ಕರಾವಳಿ

ತಾಯಿ ಕಣ್ಣೆದುರೇ ಪ್ರಾಣ ಬಿಟ್ಟ ಬಾಲಕ,ಬಟ್ಟೆ ಒಗೆಯಲೆಂದು ಹೊಳೆಗೆ ಹೋದಾಗ ದುರ್ಘಟನೆ

ನ್ಯೂಸ್ ನಾಟೌಟ್ :ತಾಯಿ ಜೊತೆ ಹೊಳೆ ಬದಿಗೆ ಹೋಗಿದ್ದ ಬಾಲಕನೊಬ್ಬ ಅಮ್ಮನ ಕಣ್ಣೆದುರೇ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮದ್ದೋಡಿಯಲ್ಲಿ ನಡೆದ ಈ ಘಟನೆಯಲ್ಲಿ ಅನಿಲ್ ಎಂಬ ಏಳು ವರ್ಷದ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.

ಏನಿದು ಘಟನೆ ?


ತಾಯಿ ಬಟ್ಟೆ ಒಗೆಯಲೆಂದು ಹೊಳೆ ಬದಿಗೆ ಹೊರಟಾಗ ಅನಿಲ್ ಕೂಡಾ ಅವರ ಜತೆ ಹೊರಟಿದ್ದ. ಅಮ್ಮ ಹೊಳೆ ಬದಿಯಲ್ಲಿ ನಿಂತು ಬಟ್ಟೆ ತೊಳೆಯುತ್ತಿದ್ದಂತೆಯೇ ಮಗ ಅನಿಲ್‌ ತಾನು ನೀರಿನಲ್ಲಿ ಆಟವಾಡುತ್ತಾ ಕೂತಿರುವುದಾಗಿ ಹೇಳಿದ್ದ. ಹೀಗೆ ಕಲ್ಲಲ್ಲಿ ಕೂತಿದ್ದಾಗ ಆಯತಪ್ಪಿ ನೀರಿಗೆ ಬಿದ್ದಿದ್ದಾನೆ.ಅಮ್ಮನಿಗೆ ಕೂಡಲೇ ಮಗು ನೀರಿಗೆ ಬಿದ್ದಿರುವುದು ಗೊತ್ತಾದರೂ ಆಕೆ ಆ ಕಡೆ ನುಗ್ಗಿ ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗದೆ ಮಗು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ
ಸ್ಥಳಕ್ಕೆ ಬೈಂದೂರು ಪೋಲಿಸರು ಭೇಟಿ ನೀಡಿದ್ದಾರೆ.

Related posts

ಪುತ್ತೂರು:ನಾನು ಯಾರಿಗೂ ಬುದ್ದಿ ಕಲಿಸುತ್ತೇನೆ ಅಂದಿಲ್ಲ,ಭ್ರಷ್ಟಾಚಾರಿಗಳಿಗೆ ಬುದ್ದಿ ಕಲಿಸುತ್ತೇನೆ ಎಂದಿದ್ದೆ-ಅಶೋಕ್ ರೈ

ಸುಳ್ಯ: ಎನ್ನೆಂಸಿ ನೇಚರ್ ಕ್ಲಬ್ ನಿಂದ ಪರಿಸರ ಜಾಗೃತಿ ಶಿಕ್ಷಣ ಕನ್ನಡ ಪೆರಾಜೆ ಶಾಲಾ ವಠಾರದಲ್ಲಿ ಗಿಡ ನಾಟಿ, ಉತ್ತಮ ಪೋಷಣೆಗೆ ವಿಶೇಷ ಬಹುಮಾನ

ಬೆಳ್ಳಂ ಬೆಳಗ್ಗೆ ಹಾಸ್ಟೆಲ್ ಗೆ ನುಗ್ಗಿ ಹುಡುಗಿಯರ ಜತೆ ಮಲಗಲೆತ್ನಿಸಿದ..! ಆ ಯುವಕನಿಗೆ ಮುಂದೆನಾಯ್ತು ಗೊತ್ತಾ..?