ಉಪ್ಪಿನಂಗಡಿ: ಇತ್ತೀಚೆಗೆ ಮಕ್ಕಳ ಕಳ್ಳರ ಸಂಖ್ಯೆ ಜಾಸ್ತಿಯಾಗಿಬಿಟ್ಟಿದೆ. ಯಾವ ಸಂದರ್ಭದಲ್ಲಾದರೂ ಮಕ್ಕಳನ್ನು ಅಪಹರಣ ಮಾಡಬಹುದು ಅನ್ನೊದಕ್ಕೆ ಉದಾಹರಣೆಯೆಂಬಂತಿದೆ ಉಪ್ಪಿನಂಗಡಿಯಲ್ಲಿ ನಡೆದ ಈ ಘಟನೆ. ಕಾರಿನಲ್ಲಿ ಬಂದ ಮಕ್ಕಳ ಅಪಹರಣಕಾರರು ಉಪ್ಪಿನಂಗಡಿಯ ಮಠ ಎಂಬಲ್ಲಿಂದ ಬಾಲಕನನ್ನು ಅಪಹರಣ ಮಾಡಲು ಯತ್ನಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡ ಬಾಲಕ ಹೇಗೋ ಬಚಾವ್ ಆಗಿದ್ದಾನೆ. ಹಿರ್ತಡ್ಕದ ಜನತಾ ಕಾಲನಿಯ ಸಿಫಾನ್ (14) ಅಪಹರಣ ಯತ್ನಕ್ಕೆ ಒಳಗಾದ ಬಾಲಕ ಎನ್ನಲಾಗಿದೆ. ಸಿಫಾನ್ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಓಮ್ನಿ ಕಾರು ಬಂದಿದೆ. ತಕ್ಷಣವೇ ಓಮ್ನಿಯಲ್ಲಿದ್ದಾಗ ಇಳಿದು ಬಾಲಕ ಕೈ ಹಿಡಿದು ಎಳೆದಿದ್ದಾನೆ.ಓಮ್ನಿ ಕಾರು ಬಾಲಕನಿಗೆ ಅಡ್ಡವಾಗಿ ನಿಂತಿದ್ದು, ಅವರಿಂದ ಬಿಡಿಸಿಕೊಂಡು ಬಾಲಕ ಓಡಿ ಬಂದಿದ್ದಾನೆ. ಮನೆಗೆ ಬಂದ ಬಾಲಕ ಮನೆಯರಿಗೆ ವಿಷಯ ತಿಳಿಸಿದ್ದಾನೆ. ಓಮ್ನಿ ಕಾರು ಘಟನಾ ಸ್ಥಳದಿಂದ ತಪ್ಪಿಸಿಕೊಂಡಿದ್ದು ಬೆಂಗಳೂರಿಗೆ ಹೋಗಿದೆ ಎನ್ನಲಾಗಿದೆ