Uncategorized

ಚಾರ್ಲಿ ಸಿನೆಮಾ ನೋಡಿದ ಸಿಎಂ ಬೊಮ್ಮಾಯಿಗೆ ನೆನಪಾಗಿದ್ದು ಸನ್ನಿ..!

ನ್ಯೂಸ್ ನಾಟೌಟ್: ಚಾರ್ಲಿ 777 ಸಿನಿಮಾ ಭಾರಿ ಸದ್ದು ಮಾಡಿದೆ. ಶ್ವಾನ ಮತ್ತು ಮನುಷ್ಯನ ನಡುವಿನ ಗಟ್ಟಿ ಸಂಬಂಧವನ್ನು ಈ ಸಿನಿಮಾದಲ್ಲಿ ಅತ್ಯಂತ ಭಾವನಾತ್ಮಕವಾಗಿ ಚಿತ್ರಿಸಲಾಗಿದೆ. ಈ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಚಾರ್ಲಿ 777 ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿನಿಮಾ ವೀಕ್ಷಣೆಯ ಬಳಿಕ ಮಾತನಾಡಿರುವ ಬಸವರಾಜ್ ಬೊಮ್ಮಾಯಿ . ರಕ್ಷಿತ್ ಶೆಟ್ಟಿ ಚೆನ್ನಾಗಿ ನಟಿಸಿದ್ದಾರೆ. ನಾನು ಶ್ವಾನ ಪ್ರಿಯ, ಸಿನಿಮಾ ನೋಡಿದಾಗ ನಮ್ಮ ಮನೆಯಲ್ಲಿರುವ ಸನ್ನಿ ನಾಯಿ ನೆನಪಾಯಿತು. ಈಗ ಸನ್ನಿ ಇಲ್ಲ. ದಿಯಾ ಅನ್ನುವ ಮತ್ತೊಂದು ಶ್ವಾನವನ್ನು ಸಾಕುತ್ತಿದ್ದೇವೆ. ಚಾರ್ಲಿ ರೀತಿಯಲ್ಲಿಯೇ ದಿಯಾ ನಾನು ಮನೆಗೆ ಬಂದಾಗ ಓಡಿ ಬಂದು ತಬ್ಬಿಕೊಳ್ಳುತ್ತೆ ಎಂದು ಬೊಮ್ಮಾಯಿ ತಿಳಿಸಿದರು.

Related posts

‘ಕಾನ್ಫಿಡೆನ್ಸ್‌ ಇತ್ತು, ಆದರೆ ನಾನು ಮೆಂಟಲಿ ವೀಕ್​ ಆಗಿದ್ದೆ..’ಎಂದಿದ್ಯಾಕೆ ಕಾರ್ತಿಕ್ ಮಹೇಶ್?,ಬಿಗ್​ ಬಾಸ್​ 10 ವಿನ್ನರ್​ ಬಿಚ್ಚಿಟ್ರು ಮನದಾಳದ ನೋವು..ಈ ಸ್ಟೋರಿ ಓದಿ..

ಭಾರತೀಯ ಯೋಧನ ಹನಿಟ್ರ್ಯಾಪ್ ಗೆ ಬೀಳಿಸಿದ ಪಾಕಿಸ್ತಾನದ ಆಂಟಿ..!

ಬೆಂಗಳೂರಿನಲ್ಲಿ ಮತ್ತೆ ಹೆಚ್ಚುತ್ತಿರುವ ಕರೋನಾ, ಲಾಕ್ ಡೌನ್, ನೈಟ್ ಕರ್ಫ್ಯೂ ಅಳವಡಿಕೆ ಸಾಧ್ಯತೆ