ರಾಜಕೀಯ

ನ್ಯೂಸ್ ನಾಟೌಟ್ ಬಿಗ್‌ ಎಫೆಕ್ಟ್: ಗೋಳಿತೊಟ್ಟು-ಕೊಕ್ಕಡ ರಸ್ತೆ ರಿಪೇರಿಗೆ ಕೊನೆಗೂ ಮುಂದಾದ ಸರಕಾರ

925

ನೆಲ್ಯಾಡಿ: ಗೋಳಿತೊಟ್ಟು-ಕೊಕ್ಕಡ ರಸ್ತೆಯ ಬಗ್ಗೆ ನ್ಯೂಸ್ ನಾಟೌಟ್ ಕನ್ನಡ ವೆಬ್‌ಸೈಟ್‌ ನಲ್ಲಿ ಸರಣಿ ವಿಶೇಷ ವರದಿ ಪ್ರಕಟಗೊಂಡ ಬೆನ್ನಲ್ಲೇ ಸರಕಾರ ಎಚ್ಚೆತ್ತುಕೊಂಡಿದೆ. ಮುಂದಿನ ವಾರದಿಂದ ಬಳಿಯಿರುವ ಅನುದಾನ ಬಳಸಿಕೊಂಡು ಶಿಥಿಲಗೊಂಡ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ಪಿಡಬ್ಲ್ಯುಡಿ ಸಹಾಯಕ ಕಾರ್ಯ ನಿರ್ವಾಹಕ ಎಂಜಿನೀಯರ್ ರಾಜಾರಾಮ್‌ ನ್ಯೂಸ್ ನಾಟೌಟ್ ಗೆ ಪ್ರತಿಕ್ರಿಯಿಸಿದ್ದಾರೆ. ಅಲ್ಲದೇ ಶೀಘ್ರದಲ್ಲೇ ಪೂರ್ಣ ಅನುದಾನ ಬಳಸಿಕೊಂಡು ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

2 ಕೋಟಿ ರೂ. ಬೇಕು: ಕನಿಷ್ಕ್

ಮೊಬೈಲ್‌ನಲ್ಲಿ ನ್ಯೂಸ್ ನಾಟೌಟ್ ವೆಬ್‌ ಸೈಟ್ ವರದಿ ಬಂದಿತ್ತು. ಇದನ್ನು ಆಧರಿಸಿ ನಮ್ಮ ಕಾರ್ಯಕಾರಿ ಇಂಜಿನೀಯರ್ ಯಶವಂತ್ ಅವರು ಸ್ಥಳ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು. ಅದರಂತೆ ನಮ್ಮ ತಂಡ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಸದ್ಯ ರಸ್ತೆ ರಿಪೇರಿಗೆ 2 ಕೋಟಿ ರೂ. ಬೇಕು. ಅದು ಇನ್ನೇನು ಬಿಡುಗಡೆ ಹಂತದಲ್ಲಿದೆ. ಅದಕ್ಕೂ ಮೊದಲು ನಮ್ಮ ಇಲಾಖೆಯಲ್ಲಿರುವ ಹಣವನ್ನು ಬಳಸಿಕೊಂಡು ರಸ್ತೆ ರಿಪೇರಿ ಮಾಡಿ ಜನರ ಸುಲಭ ಓಡಾಟಕ್ಕೆ ತಾತ್ಕಲಿಕ ಪರಿಹಾರ ಒದಗಿಸುತ್ತೇವೆ. ಸದ್ಯ ರಸ್ತೆ ಪ್ಯಾಚ್‌ ವರ್ಕ್‌ ಗೆ ಅಂದಾಜು ಎಂದರೂ 30 ಲಕ್ಷ ರೂ. ಬೇಕು ಎಂದು ಪಿಡಬ್ಲ್ಯುಡಿ ಸಹಾಯಕ ಎಂಜಿನೀಯರ್ ಕನಿಷ್ಕ್ ತಿಳಿಸಿದ್ದಾರೆ. ನ್ಯೂಸ್ ನಾಟೌಟ್ ಜತೆಗೆ ಮಾತನಾಡಿದ ಅವರು, ಕೊಕ್ಕಡ ಸಂಪರ್ಕಿಸುವ ಹತ್ತಿರದ ರಸ್ತೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಶೀಘ್ರವಾಗಿ ಉಪ್ಪಾರ ಹಳ್ಳದವರೆಗಿನ ಸುಮಾರು ಒಂದೂವರೆ ಕಿ.ಮೀ. ರಸ್ತೆಯನ್ನು ಸಂಪೂರ್ಣ ಕಾಂಕ್ರಿಟೀಕರಣ ಮಾಡಲಾಗುತ್ತದೆ. ಶಾಶ್ವತ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿಭಟನೆಗೆ ಮುಂದಾಗಿದ್ದ ಜನ

ಸರಕಾರ, ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ರೋಸಿ ಹೋಗಿದ್ದ ಜನ ಭಾನುವಾರ ರಸ್ತೆ ಬಂದ್‌ ಮಾಡಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದಕ್ಕೂ ಮೊದಲು ನ್ಯೂಸ್ ನಾಟೌಟ್ ಪಕ್ಷ ಭೇದ ಮರೆತು ಒಟ್ಟಾಗಿ ಪ್ರತಿಭಟನೆ ನಡೆಸಿದರೆ ಮಾತ್ರ ಸಮಸ್ಯೆ ಬಗೆಹರಿದೀತು ಎಂದು ವರದಿ ಮಾಡಿತ್ತು. ಈ ಬೆನ್ನಲ್ಲೇ ಊರಿನ ಜನ ಜಾಗೃತ್ತರಾಗಿ ಪ್ರತಿಭಟನೆಗೆ ನಿರ್ಧರಿಸಿದ್ದರು. ಕೂಡಲೇ ನಿದ್ದೆಯಿಂದ ಎಚ್ಚೆತ್ತ ಅಧಿಕಾರಿಗಳು ಎಲ್ಲ ಒತ್ತಡಗಳಿಗೂ ಮಣಿದು ಗೋಳಿತೊಟ್ಟಿನತ್ತ ಓಡಿ ಬಂದು ರಸ್ತೆ ರಿಪೇರಿಗೆ ಮುಂದಾಗಿದ್ದಾರೆ ಅನ್ನುವುದು ವಿಶೇಷ.

See also  ಕಾಂಗ್ರೆಸ್ ಗ್ಯಾರಂಟಿ ಎಲ್ಲರಿಗೂ ಸಿಗುವ ಗ್ಯಾರಂಟಿ ಇಲ್ಲ..! ಷರತ್ತು ಅನ್ವಯ..! ಜಿ.ಪರಮೇಶ್ವರ್ ಬಾಂಬ್!!
  Ad Widget   Ad Widget   Ad Widget   Ad Widget   Ad Widget   Ad Widget   Ad Widget