ಕ್ರೈಂದೇಶ-ವಿದೇಶವೈರಲ್ ನ್ಯೂಸ್

8 ವರ್ಷದ ಬಾಲಕಿ ಮೇಲೆ 12 ಮತ್ತು 13 ವರ್ಷದ ಸಹಪಾಠಿಗಳಿಂದ ಗ್ಯಾಂಗ್ ರೇಪ್ ಆ್ಯಂಡ್ ಮರ್ಡರ್..! ನಾಪತ್ತೆಯಾಗಿದ್ದ ಮಗುವಿನ ಶವ ಇನ್ನೂ ಪತ್ತೆಯಾಗಿಲ್ಲ..?

ನ್ಯೂಸ್ ನಾಟೌಟ್: ಅಪ್ರಾಪ್ತೆ ಮೇಲೆ ಅಪ್ರಾಪ್ತರೇ ಗ್ಯಾಂಗ್​ ರೇಪ್​​​​​​​​ ನಡೆಸಿರುವ ಘಟನೆ ಆಂಧ್ರಪ್ರದೇಶದಲ್ಲಿ ವರದಿಯಾಗಿದ್ದು, ಜನರನ್ನು ಬೆಚ್ಚಿಬಿಳಿಸಿದೆ. 8 ವರ್ಷದ ಶಾಲಾ ಬಾಲಕಿಯ ಮೇಲೆ 12 ಮತ್ತು 13 ವರ್ಷದ ಮೂವರು ಹಿರಿಯ ಸಹಪಾಠಿಗಳು ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಹತ್ಯೆಗೈದಿರುವ ಘಟನೆ ನಂದ್ಯಾಲ ಜಿಲ್ಲೆಯಲ್ಲಿ ನಡೆದಿದೆ.

ಬಾಲಕಿಯ ಶವವನ್ನು ನೀರಾವರಿ ಕಾಲುವೆಯಲ್ಲಿ ಬಿಸಾಡಿರುವುದಾಗಿ ಮೂವರು ಅಪ್ರಾಪ್ತರು ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ. ಆಂಧ್ರದ ರಾಜಧಾನಿ ಅಮರಾವತಿಯಿಂದ 300 ಕಿಮೀ ದೂರದಲ್ಲಿರುವ ಮುಚ್ಚುಮರ್ರಿಯಲ್ಲಿ ಈ ಘಟನೆ ನಡೆದಿದೆ. ದುರದೃಷ್ಟವಶಾತ್ ಬಾಲಕಿಯ ಶವ ಇನ್ನೂ ಪತ್ತೆಯಾಗಿಲ್ಲ. 3ನೇ ತರಗತಿ ವಿದ್ಯಾರ್ಥಿನಿ ಭಾನುವಾರದಿಂದ(ಜುಲೈ.7) ನಾಪತ್ತೆಯಾಗಿದ್ದಳು. ಆಕೆಯ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕಿ ಮುಚ್ಚುಮರ್ರಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದಳು, ಆದರೆ ಮನೆಗೆ ಹಿಂತಿರುಗಲಿಲ್ಲ ಎಂದು ತಂದೆ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಹುಡುಕಾಟ ಆರಂಭಿಸಿ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದರೂ ಆಕೆ ಪತ್ತೆಯಾಗಿರಲಿಲ್ಲ.

ಬಾಲಕಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದುದನ್ನು ನೋಡಿ, ಮೂವರು ಸೇರಿಕೊಂಡು ಮುಚ್ಚುಮರ್ರಿ ಅಣೆಕಟ್ಟಿನ ಏಕಾಂತ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಬಾಲಕರೇ ಹೇಳಿದ್ದಾರೆ. ಬಾಲಕಿ ತನ್ನ ಪೋಷಕರಿಗೆ ಹಲ್ಲೆ ನಡೆಸಿರುವ ಬಗ್ಗೆ ತಿಳಿಸಿದರೆ ತೊಂದರೆಯಾಗಬಹುದೆಂದು ಆತಂಕಗೊಂಡು ಆಕೆಯನ್ನು ಕೊಲೆ ಮಾಡಿ ಶವವನ್ನು ಸಮೀಪದ ಕಾಲುವೆಗೆ ಎಸೆದಿದ್ದಾರೆ ಎಂದು ಬಾಲಕರು ಪೊಲೀಸರಿಗೆ ತಿಳಿಸಿದ್ದಾರೆ.

Click 👇

https://newsnotout.com/2024/07/news-anchor-divya-vasantha-arrested-kannada-news-kerala
https://newsnotout.com/2024/07/bharath-shetty-fir-kannada-news-bharath-shetty-kannada-news-rahukl-gandhi-hf
https://newsnotout.com/2024/07/dakshina-kannada-love-jihad-kannada-news-police-investigation
https://newsnotout.com/2024/07/adhar-link-with-sim-card-kannada-news-women-lost-80-k

Related posts

ಮಂಗಳೂರು: ಖ್ಯಾತ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ..! ಮೇಳದ ತಿರುಗಾಟಕ್ಕೆ ತೆರಳಿದ್ದ ವೇಳೆ ಹೃದಯಾಘಾತ

ಎರಡು ವರ್ಷದ ಮಗು ಮತ್ತು ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ !, ಕೃತ್ಯವೆಸಗಿದ ಪಾಪಿ ಪತಿಯನ್ನು ಬಂಧಿಸಿದ ಪೊಲೀಸರು

ತಡರಾತ್ರಿ ಬಿಜೆಪಿ ಸಂಸದನಿಗೆ ಅಶ್ಲೀಲ ವಿಡಿಯೋ ಕಾಲ್ ಮಾಡಿದ ಯುವತಿ, ಹಣ ಸುಲಿಗೆಗೆ ಯತ್ನ ನಡೆಸಿದ್ದಾಕೆ ಯಾರು?