ಕರಾವಳಿಚಿಕ್ಕಮಗಳೂರು

ಮರದ ಕೊಂಬೆ ಕಡಿಯಲು ಹೋಗಿ ವ್ಯಕ್ತಿಗೆ ವಿದ್ಯುತ್ ತಂತಿ ಸ್ಪರ್ಶ,ಸಾವು, ಮರದಲ್ಲಿಯೇ ನೇತಾಡುತ್ತಿತ್ತು ವ್ಯಕ್ತಿಯ ಮೃತದೇಹ!

ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬ ಮರದ ಕೊಂಬೆ ಕಡಿಯಲು ಹೋಗಿ ವಿದ್ಯುತ್ ತಂತಿ ಸ್ಪರ್ಶ ತಗುಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ವಿದ್ಯುತ್ ಸ್ಪರ್ಶವಾದ ಪರಿಣಾಮ ಮರದ ಮೇಲೆಯೇ ವ್ಯಕ್ತಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹುಯಿಲುಮನೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಲೋಕಪ್ಪ ಗೌಡ (56) ಸಾವನ್ನಪ್ಪಿದ ವ್ಯಕ್ತಿಯೆಂದು ತಿಳಿದು ಬಂದಿದೆ.

ವಿದ್ಯುತ್ ತಂತಿಗೆ ಮರದ ಕೊಂಬೆಗಳು ತಾಗುತ್ತಿವೆ.ಇದೀಗ ಮಳೆಗಾಲ ಆಗಿರೋದ್ರಿಂದ ತುಂಬಾ ಆಗಾಗ ವಿದ್ಯುತ್ ಕೈ ಕೊಡುತ್ತೆ ಎನ್ನುತ್ತಾ ಕಡಿಯಲು ಹೋಗಿ ಈ ಅವಘಡ ಸಂಭವಿಸಿದೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯರು ಜಮಾಯಿದ್ದು ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಅವರು ಅದಾಗಲೇ ಪ್ರಾಣವನ್ನು ಕಳೆದುಕೊಂಡಿದ್ದರು.

ಕೆಲ ಕಾಲ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಮರದಲ್ಲಿಯೇ ನೇತಾಡುತ್ತಿರುವ ಲೋಕಪ್ಪ ಗೌಡರ ಮೃತ ದೇಹ ನೇತಾಡುತ್ತಿತ್ತು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ಊರಲ್ಲಿ ವಿದ್ಯುತ್ ತಂತಿ ಸ್ಪರ್ಶದಿಂದ ಹಲವರು ಪ್ರಾಣ ಕಳೆದುಕೊಂಡಿದ್ದು, ಎಚ್ಚರ ವಹಿಸುವ ಅನಿವಾರ್ಯತೆಯಿದೆ.ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.

Related posts

ಮೂರು ಇಂಚು ಎತ್ತರವಾಗಲು 12 ಕೋಟಿ ರು. ವೆಚ್ಚ ಮಾಡಿದ ಭೂಪ..!

ನಟಿ ಲೀಲಾವತಿ ಅಂತಿಮ ದರ್ಶನ ಪಡೆದ ವಿನೋದ್‌ ರಾಜ್ ಪತ್ನಿ,ಮಗ-ಲೀಲಮ್ಮ ಸೊಸೆ ಎಲ್ಲಿಯವರು?ಮೊಮ್ಮಗ ಈಗ ಏನ್ಮಾಡ್ತಿದ್ದಾರೆ? ಇಲ್ಲಿದೆ ಡಿಟೇಲ್ಸ್..

ಪೊಲೀಸರು ಗಲ್ಲಿಗಲ್ಲಿಯಲ್ಲಿ ಹುಡುಕುತ್ತಿದ್ದರೆ ರೌಡಿಶೀಟರ್ ಮರ ಏರಿ ನಿದ್ರಿಸುತ್ತಿದ್ದ..! ಫೈರಿಂಗ್ ಮಾಡಿ ಹೊಡೆದುರುಳಿಸಿದ ಪೊಲೀಸರ ರೋಚಕ ಸ್ಟೋರಿ..!