Uncategorized

ಸಿಎಂ ಜೊತೆ ಸಚಿವೆ ದಸರಾ ಲೈಟಿಂಗ್ಸ್‌ ವೀಕ್ಷಣೆ ವೇಳೆ ಐ ಲವ್‌ ಯು ಲಕ್ಷ್ಮಿ ಹೆಬ್ಬಾಳ್ಕರ್‌ ಎಂದು ಕಿರುಚಿದ ಯುವಕ..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ಸಿಎಂ ಜೊತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮೈಸೂರು ದಸರಾ ವೇಳೆ ಪೇಟೆ ವೀಕ್ಷಣೆಗೆ ಹೋಗುತ್ತಿದ್ದಾಗ ಐ ಲವ್‌ ಯು ಎಂದು ಯುವಕನೋರ್ವ ಜೋರಾಗಿ ಕಿರುಚಿದ್ದಾನೆ. ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ನಾಡಹಬ್ಬ ಮೈಸೂರು ದಸರಾ ಹಿನ್ನೆಲೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸಿಎಂ ಸಿದ್ದರಾಮಯ್ಯ ಜೊತೆ ತೆರೆದ ವಾಹನದಲ್ಲಿ ನಿಂತು ಲೈಟಿಂಗ್ಸ್‌ ವೀಕ್ಷಣೆ ಮಾಡಿದರು. ಈ ವೇಳೆ ಯುವಕನೊಬ್ಬ ಐ ಲವ್‌ ಯು ಲಕ್ಷ್ಮಿ ಹೆಬ್ಬಾಳ್ಕರ್‌ ಎಂದು ನಡು ಬೀದಿಯಲ್ಲೆ ಪ್ರಪೋಸ್‌ ಮಾಡಿದ್ದಾನೆ. ಈ ವೇಳೆ ಇದನ್ನು ಕೇಳಿಸಿಕೊಂಡ ಸಚಿಬೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ನುಸುನಕ್ಕು, ನಿಮಗೂ ಕೇಳಿಸ್ತಾ ಎಂದು ವಿಡಿಯೋ ಮಾಡುತ್ತಿದ್ದವರ ಬಳಿ ಕೇಳಿದ್ದಾರೆ.

ಶುಕ್ರವಾರ (ಅಕ್ಟೋಬರ್‌ 11) ಸಂಜೆ ದಸರಾ ವಿದ್ಯುತ್‌ ದೀಪಾಲಂಕಾರ ವೀಕ್ಷಣೆಗೆ ತೆರಳಿದರು. ಈ ವೇಳೆ ಜನರತ್ತ ಕೈಬೀಸುತ್ತಾ ಸಾಗಿದ್ದ ಮೆರವಣಿಗೆಯನ್ನು ನೋಡುತ್ತಿದ್ದ ಯುವಕನೊಬ್ಬ ಲಕ್ಷ್ಮಿ ಹೆಬ್ಬಾಳ್ಕರ್‌ ಕಂಡು “ಐ ಲವ್‌ ಯು” ಎಂದು ಕಿರುಚಿದ ಘಟನೆ ನಡೆದಿದೆ.

Related posts

ವಿಜಯ ಸಂಕಲ್ಪ ಯಾತ್ರೆ,ತ್ಯಾಜ್ಯ ಆಹಾರ ಸೇವಿಸಿ 7 ಹಸುಗಳು ಮೃತ್ಯು -ಸ್ಥಳೀಯರ ಆರೋಪ

ಚಿರತೆ ದತ್ತು ಪಡೆದ ಐದು ವರ್ಷದ ಬಾಲಕ

ಹಿಂದೂ ಮನೆಗಳಿಗೆ ತೆರಳಿ ಮತಾಂತರಕ್ಕೆ ಯತ್ನ ಆರೋಪ..! ಇಬ್ಬರು ಮಹಿಳೆಯರನ್ನ ಪೊಲೀಸರಿಗೆ ಒಪ್ಪಿಸಿದ ಜನ, ಮತ್ತಿಬ್ಬರು ಪರಾರಿ..!