ಅಮ್ಮನ ನೆನಪಾಗಿ ಕಣ್ಣೀರಿಟ್ಟ ಸೆರೆಸಿಕ್ಕ ಪಾಕಿಸ್ತಾನಿ ಉಗ್ರ

4

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ವಲಯದಲ್ಲಿ ಭಾರತೀಯ ಸೇನಾ ಪಡೆಯು ನಡೆಸಿದ ಕಾರ್ಯಾಚರಣೆ ಸಂದರ್ಭದಲ್ಲಿ ಸೆರೆ ಸಿಕ್ಕ ಹದಿವಯಸ್ಸಿನ ಭಯೋತ್ಪಾದಕನು ಈಗ ಅಮ್ಮನ ನೆನಪಾಗಿ ಕಣ್ಣೀರಿಟ್ಟ ಘಟನೆ ನಡೆದಿದೆ. ಬಾಬರ್ ಎಂಬ ಉಗ್ರ ತನ್ನ ತಾಯಿಯ ಬಳಿಗೆ ವಾಪಸ್ ಕರೆದೊಯ್ಯುವಂತೆ ಭಾರತಕ್ಕೆ ತನ್ನನ್ನು ಕಳಿಸಿದವರಿಗೆ ಮನವಿ ಮಾಡಿರುವ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆಗೊಳಿಸಿದೆ.

ಸೆರೆಸಿಕ್ಕವ ಹೇಳಿದ್ದೇನು?

ಕಾಶ್ಮೀರ ಪರಿಸ್ಥಿತಿ ಬಗ್ಗೆ ಪಾಕಿಸ್ತಾನದ ಸೇನೆ, ಎಲ್‌ಇಟಿ ಹಾಗೂ ಐಎಸ್ಐ ಸುಳ್ಳು ಮಾಹಿತಿಯನ್ನು ಹರಡುತ್ತಿರುವುದಾಗಿ ಬಾಬರ್ ಹೇಳಿರುವುದು ಈ ವಿಡಿಯೊದಲ್ಲಿದೆ. ಹಣಕಾಸಿನ ಸಮಸ್ಯೆಯಿಂದಾಗಿ ಶಾಲೆಯನ್ನು ತೊರೆದು ಭಯೋತ್ಪಾದಕರ ಸಹವಾಸಕ್ಕೆ ಬಂದಿದ್ದಾಗಿ ಹೇಳಿದ್ದಾನೆ. ನನ್ನನ್ನು ಭಾರತಕ್ಕೆ ಕಳುಹಿಸಿದ್ದರೋ ಅದೇ ರೀತಿ ವಾಪಸ್ ನನ್ನ ತಾಯಿಯ ಬಳಿಗೆ ಕರೆದೊಯ್ಯಬೇಕು ಎಂದು ಲಷ್ಕರ್ ಎ ತಯಬಾ ಏರಿಯಾ ಕಮಾಂಡರ್, ಐಎಸ್ಐ ಹಾಗೂ ಪಾಕಿಸ್ತಾನದ ಸೇನೆಗೆ ಮನವಿ ಮಾಡುತ್ತಿದ್ದೇನೆ ಎಂದು ಭಯೋತ್ಪಾದಕ ಅಲಿ ಬಾಬರ್ ಪಾಕಿಸ್ತಾನಕ್ಕೆ ಮನವಿ ಮಾಡಿರುವ ವಿಡಿಯೊ ಸಂದೇಶವನ್ನು ಬುಧವಾರ ಭಾರತೀಯ ಸೇನೆ ಬಿಡುಗಡೆ ಮಾಡಿದೆ.

Related Articles

Latestಕ್ರೈಂದೇಶ-ಪ್ರಪಂಚದೇಶ-ವಿದೇಶರಾಜ್ಯ

ತಲೆಗೆ ಗುಂಡು ತಗುಲಿ ಕರ್ನಾಟಕ ಮೂಲದ ಯೋಧ ಸಾವು..! ‘ಮಿಸ್‌ಫೈರ್‌’ ಎಂದ ಸೇನಾಧಿಕಾರಿ..!

ನ್ಯೂಸ್‌ ನಾಟೌಟ್: ಬೆಳಗಾವಿಯ ಮೂಡಲಗಿ ತಾಲೂನಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಬುಧವಾರ...

Latestಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅತಿಯಾದ ಸಾಲ ಮಾಡಿದ್ದ ಕುಡುಕ ಗಂಡ..! ಸಾಲ ವಸೂಲಿಗೆ ಬರ್ತಿದ್ದ ಯುವಕನನ್ನೇ ಮದುವೆಯಾದ ಮಹಿಳೆ..!

ನ್ಯೂಸ್‌ ನಾಟೌಟ್: ಗಂಡನ ಅತಿಯಾದ ಮದ್ಯಪಾನದ ಚಟದಿಂದ ಬೇಸತ್ತಿದ್ದ ಪತ್ನಿ, ಆತನ ಸಾಲ ವಸೂಲಿಗೆ ಬರುತ್ತಿದ್ದ...

Latestದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಆಂಧ್ರದ ಓಂಗೋಲ್ ತಳಿಯ ಹಸು ಬ್ರೆಜಿಲ್‌ ನಲ್ಲಿ 41 ಕೋಟಿಗೆ ಹರಾಜು..! ಜಗತ್ತಿನ ಅತೀ ದುಬಾರಿ ಹಸು..!

ನ್ಯೂಸ್‌ ನಾಟೌಟ್: ಆಂಧ್ರಪ್ರದೇಶದ ಓಂಗೋಲ್ ತಳಿಯ ಹಸು, ಬ್ರೆಜಿಲ್‌ ನಲ್ಲಿ 41 ಕೋಟಿಗೆ ಹರಾಜಾಗಿದೆ. ಇದೀಗ...

Latestಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್

ಅನುಮಾನಗೊಂಡು ಸ್ಮಶಾನದಲ್ಲಿ ಸಿಸಿಟಿವಿ​ ಅಳವಡಿಸಿದ ಸ್ಥಳೀಯರಿಗೆ ಕಂಡದ್ದೇನು..?

ನ್ಯೂಸ್‌ ನಾಟೌಟ್: ಮಧ್ಯಪ್ರದೇಶದ ಭೋಪಾಲ್ ​ನ ಗ್ರಾಮವೊಂದರ ಸ್ಮಶಾನದಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಜನರಿಗೆ ಅನುಮಾನ...

@2025 – News Not Out. All Rights Reserved. Designed and Developed by

Whirl Designs Logo