Uncategorized

ಇಚ್ಲಂಪಾಡಿಯಲ್ಲಿ ನೀರಿಗೆ ಬೆರೆತ ರಾಸಾಯನಿಕ ಪದಾರ್ಥ:ನೂರಾರು ಜಲಚರಗಳ ಮಾರಣಹೋಮ

ನ್ಯೂಸ್ ನಾಟೌಟ್: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಟ್ಯಾಂಕರ್ನಿಂದ ಹರಿಯುವ ನೀರಿಗೆ ರಸಾಯನಿಕ ಪದಾರ್ಥ ಸೇರಿ ನೂರಾರು ಜಲಚರಗಳು ಸಾವನ್ನಪ್ಪಿವೆ. ಇಂತಹ ಮನಕಲಕುವ ಘಟನೆ ನಡೆದಿದ್ದು ಕಡಬ ತಾಲೂಕಿನ  ಇಚ್ಲಂಪಾಡಿ ಗ್ರಾಮದ ಕೊರಮೇರು ಎಂಬಲ್ಲಿ.

ಏನಿದು ಘಟನೆ?

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಯಾರೋ ಟ್ಯಾಂಕರ್ನಿಂದ ಹರಿಯುವ ತೋಡಿನ ನೀರಿಗೆ ರಸಾಯನಿಕ ಪದಾರ್ಥ ಹರಿಯಬಿಟ್ಟಿದ್ದು ಇದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.ಪರಿಣಾಮ  ನೀರಿನ ಮೇಲೆ ಎಣ್ಣೆಯ ಅಂಶ ಸಹ ಕಾಣಿಸಿಕೊಂಡಿದ್ದು, ನೂರಾರು ಜಲಚರಗಳು ಸತ್ತು ತೇಲುತ್ತಿವೆ.

ತೋಡು ಗುಂಡ್ಯ ಹೊಳೆಗೆ ಸೇರುತ್ತಿದ್ದು ತೋಡಿನ ಉದ್ದಕ್ಕೂ  ಈ ಕಪ್ಪು ಮಿಶ್ರಿತ ನೀರು ಹರಿದು ಹೋಗಿದ್ದು, ನೂರಾರು ಮೀನು, ಕಪ್ಪೆ ಸೇರಿದಂತೆ ಇತರೇ ಜಲಚರಗಳು ಸತ್ತು ನೀರಿನಲ್ಲಿ ತೇಲುತ್ತಿವೆ. ಕೆಲವು ಸ್ಥಳೀಯರು ಪಾತ್ರೆ ತೊಳೆಯಲು, ಬಟ್ಟೆ ಒಗೆಯಲು ಈ ನೀರಿಗೆ  ಅವಲಂಬಿತರಾಗಿದ್ದಾರೆ.ಇದರಿಂದ ಅಲ್ಲಿನ ಸ್ಥಳೀಯರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಟ್ಯಾಂಕರ್ನಿಂದ ತೋಡಿಗೆ ರಸಾಯನಿಕ ಹರಿಯಬಿಡಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದು ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತ್ಗೆ ಮಾಹಿತಿ ನೀಡಿದ್ದಾರೆ.

Related posts

ಮಂಗಳೂರಿನ ಕೂಳೂರಿನ ಸೇತುವೆ ಬಳಿ ಮುಮ್ತಾಜ್ ಅಲಿ ಶವ ಪತ್ತೆ, ಎರಡು ದಿನಗಳ ಬಳಿಕ ನೀರಿನಾಳದಲ್ಲಿ ಸಿಕ್ಕಿದ ದೇಹ..! ವಿಡಿಯೋ ವೀಕ್ಷಿಸಿ

Priyanka Gandhi: ಕಾಂಗ್ರೆಸ್‌ ನಾಯಕಿ ಪ್ರಿಯಾಂಕ ಗಾಂಧಿಗೆ ಅನಾರೋಗ್ಯ, ಆಸ್ಪತ್ರೆಗೆ ದಾಖಲು..!ಭಾರತ್​ ಜೋಡೋ ನ್ಯಾಯ ಯಾತ್ರೆಯಲ್ಲೂ ಪಾಲ್ಗೊಂಡಿಲ್ಲ;ಆಗಿದ್ದೇನು?

ಮಹಿಳೆಯರಿಗೆ ಶುಭ ಸುದ್ದಿ..!ಕೇಂದ್ರ ಸರಕಾರದಿಂದ ತಿಂಗಳಿಗೆ 35 ಸಾವಿರ ರೂ.; ಇದರ ಪ್ರಯೋಜನವನ್ನು ಯಾರೆಲ್ಲ ಪಡೆದುಕೊಳ್ಳಬಹುದು?ಈ ವರದಿ ನೋಡಿ..