ಕರಾವಳಿ

ಗಂಡನ ಹತ್ಯೆ ಮಾಡಿದವರನ್ನು ಎನ್‌ಕೌಂಟರ್ ಮಾಡಿ

ನ್ಯೂಸ್ ನಾಟೌಟ್: ನನ್ನ ಗಂಡನ ಹತ್ಯೆ ಮಾಡಿದವರನ್ನು ಎನ್ ಕೌಂಟರ್ ಮಾಡಿ ಎಂದು ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪ್ರವೀಣ್ ನೆಟ್ಟಾರು ಅವರು ಪತ್ನಿ ಮನವಿ ಮಾಡಿದರು.

ಇಂದು (ಜು.೨೮)  ಪ್ರವೀಣ್ ನೆಟ್ಟಾರು ಮನೆಗೆ ಸಿ.ಎಂ. ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭ ಮಾತನಾಡಿದ ಸಿಎಂ, ಮೊನ್ನೆ ನಡೆದಂತಹ ಕಾರ್ಯಕರ್ತರ ಕೊಲೆ ಪ್ರಕರಣ ಖಂಡನೀಯ. ಪೂರ್ವಯೋಜಿತವಾದಂತಹ ಕೃತ್ಯವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಈ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರಿಗೆ ಕಠಿಣ ಶಿಕ್ಷೆ ಕೊಡಲು ಸರಕಾರ ಸಿದ್ಧವಿದೆ. ನಾವಿದನ್ನು ಕೇವಲ ಕೊಲೆ ಪ್ರಕರಣ ಎಂದು ನೋಡುತ್ತಿಲ್ಲ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದರು. ಇದೇ ವೇಳೆ ಪ್ರವೀಣ್‌ ಕುಟುಂಬಕ್ಕೆ ಸಿಎಂ ೨೫ ಲಕ್ಷ ರು. ನೀಡಿದರು.

ಈ ವೇಳೆ ದ.ಕ. ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕ ಸಿ.ಟಿ. ರವಿ ನೊಂದ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.ಸ್ಥಳದಲ್ಲಿ ತಳ್ಳಾಟ ನೂಕಾಟ ನಡೆಯಿತೆನ್ನಲಾಗಿದ್ದು, ನಳೀನ್ ಕುಮಾರ್ ಗೆ ಕಾರ್ಯಕರ್ತರು ಧಿಕ್ಕಾರ ಕೂಗಿದ ಘಟನೆಯೂ ನಡೆಯಿತು. ಮೊನ್ನೆ ಪ್ರವೀಣ್ ನೆಟ್ಟಾರು ಅವರು ಅವರ ಅಂತಿಮ ದರ್ಶನದ ವೇಳೆಯೂ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿರುವುದನ್ನು ಇಲ್ಲಿ ಸ್ಮರಿಸಬಹುದು.

Related posts

ಉಪ್ಪಿನಂಗಡಿ : ಹೃದಯಾಘಾತಕ್ಕೊಳಗಾಗಿ ವಿದ್ಯಾರ್ಥಿ ಮೃತ್ಯು,ಎ.ಸಿ. ಮೆಕಾನಿಕ್‌ ವ್ಯಾಸಂಗ ಮಾಡುತ್ತಿದ್ದ ಯುವಕನಿಗೇನಾಯ್ತು?

ಮಡಿಕೇರಿ: ಗುಂಡು ಹೊಡೆದು ವ್ಯಕ್ತಿ ಆತ್ಮಹತ್ಯೆ, ಕಾರಣ ನಿಗೂಢ

ಪ್ರವೀಣ್ ನೆಟ್ಟಾರು ಪ್ರಕರಣ:ವಿದೇಶದಲ್ಲಿ ಅಡಗಿರುವ ಆರೋಪಿಗಳ ಬಂಧನಕ್ಕೆ ತೀವ್ರ ಕಾರ್ಯಾಚರಣೆ,ಫೀಲ್ಡ್ ಗಿಳಿದ ‘ರಾ'(RAW) ಏಜೆನ್ಸಿ