ರಾಜಕೀಯಸುಳ್ಯ

ಕುತೂಹಲಕ್ಕೆ ತೆರೆ ಎಳೆದ ಕಾಂಗ್ರೆಸ್ ! ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಜಿ. ಕೃಷ್ಣಪ್ಪ ಫೈನಲ್!

ನ್ಯೂಸ್ ನಾಟೌಟ್ : ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಹೆಸರು ಕೇಳಿ ಬಂದಿತ್ತು, ಈಗ ಆ ಕುತೂಹಲಕ್ಕೆ ಕಾಂಗ್ರೆಸ್ ತೆರೆ ಎಳೆದಿದೆ. ಜಿ. ಕೃಷ್ಣಪ್ಪ ಮತ್ತು ಡಾ. ಹೆಚ್.ಎಂ ನಂದಕುಮಾರ್ ನಡುವೆ ಟಿಕೆಟ್ ಪೈಪೋಟಿ ಜೋರಾಗಿಯೇ ನಡೆದಿತ್ತು.

ಇದೆಲ್ಲದರ ನಡುವೆ ಜಿ. ಕೃಷ್ಣಪ್ಪ ರವರು ಗದ್ದಲವಿಲ್ಲದೆ ಧಿಡೀರ್ ದೆಹಲಿಗೆ ಹಾರಿದ್ದರೂ ಎಂದು ಎಲ್ಲೆಡೆ ಸುದ್ದಿಯಾಗಿತ್ತು, ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರಸ್‌ ಪಕ್ಷದ ಮೊದಲ ಪಟ್ಟಿ ಸಿದ್ಧವಾಗಿದ್ದು, ಮೊದಲ ಪಟ್ಟಿಯಲ್ಲಿ 124 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ.

ಈಗ ಆ ಪ್ರಯತ್ನ ಫಲ ನೀಡಿದ್ದು, ಸುಳ್ಯ ಕ್ಷೇತ್ರದಿಂದ ಕೃಷ್ಣಪ್ಪ ಜಿ. ಅವರ ಹೆಸರು ಘೋಷಣೆಯಾಗಿದೆ.

ಕರಾವಳಿಯಲ್ಲಿ ಕಾಪು ಕ್ಷೇತ್ರಕ್ಕೆ ವಿನಯ್‌ ಕುಮಾರ್‌ ಸೊರಕೆ, ಕುಂದಾಪುರಕ್ಕೆ ದಿನೇಶ್‌ ಹೆಗ್ಡೆ. ಬೈಂದೂರಿನಿಂದ ಗೋಪಾಲ ಪೂಜಾರಿ ಅವರಿಗೆ ಟಿಕೆಟ್ ನೀಡಲಾಗಿದೆ. ಶೃಂಗೇರಿ ಟಿ.ಡಿ ರಾಜೇಗೌಡ ಅವರಿಗೆ ಟಿಕೇಟ್‌ ದೊರೆತಿದೆ. ಮೂಡುಬಿದಿರೆಯಿಂದ ಮಿಥುನ್‌ ರೈ, ಬೆಳ್ತಂಗಡಿ ರಕ್ಷಿತ್‌ ಶಿವರಾಮ್‌., ಉಳ್ಳಾಲ ಕ್ಷೇತ್ರದಿಂದ ಯು.ಟಿ ಖಾದರ್‌, ಬಂಟ್ವಾಳದಿಂದ ರಮಾನಾಥ ರೈ ಅವರಿಗೆ ಟಿಕೆಟ್ ದೊರೆತಿದೆ.

ಪ್ರಮುಖ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ ಅವರ ಪುತ್ರ ದರ್ಶನ ಅವರಿಗೆ ಟಿಕೆಟ್ ನೀಡಲಾಗಿದೆ. ಕನಕಪುರದಿಂದ ಡಿಕೆಶಿ ಸ್ಪರ್ಧೆ ಮಾಡಲಿದ್ದಾರೆ. ದೇವನಹಳ್ಳಿ ಕ್ಷೇತ್ರದಿಂದ ಎಚ್‌. ಸಿ ಮಹದೇವಪ್ಪ ಅವರಿಗೆ ಟಿಕೇಟ್‌ ದೊರೆತಿದೆ. ದಿನೇಶ್‌ ಗುಂಡೂರಾವ್‌ ಬಿಟಿಎಂ ಲೇಔಟ್‌, ರಾಮನಗರದಿಂದ ಇಕ್ಬಾಲ್‌ ಅವರಿಗೆ ಟಿಕೇಟ್‌ ದೊರೆತಿದೆ.

Related posts

ಬೆಳ್ಳಾರೆ ಜಲದುರ್ಗ ಲಯನ್ಸ್ ಕ್ಲಬ್‌ನಿಂದ ವನಮಹೋತ್ಸವ, ಡಾ.ಶಿವರಾಮ ಕಾರಂತ ಸರ್ಕಾರಿ ಪ್ರ.ದ.ಕಾಲೇಜು, ಎನ್‌ಎಸ್‌ಎಸ್ ಹಾಗೂ ರೋವರ್ಸ್ ರೇಂಜರ್ಸ್ ಘಟಕ ಸಹಭಾಗಿತ್ವ

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ, ಧ್ವಜ ಹಾರಿಸಿ ಸಂಭ್ರಮಿಸಿದ ಊರ ಮಂದಿ

ದ.ಕನ್ನಡ ಬಿಜೆಪಿ MP ಅಭ್ಯರ್ಥಿ ಬ್ರಿಜೇಶ್ ಚೌಟ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರ ಮನೆಗೆ ಭೇಟಿ, ಡಾ| ಕೆ.ವಿ ಚಿದಾನಂದರ ಜೊತೆಗೆ ಉಪಹಾರ ಸವಿದ ಚೌಟ