ವೈರಲ್ ನ್ಯೂಸ್

Chandrayaan-3: ಚಂದ್ರನಂಗಳದಲ್ಲಿ ಹೆಜ್ಜೆ ಇಡುತ್ತಿರುವ ರೋವರ್ ಕಳಿಸಿದ ಮತ್ತೊಂದು ಮಾಹಿತಿ, ಟ್ವಿಟ್ಟರ್ ನಲ್ಲಿ ಇಸ್ರೊ ಹಂಚಿಕೊಂಡಿದ್ದೇನು?

ನ್ಯೂಸ್ ನಾಟೌಟ್: Chandrayaan-3 ಯಶಸ್ವಿಯಾಗಿದೆ. ಭೂಮಿಗೆ ಸಂದೇಶವನ್ನು ಕಳಿಸುತ್ತಿದೆ. ಲ್ಯಾಂಡರ್ ನಿಂದ ಹೊರ ಬಂದ ರೋವರ್ ತನ್ನ ಕೆಲಸವನ್ನು ಸಮರ್ಪಕವಾಗಿ ಮಾಡುತ್ತಿದೆ. ಚಂದ್ರನ ಅಂಗಳದಲ್ಲೆಲ್ಲ ತನ್ನ ಹೆಜ್ಜೆ ಇಡುತ್ತಿರುವ ರೋವರ್ ಇದೀಗ ಮತ್ತೊಂದು ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.

ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ಬಳಿಕ ಲ್ಯಾಂಡರ್‌ನಿಂದ ಹೊರಬಂದ ರೋವರ್ ಮೊದಲ ಬಾರಿಗೆ ಚಂದ್ರನ ಮೇಲ್ಮೈನಲ್ಲಿನ ಮಣ್ಣಿನ ತಾಪಮಾನದ ಅವಲೋಕವನ್ನು ಮಾಡಲಾಗಿದ್ದು, ಇಸ್ರೊ ಈ ಬಗ್ಗೆ ತನ್ನ ಎಕ್ಸ್‌ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.

10 ಸೆಂ.ಮೀ ಆಳದವರೆಗಿನ ತಾಪಮಾನದ ಮಾಹಿತಿ ಹಾಗೂ ತಾಪಮಾನದಲ್ಲಿ ವ್ಯತ್ಯಾಸ ಕಂಡುಬರುವ ಬಗ್ಗೆ ಗ್ರಾಫ್‌ವೊಂದನ್ನು ಹಂಚಿಕೊಂಡಿದೆ.
‘ಇಲ್ಲಿ ಹಂಚಿಕೊಂಡಿರುವ ಗ್ರಾಫ್‌ ಚಂದ್ರನ ಮೇಲ್ಮೈನಲ್ಲಿ ತಾಪಮಾನ ಬದಲಾವಣೆಯಾಗುವ ಬಗ್ಗೆ ಹೇಳಲಾಗಿದೆ. ಇದರ ಬಗೆಗಿನ ಸಂಪೂರ್ಣ ಅಧ್ಯಯನವನ್ನು ನಡೆಸಲಾಗುತ್ತಿದೆ’ ಎಂದು ಇಸ್ರೊ ಹೇಳಿದೆ.

ಅಹಮದಾಬಾದ್‌ನ ಭೌತಿಕ ಅನುಸಂಧಾನ ಪ್ರಯೋಗಾಲಯದ (PRL) ಸಹಯೋಗದೊಂದಿಗೆ ಬಾಹ್ಯಾಕಾಶ ಭೌತಶಾಸ್ತ್ರ ಪ್ರಯೋಗಾಲಯ (SPL), ವಿಕ್ರಮ್‌ ಸಾರಾಭಾಯಿ ಬಾಹ್ಯಾಕಾಶ ಕೇಂದ್ರ (VSSC)ದಲ್ಲಿ ಅಧ್ಯಯನವನ್ನು ನಡೆಸಲಾಗುತ್ತಿದೆ ಎಂದು ಇಸ್ರೊ ಮಾಹಿತಿ ನೀಡಿದೆ.

ಸಹಜವಾಗಿಯೇ ಚಂದ್ರಯಾನ ೩ರ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಚಂದ್ರನಂಗಳದಿಂದ ಅದು ಕಳಿಸುವ ಮಾಹಿತಿಯಿಂದ ಮುಂದೊಂದು ದಿನ ದೊಡ್ಡದೊಂದು ಕ್ರಾಂತಿಯಾಗಲಿದೆ ಅನ್ನುವ ನಿರೀಕ್ಷೆ ಕೋಟ್ಯಂತರ ಭಾರತಿಯರದ್ದಾಗಿದೆ.

Related posts

ದರ್ಶನ್ ಪತ್ನಿಗೂ ನೋಟಿಸ್‌‌‌‌ ನೀಡಿ ವಿಚಾರಣೆಗೆ ಕರೆದ ಪೊಲೀಸರು..! ರೇಣುಕಾಸ್ವಾಮಿ ಕೊಲೆಯ ಬಳಿಕ ಪತ್ನಿ ವಿಜಯಲಕ್ಷ್ಮಿ ಜೊತೆ ಪೂಜೆಯಲ್ಲಿ ಭಾಗಿಯಾಗಿದ್ದ ದರ್ಶನ್..!

ಮಂದಿರದೊಳಗೆ ವೇದಿಕೆ ಕುಸಿದು ಮಹಿಳೆ ದುರಂತ ಅಂತ್ಯ, ಅನುಮತಿ ಇಲ್ಲದ ಕಾರ್ಯಕ್ರಮಕ್ಕೆ ಪೊಲೀಸರೇ ಕಾವಲು..!

ಮತ ಎಣಿಕೆ ಕೇಂದ್ರಕ್ಕೆ ವಾಮಾಚಾರ ಮಾಡಿದ್ರಾ..? ಮರದಡಿ ಸಿಕ್ಕ ವಸ್ತುಗಳನ್ನು ನೋಡಿ ಜನರಿಂದ ಆತಂಕ..!