ದೇಶ-ಪ್ರಪಂಚ

ಗ್ಯಾರಂಟಿ ಸಮಾವೇಶದ ದಿನವೇ ಕೈ ಕಾರ್ಯಕರ್ತನ ಬರ್ಬರ ಕೊಲೆ..!ಕೈಕಾಲು ಕಟ್ಟಿ,ಕಣ್ಣಿಗೆ ಖಾರದ ಪುಡಿ ಎರಚಿ, ಮರಕ್ಕೆ ನೇತು ಹಾಕಿ ಚಿತ್ರಹಿಂಸೆ..

ನ್ಯೂಸ್‌ ನಾಟೌಟ್‌:ಕಾಂಗ್ರೆಸ್ ಕಾರ್ಯಕರ್ತನ ಭೀಕರ ಹತ್ಯೆ ನಡೆದಿರುವ ಘಟನೆ ಬಗ್ಗೆ ವರದಿಯಾಗಿದೆ.ಎಷ್ಟು ಭೀಕರವಾಗಿದೆಯೆಂದರೆ ಕೈಕಾಲು ಕಟ್ಟಿದ್ದಲ್ಲದೇ ಮರಕ್ಕೆ ನೇಣು ಹಾಕಿ ಚಿತ್ರಹಿಂಸೆ ನೀಡಿ ಕೊನೆಗೆ ಬರ್ಬರ ಹತ್ಯೆ ಮಾಡಲಾಗಿದೆ. ಈ ಘಟನೆ ಗದಗ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು,ಡೋಣಿ ಗ್ರಾಮದ ಶರಣಪ್ಪ ಸಂದೀಗೌಡರ್ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಅಟ್ಟಾಡಿಸಿ ಹೊಡೆದು, ಕಣ್ಣಿಗೆ ಖಾರದಪುಡಿ ಎರಚಿ, ಕೈಕಾಲು ಕಟ್ಟಿ, ಮರಕ್ಕೆ ನೇಣು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಶರಣಪ್ಪ ಸಂದೀಗೌಡರ್ ಡೋಣಿ ಗ್ರಾಮದ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಪ್ರಮುಖನಾಗಿ ಕಾರ್ಯನಿರ್ವಹಿಸುತ್ತಿದ್ದ. ಡಂಬಳ ಗ್ರಾಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಆಯೋಜಿಸಲಾಗಿತ್ತು. ಆದರೆ ಇನ್ನೊಂದೆಡೆ ಕೈ ಕಾರ್ಯಕರ್ತನ ಭೀಕರ ಹತ್ಯೆ ನಡೆದಿದೆ.ಕೊಲೆಯ ಸ್ವರೂಪ‌ ನೋಡಿ ಡೋಣಿ ಡಾಂಬಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ನಾಲ್ಕು ವರ್ಷದ ಬಾಲಕಿಗೆ ವೈದ್ಯನಿಂದ ಲೈಂಗಿಕ ಕಿರುಕುಳ! ಪರ್ಸ್ ಮರೆತು ಹಿಂತಿರುಗಿದ ತಾಯಿಗೆ ಕಾದಿತ್ತು ಶಾಕ್!

ಪಕ್ಕದ ಮನೆಯ ಹೆಗ್ಗಣಗಳ ಉಪದ್ರಕ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ ವ್ಯಕ್ತಿ..! ಪೊಲೀಸರು ಮನೆಗೆ ಬಂದು ಮಾಡಿದ್ದೇನು..?

ಶ್ರೀರಾಮನ ಚಿತ್ರವಿರುವ ಪೇಪರ್​ ತಟ್ಟೆಯಲ್ಲಿ ಬಿರಿಯಾನಿ ಮಾರಾಟ..! ಅಂಗಡಿ ಮಾಲೀಕ ಅರೆಸ್ಟ್, ಇಲ್ಲಿದೆ ವೈರಲ್ ವಿಡಿಯೋ