ರಾಜಕೀಯವೈರಲ್ ನ್ಯೂಸ್

ಕಾಂಗ್ರೆಸ್ ಗ್ಯಾರಂಟಿಗೆ ಮತ್ತೊಂದು ಸೇರ್ಪಡೆ, ಆಟೋ ಚಾಲಕರಿಗೆ 12 ಸಾವಿರ ಸಹಾಯಧನ ಘೋಷಣೆ

ನ್ಯೂಸ್‌ ನಾಟೌಟ್‌ : ಕಾಂಗ್ರೆಸ್ ಗ್ಯಾರಂಟಿಯಿಂದ ಅದರಲ್ಲೂ ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಬಹಳ ನಷ್ಟವಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿತ್ತು. ಆದರೆ ಈಗ ಕರ್ನಾಟಕದ ಬದಲು ತೆಲಂಗಾಣ ತನ್ನ ಕಾಂಗ್ರೆಸ್ ಗ್ಯಾರಂಟಿಗಳಿಂದ ನಷ್ಟ ಅನುಭವಿಸುತ್ತಿರುವ ಆಟೋ ಚಾಲಕರಿಗೆ 12 ಸಾವಿರ ಸಹಾಯಧನ ಘೋಷಿಸಿದೆ.

ತೆಲಂಗಾಣ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಆರ್​ಟಿಸಿ ಬಸ್ ಪ್ರಯಾಣ (ಮಹಾಲಕ್ಷ್ಮಿ ಯೋಜನೆ) ಜಾರಿಯಿಂದ ತೀವ್ರ ತೊಂದರೆ ಅನುಭವಿಸುತ್ತಿರುವ ಆಟೊ ಚಾಲಕರಿಗೆ ಧೈರ್ಯ ತುಂಬುವ ಕೆಲಸಕ್ಕೆ ಮುಂದಾಗಿದೆ. ಸಂಕಷ್ಟದಲ್ಲಿರುವ ಆಟೋ ಚಾಲಕರಿಗೆ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ತೆಲಂಗಾಣ ಸರ್ಕಾರ ರಾಜ್ಯದ ಆಟೋ ಚಾಲಕರಿಗೆ ವರ್ಷಕ್ಕೆ 12 ಸಾವಿರ ರೂ.ನಂತೆ ಆರ್ಥಿಕ ನೆರವು ನೀಡಲಾಗುವುದು ಎಂದು ಸಚಿವ ದುಡ್ಡಿಲ್ಲ ಶ್ರೀಧರ್ ಬಾಬು ವಿಧಾನಸಭೆ ಸಭೆಗಳಲ್ಲಿ ತಿಳಿಸಿದರು. ಬರುವ ಬಜೆಟ್‌ನಲ್ಲಿ ಆಟೋ ಚಾಲಕರಿಗೆ ವರ್ಷಕ್ಕೆ 12 ಸಾವಿರ ಧನಸಹಾಯವನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ತೆಲಂಗಾಣ ವಿಧಾನಸಭೆಯಲ್ಲಿ ವಿರೋಧ ಪಕ್ಷವು ಆಟೋ ಚಾಲಕರ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಆರ್​ಎಸ್​ ಶಾಸಕ ಪಲ್ಲಾ ರಾಜೇಶ್ವರ್ ರೆಡ್ಡಿ ಕೇಳಿದ ಪ್ರಶ್ನೆಗೆ ಸಚಿವ ಶ್ರೀಧರ್ ಬಾಬು ಉತ್ತರಿಸಿ, ಈಗಾಗಲೇ ಮಹಾಲಕ್ಷ್ಮಿ ಯೋಜನೆ ಜಾರಿಯಿಂದ ಆಟೋ ಚಾಲಕರಿಗೆ ಸಣ್ಣಪುಟ್ಟ ಸಮಸ್ಯೆ ಎದುರಾಗಲಿದೆ ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯದಿಂದ ಆಟೋ ಚಾಲಕರು ನಷ್ಟ ಅನುಭವಿಸುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾದ ಹಿನ್ನಲೆಯಲ್ಲಿ ಸಚಿವ ದಿಡ್ಡಿಲ್ಲಾ ಶ್ರೀಧರ್ ಬಾಬು ವಿಧಾನಸಭಾ ವೇದಿಕೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದ್ದಾರೆ. ಆಟೋ ಚಾಲಕರ ಕಲ್ಯಾಣಕ್ಕೆ ಕಾಂಗ್ರೆಸ್ ಸರಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು. ಆಟೋ ಚಾಲಕರಿಗೆ ವರ್ಷಕ್ಕೆ 12 ಸಾವಿರ ರೂ.ನಂತರ ನೀಡಲಾಗುವುದು ಎಂದು ಸಚಿವ ತಿಳಿಸಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಈ ಆರ್ಥಿಕ ನೆರವನ್ನು ಜಾರಿಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಭರವಸೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.

https://newsnotout.com/2024/02/court-viral-video-love-propose/

Related posts

ಧಾರವಾಡ ಬಂದ್ ​ಗೆ ಕರೆ..! ನೇಹಾ ಹತ್ಯೆ ಆರೋಪಿ ಫಯಾಜ್‌ ಪರ ಮುಸ್ಲಿಂ ವಕೀಲರು ವಕಾಲತ್ತು ವಹಿಸಬಾರದು ಎಂದ ಮುಸ್ಲಿಂ ಸಂಘಟನೆ

ಗೌತಮ್‌ ಗಂಭೀರ್‌ ಟೀಂ ಇಂಡಿಯಾದ ನೂತನ ಕೋಚ್‌ ಆಗಿ ಆಯ್ಕೆ, ಬಿಸಿಸಿಐ ಕಾರ್ಯದರ್ಶಿ ಈ ಬಗ್ಗೆ ಹೇಳಿದ್ದೇನು..?

ಆ ಮೀನಿನಿಂದ ₹19.50 ಲಕ್ಷ ಗಳಿಸಿದ ಮೀನುಗಾರ ಯಾರು..? ಏನಿದು ಅಪರೂಪದ ಮೀನು? ಇಲ್ಲಿದೆ ಸಂಪೂರ್ಣ ಮಾಹಿತಿ