ನ್ಯೂಸ್ ನಾಟೌಟ್: ಬದ್ಧವೈರಿ ಚೀನಾಕ್ಕೆ ಭಾರತ ಮತ್ತೊಮ್ಮೆ ಚಾಟಿಯೇಟು ನೀಡಿದೆ. ಈ ಹಿಂದೆ ಚೀನಾದ ಆ್ಯಪ್‌ಗಳಿಗೆ ನೀರು ಕುಡಿಸಿದ್ದ ಭಾರತ ಇದೀಗ ಮತ್ತೆ ಚೀನಾದ 232 ಆ್ಯಪ್‌ಗಳಿಗೆ ಗೇಟ್‌ಪಾಸ್ ನೀಡಿದೆ.
ಗೃಹ ಸಚಿವಾಲಯದ ಸಲಹೆಯ ಮೇರೆಗೆ ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 138 ಬೆಟ್ಟಿಂಗ್ ಅಪ್ಲಿಕೇಶನ್ ಗಳು ಮತ್ತು 94 ಸಾಲ ನೀಡುವ ಚೀನಾದ ಅಪ್ಲಿಕೇಶನ್ ಗಳಿಗೆ ಕೊಕ್ ನೀಡಿದೆ. ಚೀನಾದ ಎಲ್ಲಾ ಆಪ್ ಗಳು ಐಟಿ ಕಾಯಿದೆಯ ಸೆಕ್ಷನ್ 69 ಅನ್ನು ಉಲ್ಲಂಘಿಸಿದೆ.
ಚೀನಾದ ಆಪ್ ಗಳು ಭಾರತ ದೇಶದ ಘನತೆಗೆ ಧಕ್ಕೆ ಉಂಟು ಮಾಡುತ್ತದೆ. ಆ ಆಪ್ ನಿಂದ ಅನೇಕರು ಕಿರುಕುಳ ನೀಡುತ್ತಾರೆ ಎಂದು ದೂರಿದ್ದಾರೆ ಎಂದು ಎನ್ನಲಾಗಿದೆ. ಚೀನಾದ ಆಪ್ ಗಳಿಂದ ಅಪಾಯ ಹೆಚ್ಚು , ಜನರ ಸುಲಿಗೆ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ. ಈ ಅಪ್ಲಿಕೇಶನ್ ಗಳ ವಿರುದ್ಧ ಕ್ರಮಕ್ಕೆ ಇದು ಕಾರಣವಾಗಿದೆ. ಹಾಗಾಗಿ ಭಾರತದಲ್ಲಿ ಚೀನಾ ಆಪ್ ಗಳನ್ನು ಸಂಪೂರ್ಣ ಬ್ಯಾನ್ ಮಾಡಿದರೆ ಉತ್ತಮ. ಅಲ್ಲದೆ ಈ ಆಪ್ ಗಳು ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಸಾಲದಲ್ಲಿ ಸಿಲುಕಿಸುವಂತೆ ಮಾಡುತ್ತದೆ.ಬಡ್ಡಿಯ ಮೇಲೆ ಬಡ್ಡಿ ಹಾಕಿ ಜನರಿಗೆ ತೊಂದರೆ ಕೊಡುವುದರಲ್ಲಿ ಎತ್ತಿದ ಕೈ ಆಗಿರುತ್ತದೆ.