ನ್ಯೂಸ್ ನಾಟೌಟ್: ಹೆಬ್ಬಾವನ್ನು ಹಗ್ಗದ ರೀತಿ ಬಳಸಿಕೊಂಡು ಕೆಲ ಮಕ್ಕಳು ಸ್ಕಿಪ್ಪಿಂಗ್ ಆಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಈ ಭಯಾನಕ ವಿಡಿಯೋಗೆ ನೆಟ್ಟಿಗರಿಂದ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋ ಆಸ್ಟ್ರೇಲಿಯಾದ ವೂರಬಿಂದಾ ಪಟ್ಟಣಕ್ಕೆ ಸಂಬಂಧಿಸಿದ್ದು, ಜನರ ನೆತ್ತಿ ಪಿತ್ತಗೇರಿದೆ.
ವೈರಲ್ ವಿಡಿಯೋದಲ್ಲಿ, ಇಬ್ಬರು ಮಕ್ಕಳು ಹಾವಿನ ತಲೆ ಮತ್ತು ಬಾಲವನ್ನು ಹಿಡಿದಿರುವುದನ್ನು ಕಾಣಬಹುದು. ಇನ್ನೊಂದು ಮಗು ಅದರ ಮೇಲೆ ಹಾರುತ್ತದೆ. ಈ ವೇಳೆ ಮಹಿಳೆಯೊಬ್ಬಳ ಧ್ವನಿಯು ಸಹ ಕೇಳಿಸುತ್ತದೆ. ಸುಮಾರು ಆರು ಮಕ್ಕಳು ಹಾವಿನೊಂದಿಗೆ ಆಟವಾಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.
ವಿಡಿಯೋ ರೆಕಾರ್ಡ್ ಮಾಡುತ್ತಿರುವ ಮಹಿಳೆ ಹಾವನ್ನು ತನಗೆ ತೋರಿಸುವಂತೆ ಮಕ್ಕಳನ್ನು ಕೇಳುತ್ತಾಳೆ. ಈ ವೇಳೆ ಮಕ್ಕಳು ಹಾವನ್ನು ನೆಲದ ಮೇಲೆ ಇಡುತ್ತಾರೆ. ಮಕ್ಕಳು ಸತ್ತ ಹೆಬ್ಬಾವನ್ನು ಹಗ್ಗವಾಗಿ ಬಳಸಿದ್ದು, ಹುಡುಗರಲ್ಲಿ ಒಬ್ಬ ಅದು ಕಪ್ಪು ತಲೆಯ ಹಾವು ಎಂದು ಹೇಳುತ್ತಾನೆ.
ಹಾಗಾದರೆ ಈ ಹಾವು ಎಲ್ಲಿಂದ ಸಿಕ್ಕಿತು? ಅಥವಾ ಹಾವನ್ನು ಹಿಡಿದಾಗ ಅದು ಜೀವಂತವಾಗಿತ್ತೇ ಎಂಬುದು ಸ್ಪಷ್ಟವಾಗಿಲ್ಲ.ಆದರೆ ಈ ಬಗ್ಗೆ ತನಿಖೆಯಾಗಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಇನ್ನು ಕೆಲವರು ಸತ್ತ ಹಾವಿನ ಜತೆ ಈ ರೀತಿ ಆಡಬಾರದು ಮತ್ತು ಅದನ್ನು ಸುಡಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
Australian Aboriginal children use dead python as a skipping rope in Woorabinda, Queensland pic.twitter.com/1VfIdL3hIs
— Clown Down Under 🤡 (@clowndownunder) March 10, 2025