ಕ್ರೈಂಬೆಂಗಳೂರುರಾಜ್ಯಸಿನಿಮಾ

ದರ್ಶನ್ ಪ್ರಕರಣ: ಪ್ರತ್ಯಕ್ಷ ದರ್ಶಿಗಳನ್ನು ಹೊರತು ಪಡಿಸಿ ಬರೋಬ್ಬರಿ 200 ಕ್ಕೂ ಹೆಚ್ಚು ಸಾಕ್ಷಿಗಳ ಸಂಗ್ರಹ..! ಇಲ್ಲಿದೆ ಸಂಪೂರ್ಣ ಮಾಹಿತಿ

185

ನ್ಯೂಸ್‌ ನಾಟೌಟ್‌: ರೇಣುಕಾಸ್ವಾಮಿ ಕೊಲೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಾಕಷ್ಟು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದು, ದರ್ಶನ್ (Renukaswamy) ಮತ್ತು ಗ್ಯಾಂಗ್‍ (Darshan Thoogudeepa) ಕೊಲೆ ಮಾಡಿದೆ ಅನ್ನೋದಕ್ಕೆ ಈಗಾಗಲೇ 180ಕ್ಕೂ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಲಾಗಿತ್ತು. ಈಗ ಸಾಕ್ಷಿಗಳ 200 ಗಡಿ ದಾಟಿವೆ ಎಂದು ವರದಿ ತಿಳಿಸಿದೆ.

ಪ್ರಕರಣದಲ್ಲಿ ಇದುವರೆಗೂ 180 ಕ್ಕೂ ಹೆಚ್ಚು ವಸ್ತುಗಳ ಸಾಕ್ಷ್ಯವಾಗಿ ಸಂಗ್ರಹವಾಗಿದೆ. ಪ್ರತ್ಯಕ್ಷ ದರ್ಶಿಗಳು, ಪರೋಕ್ಷ ಸಾಕ್ಷಿಗಳ ಹೇಳಿಕೆ ಹೊರತುಪಡಿಸಿ 200 ಗಡಿಯಲ್ಲಿ ಸಾಕ್ಷಿಗಳ ಸಂಖ್ಯೆ ಏರಿಕೆಯಾಗಿದೆ. ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷಿಗಳ ಸಂಖ್ಯೆಯೇ 200ರ ಗಡಿ ತಲುಪಿದೆ ಎನ್ನಲಾಗಿದೆ. ಈಗಾಗಲೇ ಕೆಲವು ವಸ್ತುಗಳನ್ನ ಬೆಂಗಳೂರು ಎಫ್ ಎಸ್ ಎಲ್ ನಲ್ಲಿ ಪರೀಕ್ಷೆ ಮಾಡುತ್ತಿದ್ದು, ಇನ್ನೂ ಕೆಲವು ವಸ್ತುಗಳನ್ನ ಹೈದರಾಬಾದ್ ಎಫ್ ಎಸ್ ಎಲ್ ಗೆ ಕಳುಹಿಸಿದ್ದಾರೆ ತನಿಖಾಧಿಕಾರಿಗಳು.

ಜೈವಿಕ ಸಾಕ್ಷಿಗಳಾದ ರಕ್ತದ ಕಲೆ, ಹೇರ್ ಸ್ಯಾಂಪಲ್ ಡಿಎನ್ ಎ ಇವುಗಳ ಪರೀಕ್ಷೆ ಒಂದು ಕಡೆಯಾದರೆ, ಇನ್ನೊಂದೆಡೆ ಮೊಬೈಲ್, ಸಿಸಿಟಿವಿ ದೃಶ್ಯ, ಸೇರಿ ತಾಂತ್ರಿಕ ಸಾಕ್ಷಿಗಳ ಪರಿಶೀಲನೆ ಮಾಡಲಾಗುತ್ತಿದೆ. ಮೊಬೈಲ್ ರಿಟ್ರೀವ್ ಹಾಗೂ ಡಿವಿಆರ್ ರಿಟ್ರೀವ್ ಮೇಲೆ ತನಿಖಾ ತಂಡ ಹೆಚ್ಚು ಗಮನ ನೀಡಿದೆ ಎನ್ನಲಾಗುತ್ತಿದೆ.

Click 👇

https://newsnotout.com/2024/07/kannada-news-fake-doctors-cought-in-bagalakot-ditrict-news-police
See also  ಸಂಗೀತ ಕಾರ್ಯಕ್ರಮ ನಡೆಸುತ್ತಿರುವಾಗ ವೇದಿಕೆಯಲ್ಲಿ ನೋವಿನಿಂದ ಒದ್ದಾಡಿದ ಖ್ಯಾತ ಗಾಯಕ..! ಸೋನು ನಿಗಮ್ ಆಸ್ಪತ್ರೆಗೆ ದಾಖಲು..!
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget