯಾಪಟ್ಟಣದ ನಜ್ಮಾ ನಜೀರ್ ಅವರು ಪಟ್ಟಣ ಶ್ರೀರಂಗಪಟ್ಟಣ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರುದಾರರ ಪರ ಹೈಕೋರ್ಟ್‌ ವಕೀಲ ಎಸ್‌. ಬಾಲನ್ ವಾದ ಮಂಡಿಸಿದ್ದರು. 2 ಲಕ್ಷ ಮುಚ್ಚಳಿಕೆ ಬಾಂಡ್ ಮತ್ತು ಇಬ್ಬರ ಜಾಮೀನು ಷರತ್ತಿಗೆ ಅನುಗುಣವಾಗಿ ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ಜಾಮೀನು ಮಂಜೂರು ಮಾಡಿದ್ದರು. ಕಲ್ಲಡ್ಕ ಪ್ರಭಾಕರ ಭಟ್‌ ಅವರ ಪರ ವಕೀಲ ಡಿ. ಚಂದ್ರೇಗೌಡ ಮಾತನಾಡಿ ‘ದೂರುದಾರರ ಹುನ್ನಾರ ವಿಫಲವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಗೊಂಡ ಅಂಶಗಳ ವಾಸ್ತವಾಂಶದ ಬಗ್ಗೆ ತನಿಖೆ ನಡೆಸಬೇಕಾದ ಅವಶ್ಯಕತೆ ಇದೆ. ಹೀಗಾಗಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ’ ಎಂದರು.

Related posts

ಕಾಂಗ್ರೆಸ್‌ ಪ್ರಣಾಳಿಕೆಗೆ ಚುನಾವಣೆಯಲ್ಲಿ ಉತ್ತರ

ಸುಳ್ಯ: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ, ಪ್ರತಿಯೊಬ್ಬರೂ ರಕ್ತದಾನ ಮಾಡಿ: ಡಾ| ಕೆ.ವಿ. ರೇಣುಕಾ ಪ್ರಸಾದ್ ಕರೆ

ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅಗತ್ಯ : ಡಾ|ಕೆ.ವಿ. ಚಿದಾನಂದ