ಕರಾವಳಿ

ನಾಳೆಯಿಂದ ಎಂದಿನಂತೆ ಅಂಗನವಾಡಿ, ಶಾಲೆ, ಕಾಲೇಜು

500

ನ್ಯೂಸ್ ನಾಟೌಟ್: ನಾಳೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳು ಎಂದಿನಂತೆ ತೆರೆದಿರಲಿದೆ. ಕಳೆದ ಕೆಲವು ದಿನಗಳಿಂದ ಬಿರುಸುಗೊಂಡಿದ್ದ ಮಳೆಯು ಕಡಿಮೆಗೊಂಡಿರುವುದರಿಂದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ಎಂಟು ದಿನಗಳಿಂದ ಶಾಲೆಗಳಿಗೆ ನಿರಂತರವಾಗಿ ರಜೆ ನೀಡಲಾಗಿದ್ದು, ಮಳೆಯ ಪ್ರಮಾಣ ಕಡಿಮೆಗೊಂಡು ರೆಡ್ ಅಲೆರ್ಟ್ ನಿಂದ ಆರೆಂಜ್ ಅಲರ್ಟ್ ಗೆ ಬದಲಾವಣೆಗೊಂಡ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ನಾಳೆ ಎಂದಿನಂತೆ ತರಗತಿ ನಡೆಯಲಿದೆ. ಸ್ಥಳೀಯವಾಗಿ ಸಮಸ್ಯೆಗಳಿದ್ದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.

See also  ಕೇರಳದಲ್ಲಿ ಒಂದೇ ದಿನ 300 ಸಕ್ರಿಯ ಕೋವಿಡ್ ಪ್ರಕರಣ ಪತ್ತೆಯಾಯ್ತಾ..? ಮಂಗಳೂರಿನಲ್ಲೂ ಕೋವಿಡ್ ಪ್ತತೆ..! ಇಲ್ಲಿದೆ ಸಂಪೂರ್ಣ ಮಾಹಿತಿ
Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget