ದೇಶ-ಪ್ರಪಂಚವೈರಲ್ ನ್ಯೂಸ್

67,000 ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ ದೈತ್ಯ ಕಂಪನಿಗಳು..! ಅಂದಿನ ಕರಾಳ ಕಥೆ ಬಿಚ್ಚಿಟ್ಟ ಉದ್ಯೋಗಿಗಳು..!

ನ್ಯೂಸ್ ನಾಟೌಟ್: ಜಾಗತಿಕವಾಗಿ ಅನೇಕ ಟೆಕ್ ಕಂಪನಿಗಳು ಕೊರೊನಾ ನಂತರವೂ 2023 ರಲ್ಲಿ ಬೃಹತ್ ಪ್ರಯಾಣದಲ್ಲಿ ನೌಕರರ ವಜಾಗೊಳಿಸುವ ಪ್ರಕ್ರಿಯೆ ಘೋಷಿಸಿದವು. ಸಾವಿವಾರು ಉದ್ಯೋಗಿಗಳು ಕೈಲಿದ್ದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದರು. ಅವರೆಲ್ಲ ಸಾಮಾಜಿಕ ಜಾಲತಾಣದಲ್ಲಿ ತಮ್ಮ ನೋವುಗಳನ್ನು ಹೇಳಿಕೊಂಡಿದ್ದಾರೆ.

ಜಾಗತಿಕವಾಗಿ ಟೆಕ್ ಕಂಪನಿಗಳಾದ ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ ಒಂದು ವರ್ಷದಲ್ಲಿ 67,000 ಉದ್ಯೋಗಿಗಳನ್ನು ವಜಾಗೊಳಿಸಿವೆ. ಇದಷ್ಟೇ ಅಲ್ಲದೇ ನೇಮಕಾತಿ ನಿಧಾನಗೊಳಿಸಿವೆ. ಜತೆಗೆ ಈ ಮೊದಲಿನಂತೆ ಈಗೆಲ್ಲ ಕ್ಯಾಂಪಸ್ ಸೆಲೆಕ್ಷನ್ ಗಳನ್ನಂತು ಮಾಡುತ್ತಲೇ ಇಲ್ಲ ಎಂದು ಆರೋಪಿಸಲಾಗಿದೆ.

ಬಳಿಕ ಅಂದು ಇದ್ದ ಸಾಮಾಜಿಕ ಜಾಲತಾಣ ಟ್ವಿಟ್ಟರ್ (ಎಕ್ಸ್) ನಲ್ಲಿ ಹಾಗೂ ಲಿಂಕ್‌ಡಿನ್ ನಲ್ಲಿ ತಮ್ಮ ಕರಾಳ ಕತೆಗಳನ್ನು ಹಂಚಿಕೊಂಡಿದ್ದಾರೆ. ಮೆಟಾದಿಂದ ಗೂಗಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ ವರೆಗೆ, ಅನೇಕ ಕಂಪನಿಗಳ ಮಾಜಿ ಉದ್ಯೋಗಿಗಳು ಮುಂದೆ ಗೋಳು ಹೇಳಿಕೊಳ್ಳುತ್ತಿದ್ದಾರೆ. ಭಾರತದಲ್ಲಿಯೂ ಸಹ ಅನೇಕ ಉದ್ಯೋಗಿಗಳು ವಜಾಗೊಳಿಸಲಾಗಿದೆ.

ಇದರಿಂದ ಪ್ರಭಾವಿತರಾದ ಹಲವು ಹೊಸ ಉದ್ಯೋಗ ಹುಡುಕಲು ಅಥವಾ ತಮ್ಮ ಭಾವನೆಗಳನ್ನು ಸೂಕ್ತ ವೇದಿಕೆಗೆ ಹೊರ ಹಾಕುವ ಸಲುವಾಗಿ ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸಿದರು.

ಹಾಗಾದರೆ ಯಾವ ಕಂಪನಿಗಳು ಎಷ್ಟೆಷ್ಟು ಉದ್ಯೋಗಿಗಳನ್ನು ತೆಗೆದುಹಾಕಿದ್ದಾರೆ ಎಂದು ಮಿಂಟ್ ವರದಿ ಅದರ ಪ್ರಕಾರ, ಕೇವಲ ಒಂದು ವರ್ಷದಲ್ಲಿ ಐಟಿ ಕ್ಷೇತ್ರಗಳ್ಲಲಿ ದೈತ್ಯ ಕಂಪನಿ ಎನ್ನಲಾಗುವ ನಾಲ್ಕು ಕಂಪನಿಗಳಾದ ‘ಇನ್ಫೋಸಿಸ್, ಟಿಸಿಎಸ್, ವಿಪ್ರೋ ಮತ್ತು ಟೆಕ್ ಮಹೀಂದ್ರಾ’ 67,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದವು. ಇದರಲ್ಲಿ ಇನ್ಫೋಸಿಸ್ 24,182 ಉದ್ಯೋಗಿಗಳನ್ನು ವಜಾಗೊಳಿಸಿದ್ದರೆ, ವಿಪ್ರೋ 21,875 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್ ನೀಡಿತು. ಮತ್ತೊಂದೆಡೆ, ಟಾಟಾ ಕನ್ಸಲ್ಟೆಂಟ್ ಸವೀರ್ಸ (TCS) 10,818 ಜನರಿಗೆ ವಿದಾಯ ಹೇಳಿದರೆ, ಟೆಕ್ ಮಹೀಂದ್ರಾ 10,669 ನೌಕರರನ್ನು ಹೊರಹಾಕಿತ್ತು ಎನ್ನಲಾಗಿದೆ.

Related posts

ಬಿಹಾರದಲ್ಲಿ ಖರ್ಗೆ ಹೆಲಿಕಾಪ್ಟರ್ ತಡೆದ ಚುನಾವಣಾಧಿಕಾರಿಗಳು..! ಹೆಲಿಕಾಪ್ಟರ್ ಅನ್ನು ಸುತ್ತುವರಿದ ಪೊಲೀಸರು ಮತ್ತು ಅಧಿಕಾರಿಗಳು..!

ತಹಶೀಲ್ದಾರ್ ಬಂಧನಕ್ಕೆ ವಾರಂಟ್ ಜಾರಿ ಮಾಡಿದ್ದೇಕೆ? ಕೋರ್ಟ್‌ ಸಿಬ್ಬಂದಿ ಕಚೇರಿಗೆ ಬರುತ್ತಿದ್ದಂತೆ ತಹಶೀಲ್ದಾರ್ ಓಡಿದ್ದೆಲ್ಲಿಗೆ..? ಏನಿದು ಪ್ರಕರಣ?

ಪ್ರಕಾಶ್ ರಾಜ್ ಓಡಾಡಿದ ಜಾಗಕ್ಕೆ ವಿದ್ಯಾರ್ಥಿಗಳು ಗೋಮೂತ್ರ ಹಾಕಿ ಶುದ್ಧೀಕರಿಸಿದ್ದೇಕೆ ? ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಕಾಶ್ ರಾಜ್ ಹೇಳಿದ್ದೇನು?