ಕರಾವಳಿಬೆಂಗಳೂರುರಾಜಕೀಯ

ನಳಿನ್ ಕುಮಾರ್ ಕಟೀಲ್ ‘ಕಾಮಿಡಿ ಕಿಲಾಡಿ’, ಅಧ್ಯಕ್ಷಗಿರಿಯನ್ನು ಸಂತೋಷ್ ಪಾದರಕ್ಷೆಗಳಿಗೆ ಲೀಸ್ ನೀಡಿದ್ರು..!

ನ್ಯೂಸ್ ನಾಟೌಟ್: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಈಗಷ್ಟೇ ರಾಜೀನಾಮೆ ನೀಡಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗ ಟೀಕಿಸಿದೆ. ಅವರೊಬ್ಬರು ‘ಕಾಮಿಡಿ ಕಿಲಾಡಿ’ ಎಂದು ಕಾಲೆಳೆದಿದೆ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಡಾ.ಜಿ.ಪರಮೇಶ್ವರ್ ಬಗ್ಗೆ ನೀಡಿರುವ ಗೃಹ ಖಾತೆಯನ್ನು ಮರಿ ಖರ್ಗೆಗೆ ಲೀಸ್ ಗೆ ಕೊಟ್ಟಿದ್ದಾರೆ ಎಂಬ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲಿಗೆ ಕಾರಣನಾದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಕಾಮನ್ ಸೆನ್ಸ್ ಇಲ್ಲ, ಇವರಿಗೆ ಸಂಸದೀಯ ನಿಯಮಗಳ ಬಗ್ಗೆ ಅರಿವಿರಲು ಸಾಧ್ಯವೇ? ಅದು ಹೇಗೆ ಸಾಧ್ಯ ಎಂದು ಪ್ರಶ್ನೆ. ಪ್ರಿಯಾಂಕ್ ಖರ್ಗೆ ಅವರಿಗೆ ಅವರ ಜವಾಬ್ದಾರಿ ಬಗ್ಗೆ ತಿಳಿದಿದೆ. ಅವರು ಕಲಬುರಗಿ ಉಸ್ತುವಾರಿ ಸಚಿವರು, ಅಲ್ಲಿನ ವ್ಯವಸ್ಥೆ ಸರಿಪಡಿಸುವುದು ಅವರ ಹೊಣೆಗಾರಿಕೆ. ಅಲ್ಲಿನ ಅಧಿಕಾರಿಗಳನ್ನು ಸರಿದಾರಿಗೆ ತರುವುದು ಅವರದ್ದೇ ಜವಾಬ್ದಾರಿ ಎಂದು ಕಾಂಗ್ರೆಸ್ ಉತ್ತರಿಸಿದೆ. ಕಟೀಲ್ ಅವರೇ ತಾವು ಅಧ್ಯಕ್ಷಗಿರಿಯನ್ನು ಬಿಎಲ್ ಸಂತೋಷ್ ಅವರ ಪಾದರಕ್ಷೆಗಳಿಗೆ ಲೀಸ್ ಗೆ ಕೊಟ್ಟಿದ್ದೀರಿ ಎಂದ ಮಾತ್ರಕ್ಕೆ ಬೇರೆಲ್ಲರೂ ಹಾಗೆಯೇ ಎಂದು ತಿಳಿಯುವುದು ಮೂರ್ಖತನ ಎಂದು ಕಾಂಗ್ರೆಸ್ ಕಿಡಿಕಾರಿದೆ.

Related posts

ಅಪರೂಪದ ಸುಳಿಗಾಳಿ: ಕೊಕ್ಕಡ ಸಮೀಪದ ಕೌಕ್ರಾಡಿ ಗ್ರಾಮದ ಮೂಡುಬೈಲಿನಲ್ಲಿ ಅಪಾರ ಹಾನಿ

ರಾಹುಲ್‌ ಗಾಂಧಿ ಒಬ್ಬ ಅರೆಹುಚ್ಚ, ಅಂಥವರನ್ನೆಲ್ಲ ಜಿ20ಗೆ ಕರೆಯೋಕೆ ಆಗುತ್ತಾ?, ಬಿಜೆಪಿ ನಾಯಕ ಬಸವನ ಗೌಡ ಪಾಟೀಲ್ ಯತ್ನಾಳ್ ವ್ಯಂಗ್ಯ

ಬಳಂಜ: ಮನೆಗೆ ಸಿಡಿಲು ಬಡಿದು ಅಪಾರ ನಷ್ಟ