ನ್ಯೂಸ್ ನಾಟೌಟ್ :ಆಟವಾಡುತ್ತಿದ್ದ ಆಟಿಕೆಗೆ ಅಳವಡಿಸಿದ ಬ್ಯಾಟರಿಯೊಂದು ಸ್ಪೋಟಗೊಂಡು ಬಾಲಕನೋರ್ವ ಗಂಭೀರ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದ್ದು, 9 ವರ್ಷದ ಬಾಲಕನ ಸ್ಥಿತಿ ಚಿಂತಾಜನಕವಾಗಿದೆ.
ಈತನ ಪೋಷಕರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.ಪ್ರತಿ ದಿನ ಕೆಲಸಕ್ಕೆ ಹೋಗಿ ಇವರ ಜೀವನ ಸಾಗಬೇಕು. ಮನೆಯಲ್ಲಿ ಪೇಪರ್ ಫ್ಯಾನ್ ಆಟದಲ್ಲಿ ಮಗ್ನನಾಗಿದ್ದ ಬಾಲಕ ಆಟಿಕೆಗೆ ಸಣ್ಣ ಮೋಟಾರ್ ಒಂದನ್ನು ಅಳವಡಿಸಲಾಗಿತ್ತು. ಈ ಮೋಟಾರ್ ತಿರುಗಲು ಬ್ಯಾಟರಿ ಒಂದನ್ನು ಕನೆಕ್ಟ್ ಮಾಡಲಾಗಿದೆ. ಬಾಲಕ ಆಟವಾಡುವ ವೇಳೆ ಕೆಲಕಾಲ ಪೇಪರ್ ಫ್ಯಾನ್ ತಿರುಗದ ಕಾರಣ ಬ್ಯಾಟರಿ ಬಿಸಿಯಾಗಿ ಸ್ಪೋಟಗೊಂಡಿದೆ ಎನ್ನಲಾಗಿದೆ.ಬಾಲಕನಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆಯ ತೀವ್ರತೆಗೆ ಬಾಲಕನ ದವಡೆಯೇ ಛಿದ್ರವಾಗಿದ್ದು ಆತ ಸ್ಥಳದಲ್ಲೇ ಎಚ್ಚರ ತಪ್ಪಿದ್ದಾನೆ ಎನ್ನಲಾಗಿದೆ.ಆಟವಾಡುತ್ತಿದ್ದಾಗ ಫ್ಯಾನ್ ತಿರುಗದ್ದನ್ನು ಗಮನಿಸಿದ ಬಾಲಕ ಕೆಲ ಹೊತ್ತಿನ ಬಳಿಕ ಮೋಟಾರ್ ಹಾಗೂ ಬ್ಯಾಟರಿ ನಡುವಿನ ವೈರ್ ಒಂದನ್ನು ಬಾಯಿಂದ ಕಚ್ಚಿ ಸರಿಪಡಿಸಲು ಮುಂದಾಗಿದ್ದಾನೆ.ಈ ವೇಳೆ ಬ್ಯಾಟರಿ ಸ್ಪೋಟಗೊಂಡಿದೆ.ಕೂಡಲೇ ಬಾಲಕನನ್ನು ಪೋಷಕರು ಆಸ್ಪತ್ರೆಗೆ ಸೇರಿಸಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ. ತೀವ್ರ ನಿಗಾ ಘಟಕದಲ್ಲಿ ಇರಿಸಿ ಬಾಲಕನಿಗೆ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.