ಕೊಡಗುರಾಜಕೀಯ

ಹಾಕತ್ತೂರು ವಿ.ಎಸ್.ಎಸ್.ಎನ್ ನ ನೂತನ ನಿರ್ದೇಶಕರಿಗೆ ಕೆ. ಜಿ.ಬೋಪಯ್ಯರಿಂದ ಸನ್ಮಾನ, ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವಶದಲ್ಲಿದ್ದ ಸಹಕಾರ ಸಂಘ ಬಿಜೆಪಿ ತೆಕ್ಕೆಗೆ!

ಹಾಕತ್ತೂರು ವಿ.ಎಸ್.ಎಸ್.ಎನ್ ನಿರ್ದೇಶಕರಾಗಿ ಆಯ್ಕೆಯಾದವರಿಗೆ ಮಾಜಿ ಸಭಾಪತಿ ಕೆ. ಜಿ. ಬೋಪಯ್ಯ ಸನ್ಮಾನ ಮಾಡಿದರು.

ನಂ. 582ನೇ ಹಾಕತ್ತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸನ್ಮಾನಿಸಿ ಕೆ. ಜಿ. ಬೋಪಯ್ಯ ಶುಭ ಹಾರೈಸಿದರು.

ಒಟ್ಟು 13 ನಿರ್ದೇಶಕರ ಸ್ಥಾನಕ್ಕೆ ಶನಿವಾರ ನಡೆದಿದ್ದ ಚುನಾವಣೆಯಲ್ಲಿ ಭಾರೀ ಬದಲಾವಣೆಗಳಾಗಿವೆ. ಕಳೆದ 10 ವರ್ಷದಿಂದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ವಶದಲ್ಲಿದ್ದ ಸಹಕಾರ ಸಂಘ ಬಿಜೆಪಿ ಬೆಂಬಲಿತ 10 ಶಾಸಕರು ಆಯ್ಕೆಯಾಗುವ ಮೂಲಕ ಬಿಜೆಪಿ ಹಾಕತ್ತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಪ್ರಾಬಲ್ಯ ತೋರಿದೆ.

ಇದರ ಜೊತೆಗೆ ಕಾಂಗ್ರೆಸ್ ಬೆಂಬಲಿತ 3 ನಿರ್ದೇಶಕರು ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Related posts

ಚೆಂಬು, ಗೂನಡ್ಕ ಸೇರಿದಂತೆ ಹಲವು ಕಡೆ ಮತ್ತೊಮ್ಮೆ ಭೂಕಂಪ

ಮಡಿಕೇರಿ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಗಳು ಅಂದರ್

ರಾಮ ಮಂದಿರ ಉದ್ಘಾಟನೆಗೆ ಬರಲು ಅಡ್ವಾಣಿ,ಮುರಳಿ ಮನೋಹರ್‌ ಜೋಶಿಗೆ ವಿಶೇಷ ವಿಮಾನ..? ಟೀಕೆಯ ಬಳಿಕ ವಿಶ್ವಹಿಂದೂ ಪರಿಷತ್‌ ಈ ನಿರ್ಧಾರ ಮಾಡಿತಾ..?