ಜೀವನಶೈಲಿಸಿನಿಮಾ

ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ ‘ಚಾರ್ಲಿ 777’ ಸಿನಿಮಾದ ನಿರ್ದೇಶಕ, ಸುಳ್ಯ ಕೇರ್ಪಳ ಮೂಲದ ಕಿರಣ್ ರಾಜ್ ಅನಯಾ ವಸುಧಾ ಜೊತೆ ಎಂಗೇಜ್

248

ನ್ಯೂಸ್‌ ನಾಟೌಟ್‌: ಕನ್ನಡದ ಸೂಪರ್ ಹಿಟ್ ಸಿನಿಮಾ ಚಾರ್ಲಿ-777 ಚಿತ್ರದ ನಿರ್ದೇಶಕ ಕಿರಣ್ ರಾಜ್ (Kiranraj) ಅವರ ನಿಶ್ಚಿತಾರ್ಥ ನೆರವೇರಿದೆ. ಕಾಸರಗೋಡು ಮೂಲದ ಅನಯಾ ವಸುಧಾ (Anaya Vasudha) ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಮಂಗಳೂರಿನ (Mangaluru) ಖಾಸಗಿ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ಸರಳವಾಗಿ ನಡೆದಿದ್ದು, ಉಂಗುರ ಬದಲಾಯಿಸುವುದರ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಸ್ನೇಹಿತರು ಫ್ಯಾಮಿಲಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು,ಇವರಿಗೆ ಶುಭ ಹಾರೈಸಿದ್ದಾರೆ. ನಿರ್ದೇಶಕ ಕಿರಣ್ ರಾಜ್ ಅವರು ಸುಳ್ಯ ಕೇರ್ಪಳದ ದಿ. ಅಚ್ಚುತ ಮಣಿಯಾಣಿ ಹಾಗೂ ಶ್ರೀಮತಿ ಗೋದಾವರಿ ದಂಪತಿಯ ಹಿರಿಯ ಪುತ್ರರಾಗಿದ್ದು,ಸದ್ಯ ಕಿರಣ್ ರಾಜ್ ಅವರು ಮಂಗಳೂರಿನಲ್ಲಿ ನೆಲೆಸಿದ್ದಾರೆ‌.

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ ಚಾರ್ಲಿ 777 ಸಿನಿಮಾವನ್ನು ಕಿರಣ್ ನಿರ್ದೇಶನ ಮಾಡಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದ ಇವರು ಎಲ್ಲರ ಗಮನ ಸೆಳೆದಿದ್ದರು. ವಿಭಿನ್ನ ಕಥಾ ಹಂದರವಿದ್ದ, ಚಾರ್ಲಿ ಸಿನಿಮಾ ಸೂಪರ್ ಹಿಟ್ ಆಗಿ ಕಿರಣ್ ಅವರಿಗೆ ಚಂದನವನದಲ್ಲಿ ಹೆಸರು ತಂದುಕೊಟ್ಟಿತ್ತು.

See also  ದರ್ಶನ್ ಪ್ರಕರಣ: ಪ್ರತ್ಯಕ್ಷ ದರ್ಶಿಗಳನ್ನು ಹೊರತು ಪಡಿಸಿ ಬರೋಬ್ಬರಿ 200 ಕ್ಕೂ ಹೆಚ್ಚು ಸಾಕ್ಷಿಗಳ ಸಂಗ್ರಹ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget