ಕರಾವಳಿದೇಶ-ಪ್ರಪಂಚ

‘ನಾಗರಪಂಚಮಿ’ಯ ವಿಶೇಷ ದಿನದಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ‘ಇಸ್ರೋ’ ಹೆಸರಿನಲ್ಲಿ ಕಾರ್ತಿಕ ಪೂಜೆ..!, ಚಂದ್ರಯಾನ 3ರ ಯಶಸ್ಸಿಗಾಗಿ ಆಡಳಿತ ಮಂಡಳಿ, ಸಾರ್ವಜನಿಕರಿಂದ ಪ್ರಾರ್ಥನೆ..

ನ್ಯೂಸ್ ನಾಟೌಟ್ : ಕೋಟ್ಯಂತರ ಸಂಖ್ಯೆಯ ಭಾರತೀಯರ ಚಿತ್ತ ಈಗ ಅಪರೂಪದ ಕ್ಷಣದತ್ತ ನೆಟ್ಟಿದೆ.‘ಚಂದ್ರಯಾನ–3’ ನೌಕೆಯ ಲ್ಯಾಂಡರ್‌ ಘಟಕವನ್ನು ಚಂದ್ರನ ದಕ್ಷಿಣ ಧ್ರುವದ ಅಂಗಳಕ್ಕೆ (ಸಾಫ್ಟ್‌ ಲ್ಯಾಂಡಿಂಗ್‌) ಇಳಿಸಲು ಕೆಲವೇ ಗಂಟೆಗಳು ಬಾಕಿ ಉಳಿದಿದೆ.ಈ ಮೂಲಕ ಭಾರತೀಯರ ಚಂದ್ರಯಾನದ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ.

ಇದೇ ಆಗಸ್ಟ್ 23ರಂದು ಸಂಜೆ 6:04ಕ್ಕೆ (ಭಾರತೀಯ ಕಾಲಮಾನ) ಚಂದ್ರಯಾನ 3 (Chandrayaan 3) ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಪ್ರಕಟಿಸಿದೆ. ಈ ಅಪರೂಪದ ಕ್ಷಣಕ್ಕೆ ಎಲ್ಲರೂ ಕಾದುಕುಳಿತಿದ್ದು,ಮೈ ನವೀರೇಳಿಸುವ ಸಮಯ ಇದಾಗಲಿದೆ.ಶುಭ ಹಾರೈಕೆ ಮತ್ತು ಸಕಾರಾತ್ಮಕ ಮನೋಭಾವನೆ ಹೊಂದಿರುವುದಕ್ಕೆ ಧನ್ಯವಾದಗಳು’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್‌’ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.

ಇದೀಗ ಎಲ್ಲವೂ ಸುರಕ್ಷಿತವಾಗಿರಲಿ ಎಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ (Kukke Subrahmanya Temple) ನಾಗರ ಪಂಚಮಿಯಂದು ವಿಶೇಷ ಪೂಜೆ (Nag Panchami) ನೆರವೇರಿಸಲಾಗಿದೆ.ನಾಗರ ಪಂಚಮಿಯ ಈ ವಿಶೇಷ ದಿನದಂದು ಇಸ್ರೋ ಹೆಸರಿನಲ್ಲಿ ನಾಗ ದೇವರಿಗೆ ಕಾರ್ತಿಕ ಪೂಜೆಯನ್ನು ಸಲ್ಲಿಸಲಾಗಿದೆ.ನೂರಾರು ಮಂದಿ ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿ ಹಾಗೂ ಸಾರ್ವಜನಿಕರ ಸೇವೆ ಅಡಿ ಚಂದ್ರಯಾನ 3 ರ ಯಶಸ್ವಿಗೆ ಇಸ್ರೋ ಹೆಸರಲ್ಲಿ ಅರ್ಚನೆ ಮಾಡಲಾಗಿದೆ. ಮಾತ್ರವಲ್ಲದೇ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುತ್ತಿದ್ದು, ನಾಗ ದೇವರಿಗೆ ಹಾಲಿನ ಅಭಿಷೇಕ ಮಾಡಿ ಪೂಜೆಯನ್ನೂ ಮಾಡಲಾಗುತ್ತಿದೆ.

ಒಟ್ಟಿನಲ್ಲಿ ಬಾಹ್ಯಾಕಾಶ ಪರಿಶೋಧನೆಯಲ್ಲಿ ಒಂದು ರೋಮಾಂಚಕಾರಿ ಸಮಯವಾಗಿದ್ದು, ಭಾರತದ ಚಂದ್ರಯಾನ 3 ಇತಿಹಾಸವನ್ನು ನಿರ್ಮಿಸಲು ಸಿದ್ಧವಾಗಿದೆ. 

Related posts

ಎತ್ತಿನಹೊಳೆ ಯೋಜನೆ ಲೋಕಾರ್ಪಣೆಗೆ ಸಿಎಂ ಜೊತೆ ಹೊರಟ ವಾರ್ತಾ ಇಲಾಖೆಯ ವಾಹನದ ಬ್ರೇಕ್ ಫೇಲ್..! ಪತ್ರಕರ್ತರ ವಾಹನ ಲಾರಿಗೆ ಡಿಕ್ಕಿ..!

ಅರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ

ಜುವೆಲ್ಲರಿ ಮಳಿಗೆಯೊಳಗಿತ್ತು 26 ಕೋಟಿ ನಗದು..! 90 ಕೋಟಿ ರೂ. ಮೌಲ್ಯದ ಅನಧಿಕೃತ ಸಂಪತ್ತಿನ ದಾಖಲೆ ಐಟಿ ಅಧಿಕಾರಿಗಳ ವಶಕ್ಕೆ..! ಇಲ್ಲಿದೆ ವಿಡಿಯೋ