ನ್ಯೂಸ್ ನಾಟೌಟ್ : ಇರಾನ್ ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ ಬೆಂಬಲಿಸಿ ಹಾಡು ಹಾಡಿದ್ದ ಪ್ರಸಿದ್ಧ ಗಾಯಕ ಹಾಗೂ ಸಂಗೀತಗಾರ ಮೆಹದಿ ಯರಾಹಿಗೆ 74 ಛಡಿ ಏಟಿನ ಶಿಕ್ಷೆ ನೀಡಲಾಗಿದೆ.
ಈ ಕುರಿತು ಇಂದು(ಮಾ.8) ಸಾಮಾಜಿಕ ಜಾಲತಾಣದಲ್ಲಿ ಅವರ ಪರ ವಕೀಲರಾದ ಜಹ್ರಾ ಮಿನೌಯಿ ಫೋಸ್ಟ್ ಮಾಡಿದ್ದು, ಶಿಕ್ಷೆಯನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
42 ವರ್ಷದ ಯರಾಹಿ ಅವರನ್ನು ಆಗಸ್ಟ್ 2023ರಲ್ಲಿ ಬಂಧಿಸಲಾಗಿತ್ತು. ತೆಹ್ರಾನ್ ಕ್ರಾಂತಿಕಾರಿ ನ್ಯಾಯಾಲಯದಿಂದ ಎರಡು ವರ್ಷ 8 ತಿಂಗಳ ಜೈಲು ಶಿಕ್ಷೆ ಹಾಗೂ 74 ಛಡಿ ಏಟಿನ ಶಿಕ್ಷೆ ವಿಧಿಸಲಾಗಿತ್ತು.
ಯರಾಹಿ ಇಸ್ಲಾಮಿಕ್ ಸಮಾಜದ ನೈತಿಕತೆ ಮತ್ತು ಪದ್ಧತಿಗಳಿಗೆ ವಿರುದ್ಧವಾದ ಕಾನೂನುಬಾಹಿರ ಹಾಡೊಂದನ್ನು ಬಿಡುಗಡೆ ಮಾಡಿರುವುದಾಗಿ ರಾಜ್ಯದ ನ್ಯೂಸ್ ಏಜೆನ್ಸಿ IRNA 2023ರಲ್ಲಿ ಹೇಳಿತ್ತು. ಅವರ ಪ್ರಸಿದ್ಧ ಹಾಡು ಬಿಡುಗಡೆಯಾದ ನಾಲ್ಕು ದಿನಗಳ ನಂತರ ಅವರನ್ನು ಬಂಧಿಸಲಾಗಿತ್ತು.