ಕ್ರೈಂದೇಶ-ಪ್ರಪಂಚದೇಶ-ವಿದೇಶರಾಜಕೀಯವಿಡಿಯೋವೈರಲ್ ನ್ಯೂಸ್

ಕಾಲೇಜಿನ ವಾರ್ಷಿಕೋತ್ಸದಲ್ಲಿ ಶ್ರೀರಾಮನ ಗೀತೆ ಹಾಡಿದ್ದಕ್ಕೆ ಯುವಕನಿಗೆ ಥಳಿಸಿದ್ರಾ..? ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಂತ ಫಿಲೋಮಿನಾ ಕಾಲೇಜು ವಾರ್ಷಿಕೋತ್ಸವ ಸಮಾರಂಭದಲ್ಲಿ ‘ಜಯತು ಜಯತು ಶ್ರೀ ರಾಮ’ ಗೀತೆ ಹಾಡಿದ ವೇಳೆ ಹಿಂದೂ ಯುವಕನಿಗೆ ಥಳಿಸಿದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರತಾಪ್ ಸಿಂಹ ವಿಡಿಯೋವೊಂದನ್ನು ತಮ್ಮ ‘ಎಕ್ಸ್’ (ಟ್ವಿಟರ್) ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಮೈಸೂರಿನ ಸಂತ ಫಿಲೋಮಿನಾ ಕಾಲೇಜು ವಾರ್ಷಿಕೋತ್ಸವ ಸಮಾರಂಭ ಆಯೋಜನೆ ಮಾಡಲಾಗಿತ್ತು.

ಮನರಂಜನೆ ಕಾರ್ಯಕ್ರಮಕ್ಕೆ ಖ್ಯಾತ ಹಿನ್ನೆಲೆ ಗಾಯಕ ಹರ್ಷ ಅವರನ್ನ ಕರೆಸಲಾಗಿತ್ತು. ಪ್ರೋಗ್ರಾಂ ಅದ್ಭುತವಾಗಿ ಮೂಡಿ ಬಂದಿತ್ತು .ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಜನರು ಖುಷಿಯಾಗಿ ಎಂಜಾಯ್ ಮಾಡುತ್ತಿದ್ದರು. ಆದ್ರೆ, ಏಕಾಏಕಿ ಒಂದು ಗುಂಪು ಗಲಾಟೆ ಶುರುಮಾಡಿ ಓರ್ವ ಹಿಂದೂ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಅಧಿಕೃತವಾಗಿ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

ಆದ್ರೆ, ‘ಜಯತು ಜಯತು ಶ್ರೀ ರಾಮ’ ಹಾಡು ಹಾಡುವ ಸಮಯದಲ್ಲೇ ಗಲಾಟೆ ಹೆಚ್ಚಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎನ್ನಲಾಗಿದೆ. ಇದೆ ವಿಚಾರಕ್ಕೆ ಸಂಸದ ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.

Related posts

ಚಂದ್ರಯಾನ-3 ಬಗ್ಗೆ ಕೋಡಿಮಠದ ಸ್ವಾಮೀಜಿ ಹೇಳಿದ್ದೇನು? ವಿಷಾನಿಲ ಬೀಸುವ ಬಗ್ಗೆ ಸ್ಫೋಟಕ ಭವಿಷ್ಯ ನುಡಿದ ಸ್ವಾಮೀಜಿ! ಇಲ್ಲಿದೆ ಸಂಪೂರ್ಣ ಮಾಹಿತಿ

ಹಾವು ಕಚ್ಚಿದ ಮಗುವನ್ನು 6 ಕಿ.ಮೀ ಹೊತ್ತು ಓಡಿದ ತಾಯಿ!  ಇದು18 ತಿಂಗಳ ಮಗುವಿನ ಕರುಣಾಜನಕ ಕಥೆ!

ಅಂದು ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯನ್ನು ಖರೀದಿಸಿದ ನಟಿ ಅದಾ ಶರ್ಮಾ..! ಯಾರಿಗೂ ಬೇಡವಾಗಿದ್ದ ಮನೆಯನ್ನು ಆಕೆ ಖರೀದಿಸಿದ್ದೇಕೆ..?