ಕರಾವಳಿ

ಭೂಕಂಪಕ್ಕೂ ಮುನ್ನ ಮನೆ ಮೇಲೆ ಕುಸಿದ ಭಾರೀ ಗುಡ್ಡ..!

ನ್ಯೂಸ್ ನಾಟೌಟ್ : ಚೆಂಬು ಗ್ರಾಮದಲ್ಲಿ ಮನೆಯೊಂದರ ಮೇಲೆ ಗುಡ್ಡ ಕುಸಿದ ಘಟನೆ ಇದೀಗ (ಸೋಮವಾರ ಸಂಜೆ) ನಡೆದಿದೆ. ಕಟ್ಟೆಪಾರೆ ಜನಾರ್ಧನ ನಾಯ್ಕ್ ಅವರ ಮನೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುರಂತ ಸಂಭವಿಸಿದೆ. ಇಂದು ಸಂಜೆ ಭೂಕಂಪ ಆಗುವ ಕೆಲವೇ ನಿಮಿಷಗಳ ಮುನ್ನ ಇವರ ಮನೆಯ ಮೇಲೆ ಗುಡ್ಡ ಕುಸಿದಿದೆ ಎನ್ನಲಾಗಿದೆ.

ಕಳೆದ ಕೆಲವು ದಿನಗಳಿಂದ ಗುಡ್ಡ ಕುಸಿಯುವ ಭೀತಿ ಇದ್ದುದರಿಂದ ಅವರು ಮನೆ ಬಿಟ್ಟು ಕುದರೆಪಾಯಕ್ಕೆ ಹೋಗಿ ವಾಸವಿದ್ದರು ಎನ್ನಲಾಗಿದೆ. ಚೆಂಬು ಗ್ರಾಮದಲ್ಲಿ ಒಂದು ಕಡೆ ಸರಣಿ ಭೂಕಂಪ, ಮತ್ತೊಂದು ಕಡೆ ಜೋರಾಗಿ ಸುರಿಯುತ್ತಿರುವ ಮಳೆಯಿಂದ ಜನ ತತ್ತರಿಸಿದ್ದಾರೆ.

Related posts

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವ ಅವರಿಗೆ ಪಿತೃ ವಿಯೋಗ

ಸಿದ್ದರಾಮಯ್ಯ ವಿರುದ್ಧ ಹಿಂದೂ ಕಾರ್ಯಕರ್ತರ ಹತ್ಯೆ ಆರೋಪ ಪ್ರಕರಣ! ಹರೀಶ್ ಪೂಂಜಾ ವಿರುದ್ಧ ಕೇಸ್ ಗೆ ಹೈಕೋರ್ಟ್ ತಡೆ!

ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ನಲ್ಲಿ ಸುಳ್ಯದ ವೈದ್ಯೆಯ ಪುಸ್ತಕ ಪರಿಚಯ, ಡಾ | ವೀಣಾ ಬರೆದ ಆ ಪುಸ್ತಕದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಓದಿ